More

    ಸತ್ಯಶುದ್ಧ ಕಾಯಕ ಯೋಗಿಯ ಸ್ಮರಣೆ

    ದಾವಣಗೆರೆ: ಆಧುನಿಕತೆಯ ಭರಾಟೆಯಲ್ಲಿ ಕಾಯಕ ಸಮಾಜಗಳು ಸಾಂಪ್ರದಾಯಿಕ ಕುಲ ಕಸುಬನ್ನು ಮರೆತಿದ್ದು, ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎ.ಚನ್ನಪ್ಪ ಹೇಳಿದರು.

    ವಿನೋಬಾನಗರದ ಮಾಚಿದೇವ ಸಮುದಾಯ ಭವನದಲ್ಲಿ ಬುಧವಾರ, ಜಿಲ್ಲಾಡಳಿತ, ಮಡಿವಾಳ ಮಾಚಿದೇವ ಸಮಾಜ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವ ಜಯಂತಿ ಉದ್ಘಾಟಿಸಿ ಮಾತನಾಡಿದರು.

    ಹನ್ನೆರಡನೇ ಶತಮಾನದಲ್ಲಿ ಶರಣರು ಕಾಯಕದ ನಂತರ ಅನುಭವ ಮಂಟಪದಲ್ಲಿ ಸೇರಿ ಸಾಮಾಜಿಕ ಚಿಂತನೆಯಲ್ಲಿ ತೊಡಗಿರುತ್ತಿದ್ದರು. ಮಾಚಿದೇವರಿಗೆ ಅಗಾಧ ಜ್ಞಾನವಿತ್ತು. ಅವರು ಪ್ರಕೃತಿ ಕಾಪಾಡುವ ಜತೆಗೆ ಸತ್ಯ, ಶುದ್ಧವಾದ ಕಾಯಕ ಮಾಡುತ್ತಿದ್ದರು ಎಂದರು.

    ಯುವ ಪೀಳಿಗೆಗೆ ಶರಣರ ಬಗ್ಗೆ ತಿಳಿ ಹೇಳುವ ಕೆಲಸ ನಮ್ಮಿಂದಲೇ ಆಗಬೇಕು. ಮಾಚಿದೇವರ ಆದರ್ಶಗಳನ್ನು ನಾವು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
    ಹಾವೇರಿ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯದ ಉಪನ್ಯಾಸಕ ತೇಜಪ್ಪ ಎನ್.ಮಡಿವಾಳರ ಉಪನ್ಯಾಸ ನೀಡಿ, ಮಾಚಿದೇವರು ಪವಾಡ ಪುರುಷರಲ್ಲ, ಕಾಯಕ ಮತ್ತು ದಾಸೋಹ ಪ್ರಿಯರು ಎಂದರು.

    ಕಲ್ಯಾಣ ಕ್ರಾಂತಿಯಲ್ಲಿ ವಚನದ ಕಟ್ಟುಗಳನ್ನು ರಕ್ಷಿಸುವ ಮೂಲಕ ಮಾಚಿದೇವರು ಸಮಾಜದ ಎಲ್ಲ ಸ್ತರದವರ ಕಲುಷಿತ ಬಟ್ಟೆ, ಮನಸ್ಸನ್ನು ಸ್ವಚ್ಛ ಮಾಡುತ್ತ ಸರೋವರಕ್ಕೆ ಸಮಾನವಾದ ವ್ಯಕ್ತಿ ಎಂದೆನಿಸಿಕೊಂಡರು.

    ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಪಡೆದ ಮಡಿವಾಳ ಸಮಾಜದ ಎಸ್.ಹರ್ಷಕುಮಾರ್, ಎಂ.ಕಿರಣ್ ಅವರನ್ನು ಸನ್ಮಾನಿಸಲಾಯಿತು.

    ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ಎಂ.ನಾಗೇಂದ್ರಪ್ಪ, ಕಾರ್ಯಾಧ್ಯಕ್ಷ ಎಚ್.ಜಿ.ಉಮೇಶ್, ರಾಮಚಂದ್ರಪ್ಪ ಹುಲಿಕಟ್ಟೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಐಗೂರು ಗ್ರಾಪಂ ಸದಸ್ಯೆ ಗೌರಮ್ಮ ರುದ್ರೇಶ್, ಬಾತಿ ಶಂಕರ್, ಡೈಮಂಡ್ ಮಂಜುನಾತ್, ಸುಭಾಷ್, ಎನ್.ಓಂಕಾರಪ್ಪ, ಅಂಜಿನಪ್ಪ ಪೂಜಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts