More

  ರಾಜಕೀಯ ಪ್ರೇರಿತ ಬಜೆಟ್ ಬೇಡ

  ಕಲಬುರಗಿ: ಸರ್ಕಾರ ಮಂಡಿಸುವ ಬಜೆಟ್‌ಗಳು ರಾಜಕೀಯ ಪ್ರೇರಿತ ಆಗಬಾರದು ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ವಾಸುದೇವ ಸೇಡಂ ಅಭಿಪ್ರಾಯಪಟ್ಟರು.

  ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಬುಧವಾರ ಮಧ್ಯಂತರ ಕೇಂದ್ರ ಬಜೆಟ್-೨೦೨೪ ವಿಷಯದ ಒಂದು ದಿನದ ಪ್ರಾದೇಶಿಕ ಮಟ್ಟದ ವಿದ್ಯಾರ್ಥಿಗಳ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

  ವಿಕಸಿತ ಭಾರತ-೨೦೪೭ ಎನ್ನುವ ಕೇಂದ್ರ ಸರ್ಕಾರದ ಯೋಜನೆ ಪೂರಕವಾಗಿ ಬಜೆಟ್ ಮಂಡಿಸಲಾಗಿದೆ. ಆದರೆ ಸರ್ಕಾರಗಳು ಜನರ ಸಮಸ್ಯೆಗೆ ಸ್ಪಂದಿಸುವ ಬಜೆಟ್ ಮಂಡಿಸಬೇಕು. ಶಿಕ್ಷಣ, ಕೃಷಿ, ನಿರುದ್ಯೋಗ, ಆರೋಗ್ಯ, ಬಡತನಕ್ಕೆ ಒತ್ತು ನೀಡಬೇಕಿತ್ತು. ಕೆಲ ಕ್ಷೇತ್ರಗಳಿಗೆ ಬಜೆಟ್ ಸಹಕಾರಿಯಾಗಿದೆ. ದೇಶ ಅಭಿವೃದ್ಧಿ ಪಥದಲ್ಲಿ ಸಾಗಬೇಕಾದರೆ ಎಲ್ಲವನ್ನೂ ಸರಿದೂಗಿಸಿಕೊಂಡು ಹೋದಾಗ ಮಾತ್ರ ಸಾಧ್ಯ. ಅಭಿವೃದ್ಧಿ ಹೊಂದಿದ ರಾಷ್ಟçಗಳ ಸಾಲಿನಲ್ಲಿ ಭಾರತ ದೇಶ ನಿಲ್ಲಬೇಕಾದರೆ ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿಯಿಂದ ಮಾತ್ರ ಸಾಧ್ಯ. ಸರ್ಕಾರಗಳು ಆ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ. ವಿದ್ಯಾರ್ಥಿಗಳು ಓದಿನ ಕಡೆಗೆ ಗಮನ ಕೊಟ್ಟು ಶೈಕ್ಷಣಿಕವಾಗಿ ಬೆಳೆಯಬೇಕು ಎಂದು ಸಲಹೆ ನೀಡಿದರು.

  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿ ಎಂ.ಮಲ್ಲಿಕಾರ್ಜುನ ಮಾತನಾಡಿ, ಕುಟುಂಬದ ಬಜೆಟ್ ನಿರ್ವಹಿಸುವುದು ಮುಖ್ಯ. ಕುಟುಂಬದ ಬಜೆಟ್ ಸರಿ ಇದ್ದಾಗ ಎಲ್ಲವೂ ಸರಿಯಾಗುತ್ತದೆ ಎಂದು ಹೇಳಿದರು.

  ಮಹಾವಿದ್ಯಾಲಯದ ಪ್ರಾಚಾರ್ಯೆ ಜಾನಕಿ ಹೊಸೂರ ಮಾತನಾಡಿದರು.

  ಐಕ್ಯೂಎಸಿ ಸಂಯೋಜಕಿ ಡಾ.ಪುಟ್ಟಮಣಿ ದೇವಿದಾಸ, ವಿದ್ಯಾರ್ಥಿ ಸಂಘದ ಸಹ ಸಲಹೆಗಾರ್ತಿ ಸಂತೋಷಿ ಹಿಪ್ಪರಗಿ ಇದ್ದರು. ಮುಖ್ಯಸ್ಥ ಡಾ.ಸಿದ್ಧಲಿಂಗರೆಡ್ಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪ್ರಾಧ್ಯಾಪಕಿ ನಿರ್ಮಲಾ ನಾಗೇಶ ವಂದಿಸಿದರು. ಅಂಬಿಕಾ ಮೈನಾಳ, ವಂದನಾ ನಿರೂಪಣೆ ಮಾಡಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts