More

    ಸ್ವ ಉದ್ಯೋಗಕ್ಕೆ ಹೈನುಗಾರಿಕೆ ಸಹಕಾರಿ

    ಮಸ್ಕಿ : ಕೇಂದ್ರ ಸರ್ಕಾರ ಮಸ್ಕಿ ಮತ್ತು ಸಿರವಾರ ತಾಲೂಕನ್ನು ಮಹತ್ವಾಕಾಂಕ್ಷೆ ತಾಲೂಕನ್ನಾಗಿ ಘೋಷಿಸಿದೆ. ಮಹಿಳೆಯರು ಸ್ವ ಉದ್ಯೋಗಸ್ಥರಾಗಿ ಕಾರ್ಯಕ್ರಮ ಯಶಸ್ಸಿಗೆ ಕೈಜೋಡಿಸಿ ಎಂದು ಮಸ್ಕಿ ತಾಪಂ ಸಹಾಯಕ ನಿರ್ದೇಶಕ ಶಿವಾನಂದರಡ್ಡಿ ಸಲಹೆ ನೀಡಿದರು.

    ಇದನ್ನೂ ಓದಿ: ಹೈನುಗಾರಿಕೆಗೆ ಮಹಿಳೆಯರಿಗೆ ಆದ್ಯತೆ ನೀಡಲಿ

    ತಾಲೂಕಿನ ಹಸಮಕಲ್ ಗ್ರಾಮದಲ್ಲಿ ಶುಕ್ರವಾರ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯಡಿ 2018-19 ನೇ ಸಾಲಿನಲ್ಲಿ 100 ದಿನ ನರೇಗಾ ಕೆಲಸ ನಿರ್ವಹಿಸಿದ ಮಹಿಳಾ ಕೂಲಿಕಾರರಿಗೆ 10 ದಿನಗಳ ಕಾಲ ಏರ್ಪಡಿಸಿದ್ದ ಹೈನುಗಾರಿಕೆ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

    ಮಹಿಳೆಯರು ಕುಟುಂಬ ನಿರ್ವಹಣೆಗೆ ಸೀಮಿತವಾಗಿರದೆ, ಸರ್ಕಾರ ಜಾರಿಗೊಳಿಸಿದ ಅನೇಕ ಯೋಜನೆಗಳಿಂದ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸುವುದರ ಜತೆಗೆ ಹಣ ಉಳಿತಾಯ ಮಾಡಿ, ಕುಟುಂಬದ ಕಷ್ಟ ಕಾಲದಲ್ಲಿ ನೆರವಾಗುತ್ತಿದ್ದಾಳೆ. ಹೈನುಗಾರಿಕೆ ಉದ್ಯಮ ಮಹಿಳೆಯರನ್ನು ಅವಲಂಬಿಸಿದೆ.

    ಪಶು ವೈದ್ಯರು, ಪಶು ಸಖಿಯರ ಮಾರ್ಗದರ್ಶನದಲ್ಲಿ ಹೈನುಗಾರಿಕೆ ಕೈಗೊಂಡರೆ, ಲಾಭ ಕಂಡುಕೊಳ್ಳಬಹುದು. ಮಹತ್ವಾಕಾಂಕ್ಷೆ ತಾಲೂಕು (ಎಬಿಪಿ) ಕಾರ್ಯಕ್ರಮದಡಿ ಮಕ್ಕಳ ಪೌಷ್ಟಿಕತೆ, ಆರೋಗ್ಯ ಸುಧಾರಣೆ, ಮಹಿಳೆಯರ ಸಬಲೀಕರಣ, ಸುಸ್ಥಿರ ಆದಾಯ ತಂದುಕೊಡುವ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸಲಾಗುತ್ತಿದೆ ಎಂದರು.

    ಎನ್‌ಆರ್ ಎಲ್ಎಂ ವಲಯ ಮೇಲ್ವಿಚಾರಕ ಪ್ರಕಾಶ್, ಗುಡದೂರು ಗ್ರಾಪಂ ಉಪಾಧ್ಯಕ್ಷೆ ಸರೋಜಾ, ಆರ್ ಸೆಟ್ ಸಂಸ್ಥೆಯ ನಿರ್ದೇಶಕರಾದ ವಿಜಯಕುಮಾರ್, ತರಬೇತುದಾರರಾದ ಬಸವರಾಜ್ ಬೆಲ್ಲದ್, ಪಾರ್ವತಮ್ಮ, ಗುಡದೂರು ಗ್ರಾಪಂ ದ್ವಿತೀಯ ದರ್ಜೆ ಸಹಾಯಕಿ ಅನಿಸಾ ಫಾತೀಮಾ, ಬಿಆರ್ಪಿ ಭವಾನಿ, ಎಂಬಿಕೆ ಶಿವಲಿಂಗಮ್ಮ, ಪಶು ಸಖಿ ಫರೀದಾ ಬೇಗಂ, ಎಲ್ ಸಿ ಆರ್ ಜಯಶ್ರೀ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts