More

    ಶಿಕ್ಷಣದಿಂದ ಸ್ವಾವಲಂಬಿ ಜೀವನ ಸಾಧ್ಯ

    ಕೊಳ್ಳೇಗಾಲ : ಅಂಬೇಡ್ಕರ್ ಅವರು ಶಿಕ್ಷಣ ಎಂಬುದು ಹುಲಿ ಹಾಲಿದಂತೆ. ಅದನ್ನು ಕುಡಿದು ಅರಗಿಸಿಕೊಂಡವನು ಘರ್ಜಿಸಲೇಬೇಕು ಎಂದು ಹೇಳಿದ್ದಾರೆ. ಅಂತೆಯೇ, ಶಿಕ್ಷಣದಿಂದ ಸಾಮಾಜಿಕ, ಆರ್ಥಿಕವಾಗಿ ಸ್ವಾವಲಂಬಿ ಜೀವನವನ್ನು ನಡೆಸಲು ಸಾಧ್ಯ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.

    ಸರ್ಕಾರಿ ಎಸ್‌ವಿಕೆ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಸರಸ್ವತಿ ಪೂಜಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಹೆಣ್ಣು ಮಕ್ಕಳು ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕು. ಪಾಲಕರು ಮಕ್ಕಳಿಗೆ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಶ್ರಮಿಸಬೇಕು. 1952ನಲ್ಲಿ ಎಸ್.ವಿ.ಕೆ ಶಿಕ್ಷಣ ಸಂಸ್ಥೆ ಪ್ರಾರಂಭವಾಗಿದೆ. ಅಂದಿನಿಂದ ಲಕ್ಷಾಂತರ ಬಡವರ, ರೈತರ, ಹಿಂದುಳಿದವರ ಮಕ್ಕಳಿಗೆ ವಿದ್ಯಾದಾನ ಮಾಡಿದೆ ಎಂದು ಶ್ಲಾಘಿಸಿದರು.

    ಇತ್ತೀಚೆಗೆ ಹೆಣ್ಣು ಮಕ್ಕಳು ಮನೆಗಳಲ್ಲಿ ದೇವರಿಗೆ ಪೂಜೆ ಮಾಡುವುದು ವಿರಳವಾಗಿದೆ. ಮನೆಯಲ್ಲಿ ತಾಯಿ ಪೂಜೆ ಮಾಡುವಾಗ ಮಕ್ಕಳು ಅದನ್ನು ನೋಡಿ ಕಲಿಯಬೇಕು. ಮನೆಯ ಮೊದಲ ಪಾಠ ಶಾಲೆ ಎಂಬಂತೆ, ನಮ್ಮ ಸಂಸ್ಕೃತಿಯನ್ನು ಕಲಿತು ಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

    ಎಸ್‌ವಿಕೆ ಕಾಲೇಜು ಪ್ರಾಂಶುಪಾಲ ಎಚ್.ಶ್ರೀಧರ್, ಉಪ ಪ್ರಾಂಶುಪಾಲ ವಿಶ್ವನಾಥ್, ಉಪನ್ಯಾಸಕ ಅಲೆಗ್ಸಾಂಡರ್, ಕಾಲೇಜು ಅಭಿವೃದ್ಧಿ ಸಮಿತಿಯ ನರಸಿಂಹ, ನಗರಸಭೆ ಸದಸ್ಯ ಮಂಜುನಾಥ್, ಶಾಂತರಾಜು ಬಸ್ತೀಪುರ, ಸುರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ. ತೋಟೇಶ್ ಇತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts