More

    ಹೈನುಗಾರಿಕೆಗೆ ಮಹಿಳೆಯರಿಗೆ ಆದ್ಯತೆ ನೀಡಲಿ

    ಮೂಗೂರು: ಹೈನುಗಾರಿಕೆಗೆ ಮಹಿಳೆಯರು ಹೆಚ್ಚಿನ ಆದ್ಯತೆ ನೀಡುವ ಮೂಲಕ ಆರ್ಥಿಕವಾಗಿ ಹಿಂದುಳಿದ ಸಂಘದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಮೈಸೂರು ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಸಿ.ಅನಿತಾ ಮನವಿ ಮಾಡಿದರು.


    ಸಮೀಪದ ಕನ್ನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿದ ಅವರು, ಬ್ಯಾಂಕ್ ಹಾಗೂ ಇತರ ಸಂಘ ಸಂಸ್ಥೆಗಳಲ್ಲಿ ಮಹಿಳೆಯರು ಹೈನುಗಾರಿಕೆಗಾಗಿ ಸಾಲ ಪಡೆಯುತ್ತಾರೆ. ಅದರೆ ಪಶು ಸಾಕಣೆಗೆ ಹಿಂದೇಟು ಹಾಕುತ್ತಾರೆ ಎಂದು ವಿಷಾದವ್ಯಕ್ತಪಡಿಸಿದರು.


    ಸಂಘದ ಮಹಿಳಾ ಸದಸ್ಯರು 1 ಹಸುವಿನ ಬದಲು 2ರಿಂದ 3 ಹಸು ಸಾಕಣೆ ಮಾಡುವುದನ್ನು ರೂಢಿಸಿಕೊಂಡರೆ ಲಾಭ ಪಡೆಯಬಹುದು ಎಂದರು.
    ಸಂಘದ ಸಿಇಒ ಜ್ಯೋತಿ ಮಾತನಾಡಿ, ಸಂಘದಲ್ಲಿ 200 ಷೇರುದಾರರು, 40 ಹಾಲು ಉತ್ಪಾದಕರಿದ್ದು, ನಿತ್ಯ 150-200 ಲೀಟರ್ ಹಾಲು ಸಂಗ್ರಹವಾಗುತ್ತಿದೆ.


    ಸಂಘದ ಅಧ್ಯಕ್ಷೆ ವಿಜಯಲಕ್ಷ್ಮೀ, ಉಪಾಧ್ಯಕ್ಷೆ ಶಾರದಾ, ನಿರ್ದೇಶಕರಾದ ಬೇಬಿ, ನಂಜಮಣಿ, ನವಿಲಮ್ಮ, ದುಂಡಮ್ಮ, ಶಿವಮ್ಮ, ಅಮ್ಮಣಮ್ಮ, ಪುಟ್ಟಸಿದ್ದಮ್ಮ, ಮಹಾದೇವ, ಶಿವಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts