More

    ಸೂಕ್ಷ್ಮತೆ ಇಲ್ಲದವರಿಗೆ ಮತ ನೀಡಿ ಗೆಲ್ಲಿಸಿದ್ದೀರಿ, ಈಗ ಅದಕ್ಕೆ ತಕ್ಕ ಬೆಲೆ ತೆರುತ್ತಿದ್ದೀರಿ: ಸಿಎಎ ಹೋರಾಟದ ಬಗ್ಗೆ ಮೌನ ಮುರಿದ ಪಿ.ಚಿದಂಬರಂ

    ನವದೆಹಲಿ: ಸಿಎಎ ವಿರುದ್ಧದ ಹೋರಾಟ ನಿನ್ನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಾರಕಕ್ಕೇರಿದ್ದು ಒಬ್ಬ ಪೊಲೀಸ್​ ಪೇದೆ ಸೇರಿದಂತೆ ಒಟ್ಟು ಏಳು ಜನರು ಮೃತರಾಗಿದ್ದಾರೆ. 50ಕ್ಕೂ ಹೆಚ್ಚು ಜನರು ಗಾಯಾಳುಗಳಾಗಿ ಆಸ್ಪತ್ರೆ ಸೇರಿದ್ದಾರೆ. ಈ ಕುರಿತಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್​ ಮುಖಂಡ ಪಿ.ಚಿದಂಬರಂ ಹೋರಾಟಗಾರರ ಬಗ್ಗೆ ತೀವ್ರ ಕಳಕಳಿ ವ್ಯಕ್ತಪಡಿಸಿದ್ದಾರೆ.

    ದೆಹಲಿಯಲ್ಲಿ ನಡೆದಿರುವ ಹಿಂಸಾಚಾರದ ಕುರಿತಾಗಿ ಮಾತನಾಡಿರುವ ಅವರು, “ನಿನ್ನೆ ನಡೆದಿರುವ ಘಟನೆ ಅಘಾತಕಾರಿ ಮತ್ತು ಖಂಡನೀಯ. ನೀವು ಸೂಕ್ಷ್ಮತೆ ಇರದ ನಾಯಕರಿಗೆ ಮತ ನೀಡಿ ಗೆಲ್ಲಿಸಿದ್ದೀರಿ, ಇದೀಗ ಅದಕ್ಕೆ ತಕ್ಕ ಬೆಲೆ ತೆರುತ್ತಿದ್ದೀರಿ” ಎಂದು ಹೇಳಿದ್ದಾರೆ.

    ಭಾರತದಲ್ಲಿ 1955ರಿಂದಲೂ ಪೌರತ್ವ ಕಾಯ್ದೆ ಜಾರಿಯಲ್ಲಿದೆ. ಆದರೆ ಈಗ ಅದರಲ್ಲಿ ತಿದ್ದುಪಡಿಯ ಅವಶ್ಯಕತೆ ಇರಲಿಲ್ಲ. ಈಗ ಏನೂ ತುಂಬಾ ತಡವಾಗಿಲ್ಲ. ಸರ್ಕಾರ ಹೋರಾಟಗಾರರ ಬೇಡಿಕೆಗೆ ಬೆಲೆ ಕೊಡಬೇಕು. ಸುಪ್ರೀಂ ಕೋರ್ಟ್​ ಸಿಎಎ ತಿದ್ದುಪಡಿಗೆ ಸಿಂಧುತ್ವ ನೀಡುವವರೆಗೂ ಅದನ್ನು ಜಾರಿಗೆ ತರಲಾಗುವುದಿಲ್ಲ ಎಂದು ಘೋಷಿಸಬೇಕು ಎಂದು ಟ್ವಿಟ್ಟರ್​ನಲ್ಲಿ ಅವರು ಹೇಳಿದ್ದಾರೆ.

    ಸರ್ಕಾರದ ಸಿಎಎ ಜಾರಿ ಮಾಡಿರುವುದು ಸಮಾಜವನ್ನು ವಿಭಜನೆ ಮಾಡುತ್ತಿದ್ದು ಅದನ್ನು ಕೂಡಲೇ ಕೈ ಬಿಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts