More

    ಹಿರಿಯ ವೈದ್ಯೆ ಡಿಜಿಟಲ್ ಆರೆಸ್ಟ್; 27 ಲಕ್ಷ ಧೋಖಾ

    ಬೆಂಗಳೂರು: ಹಿರಿಯ ವೈದ್ಯೆಗೆ ಮುಂಬೈ ಪೊಲೀಸರ ಸೋಗಿನಲ್ಲಿ ಕರೆ ಮಾಡಿದ ಸೈಬರ್ ಕಳ್ಳರು, ಕೇಸ್ ದಾಖಲು ಮಾಡುವುದಾಗಿ ಬ್ಲ್ಯಾಕ್‌ಮೇಲ್ ಮಾಡಿ 27.71 ಲಕ್ಷ ರೂ. ದೋಚಿದ್ದಾರೆ.
    ಪದ್ಮನಾಭನಗರದ 69 ವರ್ಷದ ಮಹಿಳಾ ವೈದ್ಯೆ ವಂಚನೆಗೆ ಒಳಗಾದವರು. ಇವರು ಕೊಟ್ಟ ದೂರಿನ ಮೇರೆಗೆ ದಕ್ಷಿಣ ಸಿಇಎನ್ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

    ಮಾರ್ಚ್ 26ರಂದು ಕರೆ ಮಾಡಿದ ಅಪರಿಚಿತ ವ್ಯಕ್ತಿ, ಮುಂಬೈ ಫೆಡೆಕ್ಸ್ ಎಕ್ಸ್‌ಪ್ರೆಸ್ ಕಂಪನಿಯಿಂದ ಕರೆ ಮಾಡುತ್ತಿರುವುದಾಗಿ ಪರಿಚಯ ಮಾಡಿಕೊಂಡಿದ್ದಾನೆ. ಬಳಿಕ ನಿಮ್ಮ ಹೆಸರಿನಲ್ಲಿ ಅನಧಿಕೃತವಾಗಿ ತೈವಾನ್‌ಗೆ ಪಾರ್ಸೆಲ್ ಹೋಗುತ್ತಿದೆ. ಅದರಲ್ಲಿ 5 ಪಾಸ್‌ಪೋರ್ಟ್, 3 ಬ್ಯಾಂಕ್ ಕ್ರೆಡಿಟ್ ಕಾರ್ಡ್, 200 ಗ್ರಾಂ ಎಂಡಿಎಂಎ, 35 ಸಾವಿರ ರೂ. ನಗದು, 4 ಕೆಜಿ ಬಟ್ಟೆ ಮತ್ತು ಲ್ಯಾಪ್‌ಟಾಪ್‌ಗಳಿವೆ.

    ಈ ಕೂಡಲೇ ಮುಂಬೈಗೆ ಬಂದು ಪೊಲೀಸರಿಗೆ ದೂರು ಕೊಡಬೇಕು. ಇಲ್ಲವಾದರೆ, ನಿಮ್ಮ ವಿರುದ್ಧ ಎ್ಐಆರ್ ದಾಖಲಾಗುತ್ತದೆ. ಬೇಕಾದರೆ ಆನ್‌ಲೈನ್‌ನಲ್ಲಿ ದೂರು ಕೊಡಬಹುದು. ಮುಂಬೈ ಪೊಲೀಸರಿಗೆ ವಾಟ್ಸ್‌ಆ್ಯಪ್ ಕಾಲ್ ಮಾಡುವಂತೆ ವೈದ್ಯೆಗೆ ಮೊಬೈಲ್ ನಂಬರ್ ಕೊಟ್ಟಿದ್ದಾನೆ.
    ನನ್ನ ವಿರುದ್ಧ ಎ್ಐಆರ್ ಆಗಲಿದೆ ಎಂದು ಹೆದರಿದ ವೈದ್ಯೆ, ಅಪರಿಚಿತ ವ್ಯಕ್ತಿ ಕೊಟ್ಟ ಮೊಬೈಲ್ ನಂಬರ್‌ಗೆ ವಾಟ್ಸ್‌ಆ್ಯಪ್ ಕಾಲ್ ಮಾಡಿದ್ದಾರೆ. ಕರೆ ಸ್ವೀಕರಿಸಿದ ವ್ಯಕ್ತಿ, ಮುಂಬೈ ಸೈಬರ್ ಕ್ರೈಂ ಪೊಲೀಸ್ ಎಂದು ಪರಿಚಯ ಮಾಡಿಕೊಂಡು ನಕಲಿ ಐಡಿ ಕಾರ್ಡ್ ಸಹ ತೋರಿಸಿ ನಂಬಿಸಿದ್ದಾನೆ.

    ಪ್ರಕರಣದ ವಿಚಾರಣೆ ಪೂರ್ಣವಾಗುವವರೆಗೂ ಎಲ್ಲಿಗೂ ಹೋಗದಂತೆ ಮತ್ತು ಯಾರಿಗೂ ಕರೆ ಮಾಡಬಾರದು ಎಂದು ಹೇಳಿದ ಸೈಬರ್ ಕಳ್ಳರು, ಆರ್‌ಬಿಐ ಮಾರ್ಗಸೂಚಿ ಎಂದು ಲೆಟರ್‌ನ್ನು ವಾಟ್ಸ್‌ಆ್ಯಪ್ ಮಾಡಿದ್ದಾರೆ. ಇದರ ಪ್ರಕಾರ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇರುವ ಹಣವನ್ನು ಆರ್‌ಬಿಐ ಬ್ಯಾಂಕ್‌ಗೆ ಜಮೆ ಮಾಡಬೇಕು. ತನಿಖೆ ಪೂರ್ಣವಾದ ಮೇಲೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ವಾಪಸ್ ಬರಲಿದೆ ಎಂದು ಸೂಚಿಸಿದ್ದಾರೆ.

    ಹೆದರಿದ ವೈದ್ಯೆ, ತನ್ನ ಬ್ಯಾಂಕ್ ಖಾತೆಯಲ್ಲಿದ್ದ 27.71 ಲಕ್ಷ ರೂ. ಅನ್ನು ವಂಚಕರು ಕೊಟ್ಟ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ವಾಪಸ್ ವೈದ್ಯೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆ್ ಆಗಿರುವುದು ಗೊತ್ತಾಗಿದೆ. ಕೊನೆಗೆ ಮೋಸಕ್ಕೆ ಒಳಗಾಗಿರುವುದು ಗೊತ್ತಾಗಿ ವೈದ್ಯೆ, ಸೈಬರ್ ಕ್ರೈಂ ಹೆಲ್ಪ್‌ಲೈನ್ 1930ಗೆ ಕರೆ ಮಾಡಿ ದೂರು ದಾಖಲಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts