More

    ಸ್ವಾವಲಂಬಿ ಆಗಲು ಉದ್ಯಮ ಆರಂಭಿಸಿ

    ಸಂಡೂರು: ಮಹಿಳೆಯರು ಸ್ವಾವಲಂಬಿಗಳಾಗಲು ಸ್ವಂತ ಉದ್ಯಮ ಆರಂಭಿಸಬೇಕು ಎಂದು ಜೆಎಸ್‌ಡಬ್ಲುೃ ಸ್ಟೀಲ್ ಫೌಂಡೇಷನ್ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ದೇಬಬ್ರತ ಮಿಶ್ರಾ ಹೇಳಿದರು.

    ಸ್ವಯಂ ಚಾಲಿತ ಅಗರಬತ್ತಿ ತಯಾರಿಕಾ ತರಬೇತಿ

    ತೋರಣಗಲ್‌ನಲ್ಲಿ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮತ್ತು ಜೆಎಸ್‌ಡಬ್ಲುೃ ಫೌಂಡೇಷನ್ ಹಮ್ಮಿಕೊಂಡಿದ್ದ ಸ್ವಯಂ ಚಾಲಿತ ಅಗರಬತ್ತಿ ತಯಾರಿಕಾ ತರಬೇತಿ ಕಾರ್ಯಾಗಾರದಲ್ಲಿ ಬುಧವಾರ ಮಾತನಾಡಿದರು. ಕಾರ್ಖಾನೆ ಸುತ್ತಲಿನ ಗ್ರಾಮಗಳಲ್ಲಿ ಹಲವು ಜೀವನೋಪಾಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಮಹಿಳೆಯರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

    10 ಜನ ಮಹಿಳೆಯರಿಗೆ ಅಗರಬತ್ತಿ ತಯಾರಿಕೆ ಯಂತ್ರ ವಿತರಣೆ

    ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಹುಬ್ಬಳಿ ವಿಭಾಗದ ನಿರ್ದೇಶಕ ಶ್ರೀನಿವಾಸ್ ಎನ್. ಮಾತನಾಡಿ, ಪ್ರತಿ ಯಂತ್ರಕ್ಕೆ ಒಂದು ಲಕ್ಷ ರೂ.ಗೂ ಅಧಿಕ ಬೆಲೆ ಇದೆ. ಇದನ್ನು ಇಲಾಖೆಯಿಂದ ಉಚಿತವಾಗಿ ನೀಡಲಾಗುತ್ತಿದೆ. ತಯಾರಿಸಿದ ಅಗರಬತ್ತಿಗಳನ್ನು ಮಾರಾಟಕ್ಕೆ ಮಾರುಕಟ್ಟೆ ಕಲ್ಪಿಸಲಾಗಿದೆ ಎಂದು ತಿಳಿಸಿದರು. ತಾಲೂಕಿನ 10 ಜನ ಮಹಿಳೆಯರಿಗೆ ಅಗರಬತ್ತಿ ತಯಾರಿಕೆ ಯಂತ್ರ ವಿತರಿಸಲಾಯಿತು.


    ಇದನ್ನೂ ಓದಿ: ಸಖತ್​ ಐಡಿಯಾ ಗುರು| ಕಡಿಮೆ ಬಂಡವಾಳದಲ್ಲೇ ಉದ್ಯಮ ಆರಂಭಿಸಿ

    ಜೆಎಸ್‌ಡಬ್ಲುೃ ಫೌಂಡೇಷನ್ ಸಿಎಸ್‌ಆರ್ ಮುಖ್ಯಸ್ಥರಾದ ಪೆದ್ದಣ್ಣ ಬೀಡಲಾ ಮಾತನಾಡಿದರು. ಕಾರ್ಯಕ್ರಮಾಧಿಕಾರಿ ನಾಗನಗೌಡ, ಇಲಾಖೆ ಉಪನಿರ್ದೇಶಕರಾದ ರಾಜಣ್ಣ, ರಾಮದಾಸ್ ಮತ್ತು ತರಬೇತುದಾರರಾದ ಕಾಂಚನ, ರೂಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts