More

    ಮಹಿಳೆಯರ ಅರೆನಗ್ನ ಚಿತ್ರಗಳು: ಭಾರಿ ಕೋಲಾಹಲವೆಬ್ಬಿಸಿದೆ ಜಲಿಯನ್​​ವಾಲಾ ಬಾಗ್ ನ ನವೀಕೃತ ಫೋಟೊ ಗ್ಯಾಲರಿ

    ಅಮೃತಸರ: ಜಲಿಯನ್​ವಾಲಾ ಬಾಗ್‌ನ ನವೀಕೃತ ಫೋಟೋ ಗ್ಯಾಲರಿಯಲ್ಲಿರಿಸಲಾದ ಇಬ್ಬರು ಅರೆಬೆತ್ತಲೆ ಮಹಿಳೆಯರ ಭಾವಚಿತ್ರವು ಭಾರಿ ಕುತೂಹಲಕ್ಕೆ ಕಾರಣವಾಗಿದೆ.
    ಚಿತ್ರವು ಅಜಂತಾ ಮತ್ತು ಎಲ್ಲೋರಾ ಗುಹೆಗಳಲ್ಲಿ ಚಿತ್ರಿಸಿದ ಚಿತ್ರಗಳಂತೆಯೇ ಇದೆ ಎಂದು ಹೇಳಲಾಗುತ್ತದೆ.

    ಈ ಕುರಿತು ಜಲಿಯನ್ ವಾಲಾಬಾಗ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷರೂ ಆಗಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಸರ್ವ್ ಕಾಂಬೋಜ್ ಸಮಾಜ್ ಪತ್ರ ಬರೆದಿದ್ದು, ರಾಷ್ಟ್ರೀಯ ವೀರರು, ಸಿಖ್ ಧರ್ಮ ಗುರುಗಳಾದ ಗುರು ನಾನಕ್ ದೇವ್ ಅವರಂಥ ಮಹಾನ್ ವ್ಯಕ್ತಿಗಳ ಭಾವಚಿತ್ರಗಳ ಮಧ್ಯೆ ಇರಿಸಲಾಗಿರುವ ಈ ಚಿತ್ರವನ್ನು ತೆಗೆದುಹಾಕಲು ಕೋರಿದೆ.

    ಇದನ್ನೂ ಓದಿ:  ಪಿಥೋರಗಢ ಮೇಘಸ್ಫೋಟ: ಮೂರು ಸಾವು ಆರು ಜನ ನಾಪತ್ತೆ

    ಸಿಖ್ ದೊರೆ ಮಹಾರಾಜ ರಂಜಿತ್ ಸಿಂಗ್, ಅಕಾ ಶೇರ್-ಎ-ಪಂಜಾಬ್ (ಪಂಜಾಬ್ ಸಿಂಹ) ಅವರ ಭಾವಚಿತ್ರವೂ ಗ್ಯಾಲರಿಯಲ್ಲಿದೆ.

    “ಜಲಿಯನ್ ವಾಲಾ ಬಾಗ್ ನ್ನು ಭಾರತೀಯರು ಒಂದು ಪವಿತ್ರ ಕ್ಷೇತ್ರವೆಂದೇ ನಂಬಿರುತ್ತಾರೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರಿಗೆ ಗೌರವ ಸಲ್ಲಿಸಲು ಶಾಲಾ ಮಕ್ಕಳು ಮತ್ತು ಕುಟುಂಬಸ್ಥರು ಒಳಗೊಂಡಂತೆ ನೂರಾರು ಜನರು ಪ್ರತಿದಿನ ಭೇಟಿ ನೀಡುತ್ತಾರೆ. ರಾಷ್ಟ್ರೀಯ ವೀರರ ಮತ್ತು ಸಿಖ್ ಗುರುಗಳ ಭಾವಚಿತ್ರಗಳು ಮತ್ತು ವರ್ಣಚಿತ್ರಗಳ ಸಂಗ್ರಹವನ್ನು ಹೊಂದಿರುವ ಗ್ಯಾಲರಿಯಲ್ಲಿ ಅರೆ ನಗ್ನ ಮಹಿಳೆಯರ ಚಿತ್ರವನ್ನು ಪ್ರದರ್ಶಿಸಿರುವುದು ಶನಿವಾರ ನಮಗೆ ತಿಳಿದುಬಂದಿದ್ದು, ಇದರಿಂದ ನಮಗೆ ತೀವ್ರ ಬೇಸರ ಹಾಗೂ ಅವಮಾನವಾಗಿದೆ ಎಂದು ಅಂತಾರಾಷ್ಟ್ರೀಯ ಸರ್ವ್ ಕಾಂಬೋಜ್ ಸಮಾಜದ ಅಧ್ಯಕ್ಷ ಬಾಬಿ ಕಾಂಬೊಜ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

    ಇದನ್ನೂ ಓದಿ: ‘ಜೊತೆ ಜೊತೆಯಲಿ’ ಧಾರಾವಾಹಿ ನಿರ್ದೇಶಕ ಆರೂರು ಜಗದೀಶ್ ಮಣಿಪಾಲ್ ಆಸ್ಪತ್ರೆಗೆ ದಾಖಲು

    ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಬರೆದ ಪತ್ರದಲ್ಲಿ, ಮುಖ್ಯ ದ್ವಾರದಲ್ಲಿರುವ ಶಾಹೀದ್ ಉದಮ್ ಸಿಂಗ್ ಅವರ ಪ್ರತಿಮೆಯ ಮುಂಭಾಗದಲ್ಲಿರುವ ಟಿಕೆಟ್ ಕಿಟಕಿಯನ್ನು ಸ್ಥಳಾಂತರಿಸಬೇಕೆಂದು ಕಾಂಬೋಜ್ ಒತ್ತಾಯಿಸಿದ್ದಾರೆ.
    ನವೀಕರಣ ಕಾರ್ಯಗಳ ಮೇಲ್ವಿಚಾರಣೆಯನ್ನು ಸಂಸದ ಮತ್ತು ಜಲಿಯನ್​ವಾಲಾ ಬಾಗ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನ ಶ್ವೇತ್ ಮಲಿಕ್ ಅವರಿಗೆ ವಹಿಸಲಾಗಿದೆ. ಇತ್ತೀಚೆಗೆ ಅಂದರೆ, ಜುಲೈ 17 ರಂದು ಅವರು ಇಲ್ಲಿ ಭೇಟಿ ನಿಡಿದ್ದರು.

    ”ಗ್ಯಾಲರಿಯಲ್ಲಿ ಇಬ್ಬರು ಅರೆಬೆತ್ತಲೆ ಮಹಿಳೆಯರ ಚಿತ್ರವನ್ನು ಹಾಕಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಈ ಚಿತ್ರದ ಬಗ್ಗೆ ವಿಚಾರಿಸಿ ಮತ್ತು ನಂತರ ಮಾತನಾಡುತ್ತೇನೆ” ಎಂದು ಶ್ವೇತ್ ಮಲಿಕ್ ಈ ಮಧ್ಯೆ ಶನಿವಾರ ಮಾಧ್ಯಮಗಳಿಗೆ ತಿಳಿಸಿದರು.

    ಇದನ್ನೂ ಓದಿ: ನಿರ್ಭಯವಾಗಿ ನಡೆಯುತ್ತಿದೆ ಅಭಯಾರಣ್ಯಗಳಲ್ಲಿ ಕಳ್ಳಬೇಟೆ: ಲಾಕ್​ಡೌನ್ ವರದಾನವಾಯಿತೆ?

    ಇನ್ನೂ ಮಜುಗರದ ವಿಷಯವೆಂದರೆ ಅವರು ಜುಲೈ 17 ರಂದು ಗ್ಯಾಲರಿಗೆ ಭೇಟಿ ನೀಡಿದಾಗ ಆ ಆಕ್ಷೇಪಾರ್ಹ ಚಿತ್ರದ ಮುಂದೆ ಅವರು ನಿಂತಾಗಲೇ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದರು.
    ಪ್ರಸ್ತುತ, ಪಂಜಾಬ್‌ನ ಅಮೃತಸರದಲ್ಲಿರುವ ಜಲಿಯನ್ ವಾಲಾ ಬಾಗ್ ಸಂಕೀರ್ಣದಲ್ಲಿ ಒಂದು ದೊಡ್ಡ ಬದಲಾವಣೆ ಕಾಣಿಸಿಕೊಳ್ಳುತ್ತಿದೆ. ಭಾರತದ ಪುರಾತತ್ವ ಸಮೀಕ್ಷೆಯ ಮೇಲ್ವಿಚಾರಣೆಯಲ್ಲಿ, ಜಲಿಯನ್ ವಾಲಾ ಬಾಗ್‌ನಲ್ಲಿ ನವೀಕರಣ ಕಾರ್ಯವು ಫೆಬ್ರವರಿ 15 ರಂದು ಪ್ರಾರಂಭವಾಗಿದೆ. ಜುಲೈ 31 ರಿಂದ ಸ್ಮಾರಕವು ಸಾರ್ವಜನಿಕರಿಗೆ ಮತ್ತೆ ತೆರೆದುಕೊಳ್ಳಲಿದೆ.
    ಕೇಂದ್ರವು ಮೊದಲ ಹಂತದಲ್ಲಿ 20 ಕೋಟಿ ರೂ.ಗಳನ್ನು ಸಂಸ್ಕೃತಿ ಸಚಿವಾಲಯದ ಮೂಲಕ ನಿಗದಿಪಡಿಸಿದೆ.
    ಜಲಿಯನ್ ವಾಲಾ ಬಾಗ್ ಸ್ವರ್ಣಮಂದಿರ ಸಂಕೀರ್ಣದ ಸಮೀಪದಲ್ಲಿದೆ. 1919 ರ ಏಪ್ರಿಲ್ 13 ರಂದು, ಜಲಿಯನ್ ವಾಲಾ ಬಾಗ್ ಸ್ವಾತಂತ್ರ್ಯ ಪೂರ್ವದಲ್ಲಿನ ರಕ್ತಪಾತ ಹತ್ಯಾಕಾಂಡಗಳಿಗೆ ಸಾಕ್ಷಿಯಾಗಿದೆ. ಸೇನಾಧಿಕಾರಿಯಾಗಿದ್ದ ರೆಜಿನಾಲ್ಡ್ ಡೈಯರ್ ನ ಆದೇಶಾನುಸಾರ ಬ್ರಿಟಿಷ್ ಭಾರತ ಸೇನೆ ಅಂದಾಜು 379 ನಾಗರಿಕರನ್ನು ಹತ್ಯೆಗೈದಿತ್ತು.

    ಕುಖ್ಯಾತ ದುಬೆಗೆ ಜಾಮೀನು ಸಿಗುತ್ತಿದುದು ಹೇಗೆ- ಅಚ್ಚರಿಪಟ್ಟ ಸುಪ್ರೀಂಕೋರ್ಟ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts