More

    ಉತ್ತಮ ಸಮಾಜ ನಿರ್ಮಾಣಕ್ಕೆ ಆತ್ಮ ಶುದ್ಧಿ ಅಗತ್ಯ

    ಮೂಡಿಗೆರೆ: ದೇಹ ಶುದ್ಧಿ ಜತೆಗೆ ಆತ್ಮ ಸ್ವಚ್ಛಗೊಳಿಸಿದಾಗ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಪ್ರಕಾಶ್ ರಾವ್ ಹೇಳಿದರು.
    ಶನಿವಾರ ಪಟ್ಟಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಸಬಾ ವಲಯಗಳ ಪದಾಧಿಕಾರಿಗಳ ಪದಗ್ರಹಣ ಮತ್ತು ಸಾಮೂಹಿಕ ಸತ್ಯನಾರಾಯಣ ಸ್ವಾಮಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಸನಾತನ ಸಂಸ್ಕೃತಿ ಹೊಂದಿರುವ ನಮ್ಮ ದೇಶದಲ್ಲಿ ಎಲ್ಲ ಆಚರಣೆಗಳಿಗೂ ಅದರದ್ದೇ ಮಹತ್ವವಿದೆ. ಸಂಸ್ಕಾರ ಮಾಯವಾಗುತ್ತಿದೆ. ಮಹಿಳೆ ಮನೆಯ ಕಣ್ಣು. ಮಕ್ಕಳಿಗೆ ಮನೆಯಲ್ಲಿ ಸಂಸ್ಕಾರ ನೀಡಿದರೆ ಸಮಾಜಕ್ಕೆ ಉತ್ತಮ ಪ್ರಜೆಯನ್ನು ಕೊಡುಗೆಯಾಗಿ ನೀಡಬಹುದು ಎಂದು ತಿಳಿಸಿದರು.
    ಪ್ರಗತಿಪರ ಚಿಂತಕ ಜಯರಾಮ್ ಮಾತನಾಡಿ, ಪೂಜೆ ಎಂಬುದು ಪ್ರದರ್ಶನವಾಗಿದೆ. ಎಲ್ಲರೂ ಭಕ್ತಿ ಮಾರ್ಗದಲ್ಲಿ ನಡೆಯಬೇಕು. ಭಾರತದಲ್ಲಿ ಮಹಿಳೆಯರನ್ನು ದೈವ ಸ್ವರೂಪಿ ಎಂದು ಬಿಂಬಸಲಾಗಿದೆ. ಹೆಣ್ಣುಮಕ್ಕಳ ವಸ್ತ್ರ ವಿನ್ಯಾಸ ಬದಲಾಗುತ್ತಿದ್ದು, ಮೋಜು ಮಸ್ತಿಯಲ್ಲಿ ತೊಡಗಿ ಮೈಮರೆಯುತ್ತಿರುವುದು ದುರದೃಷ್ಟಕರ ವಿಷಯ. ಯುವ ಜನತೆ ದಿಕ್ಕು ತಪ್ಪದಂತೆ ಪ್ರತಿ ಪಾಲಕರೂ ನಿಗಾ ವಹಿಸುವುದು ಅತ್ಯಗತ್ಯ ಎಂದು ಹೇಳಿದರು.
    ಮಾಜಿ ಸಚಿವೆ ಮೊಟಮ್ಮ, ಟಿ.ಡಿ.ಅರವಿಂದ್, ದೀಪಕ್ ದೊಡ್ಡಯ್ಯ, ಉದ್ಯಮಿ ಮಂಚೇಗೌಡ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಧಿಕಾರಿ ಶಿವಾನಂದ್, ಎಚ್.ಎಂ.ಶಿವೇಗೌಡ, ದಾಮೋದರ, ಮಧುರಾ, ಅನ್ನಪೂರ್ಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts