More

    ಸ್ವಘೋಷಿತ ದೇವಮಾನವ ನಿತ್ಯಾನಂದ ಪತ್ತೆಗೆ ಬ್ಲೂ ಕಾರ್ನರ್​ ನೋಟಿಸ್​ ಜಾರಿ ಮಾಡಿದ ಇಂಟರ್​ಪೋಲ್​

    ನವದೆಹಲಿ: ಅತ್ಯಾಚಾರ ಹಾಗೂ ದೇಣಿಗೆ ಸಂಗ್ರಹಕ್ಕೆ ಮಕ್ಕಳನ್ನು ಬಳಸಿಕೊಂಡಿರುವ ಕೇಸಿನಲ್ಲಿ ಬಂಧನದ ಭೀತಿಯಿಂದ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದನ ಪತ್ತೆಗೆ ಇಂಟರ್​ಪೋಲ್​ ಬ್ಲೂ ಕಾರ್ನರ್​ ನೋಟಿಸ್​ ಜಾರಿ ಮಾಡಿದೆ.

    ಬಿಡದಿಯಲ್ಲಿರುವ ಆಶ್ರಮಕ್ಕೆ ದೇಣಿಗೆ ಸಂಗ್ರಹಿಸಲು ಮಕ್ಕಳನ್ನು ಅಪಹರಣ ಮಾಡಿ ಅವರನ್ನು ಬಳಸಿಕೊಂಡಿದ್ದ. ಅಲ್ಲದೆ ಅಹಮದಾಬಾದ್​​ನ ಆಶ್ರಮದಲ್ಲಿ ಇಬ್ಬರು ಬಾಲಕಿರು ನಾಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ದೂರು ದಾಖಲಿಸಿದ್ದರು.

    ಬಿಡದಿ ಬಳಿಯ ಆಶ್ರಮದಲ್ಲಿ ಆತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿರುವ ಬಗ್ಗೆ ಬಿಡದಿ ಪೊಲೀಸರು ದೂರು ದಾಖಲಿಸಿದ್ದಾರೆ. ಈ ಪ್ರಕರಣದ ವಿಚಾರಣೆಗೆ ನಿತ್ಯಾನಂದ ಹಾಜರಾಗದ ಹಿನ್ನೆಲೆಯಲ್ಲಿ ಕೋರ್ಟ್​ ಆತನ ಬಂಧನಕ್ಕೆ ವಾರೆಂಟ್​ ಜಾರಿ ಮಾಡಿತ್ತು. ಹೀಗಾಗಿ ಆತ ಪಾಸ್​ಪೋರ್ಟ್​ ಇಲ್ಲದೆ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದಾನೆ.

    ಕಳೆದ ವರ್ಷ ಈಕ್ವೆಡಾರ್ ರಾಯಭಾರ ಕಚೇರಿ ನಿತ್ಯಾನಂದನಿಗೆ ಆಶ್ರಯ ನೀಡಿದೆ. ಅಲ್ಲದೆ ಆತ ದಕ್ಷಿಣ ಅಮೆರಿಕದಲ್ಲಿ ದ್ವೀಪ ಖರೀದಿಸಲು ಈಕ್ವೆಡಾರ್​ ರಾಯಭಾರ ಕಚೇರಿ ಸಹಾಯ ಮಾಡಿದೆ ಎಂಬ ವರದಿಗಳು ಬಂದಿದ್ದವು. ಆದರೆ ಭಾರತದ ವಿದೇಶಾಂಗ ಸಚಿವಾಲಯ ಈವರದಿಗಳನ್ನು ತಳ್ಳಿ ಹಾಕಿತ್ತು.

    ತಲೆ ಮರೆಸಿಕೊಂಡಿರುವ ಸ್ವಘೋಷಿತ ದೇವಮಾನವ ನಿತ್ಯಾನಂದಸ್ವಾಮಿ ಪತ್ತೆಗೆ ಇಂಟರ್​ಪೋಲ್​ ಬ್ಲೂ ಕಾರ್ನರ್​ ನೋಟಿಸ್​ ಜಾರಿ ಮಾಡಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts