More

    ಗ್ರಾಮೀಣ ಮಹಿಳೆಯರಿಗೆ ಸ್ವ ಉದ್ಯೋಗ ಸಹಕಾರಿ, ಕಸೂತಿ ತಯಾರಿ ತರಬೇತಿಗೆ ಚಾಲನೆ ನೀಡಿ ಬಿ.ರಾಜೇಂದ್ರ ರೈ ಅನಿಸಿಕೆ

    ಮಂಗಳೂರು: ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ಸ್ವ ಉದ್ಯೋಗ ಮಾಡಲು ಮುಂದೆ ಬರಬೇಕು. ಮಹಿಳೆಯರು ತರಬೇತಿ ಹೊಂದಿ ಬ್ಯಾಂಕ್‌ನಿಂದ ಸಾಲ ಸೌಲಭ್ಯ ಪಡೆದು ಉದ್ಯೋಗದಲ್ಲಿ ಯಶಸ್ವಿಯಾಗಬೇಕು ಎಂದು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಬಿ.ರಾಜೇಂದ್ರ ರೈ ಹೇಳಿದರು.

    ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಪ್ರಾಯೋಜಕತ್ವ, ಭಾರತೀಯ ವಿಕಾಸ ಟ್ರಸ್ಟ್ ನೇತೃತ್ವದಲ್ಲಿ, ಕೊಲ್ಯದ ಶ್ರೀ ಸ್ವಾಮಿ ರಮಾನಂದ ಹೊಲಿಗೆ ತರಬೇತಿ ಕೇಂದ್ರದಲ್ಲಿ 15 ದಿನಗಳ ಬಟ್ಟೆ ಕಸೂತಿ ತಯಾರಿ (ಆರಿ ವರ್ಕ್) ತರಬೇತಿಗೆ ಚಾಲನೆ ನೀಡಿ ಮಾತನಾಡಿದರು.

    ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಸಿಇಒ ಸಚಿನ್ ಹೆಗ್ಡೆ ಮಾತನಾಡಿ, ಮಹಿಳೆಯರು ಸ್ವ ಉದ್ಯೋಗ ತರಬೇತಿ ಪಡೆದು ಉತ್ತಮ ಆದಾಯ ಗಳಿಸಲು ಈ ತರಬೇತಿ ಸಹಕಾರಿಯಾಗಲಿ ಎಂದು ಹಾರೈಸಿದರು.

    ಶ್ರೀ ಸ್ವಾಮಿ ರಮಾನಂದ ಮಾತೃ ಮಂಡಳಿ ಅಧ್ಯಕ್ಷೆ ಸುಲೋಚನಿ, ಅಂಗನವಾಡಿ ಕಾರ್ಯಕರ್ತೆ ತುಳಸಿ, ಅಮೂಲ್ಯ ಸಾಕ್ಷರತಾ ಯೋಜನೆಯ ಸಮಾಲೋಚಕ ಲತೇಶ್, ಭಾರತೀಯ ವಿಕಾಸ ಟ್ರಸ್ಟ್‌ನ ಕಾರ್ಯಕ್ರಮ ವ್ಯವಸ್ಥಾಪಕ ಜೀವನ್ ಕೊಲ್ಯ, ಗುಲಾಬಿ ಉಪಸ್ಥಿತರಿದ್ದರು. ದಿವ್ಯಲತಾ ಸ್ವಾಗತಿಸಿ, ವನಿತಾ ವಂದಿಸಿ, ಜೀವನ್ ಕಾರ್ಯಕ್ರಮ ನಿರೂಪಿಸಿದರು. ಸೋಮೇಶ್ವರ ಗ್ರಾಮ ವ್ಯಾಪ್ತಿಯ 30 ಮಹಿಳೆಯರು ತರಬೇತಿ ಪಡೆಯಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts