More

    ಪೊಲೀಸ್​​​ ಠಾಣೆಗಳಲ್ಲಿ ‘ಶೆಡ್​’ ಆಗಿ ನಿಂತಿದ್ದ ಸಾವಿರಾರು ವಾಹನಗಳು: ಹೈಕೋರ್ಟ್​​​​ ಹೇಳಿದ್ದು ಹೀಗೆ…

    ಬೆಂಗಳೂರು: ಅಪರಾಧ ಪ್ರಕರಣಗಳಲ್ಲಿ ಜಪ್ತಿ ಮಾಡಿದ ವಾಹನಗಳ ಶೀಘ್ರ ವಿಲೇವಾರಿಗೆ ಹೈಕೋರ್ಟ್ ಸೂಚನೆ ನೀಡಿದೆ. ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಪೀಠ, ಬಾಂಡ್ ಪಡೆದುಕೊಂಡು ವಾಹನಗಳನ್ನು ಶೀಘ್ರವಾಗಿ ಬಿಡುಗಡೆ ಮಾಡಲು ಸೂಚನೆ ನೀಡಿದೆ. ಧನತೇಜಾ ಎಂಬುವವರು ಹೈಕೋರ್ಟ್​​​​​ಗೆ ಅರ್ಜಿ ಸಲ್ಲಿಸಿದ್ದರು. ಈ ವಿಚಾರಣೆ ವೇಳೆ ನ್ಯಾಯಾಲಯದಿಂದ ಆದೇಶ ಹೊರಬಿದ್ದಿದೆ.

    ‘ಅನಗತ್ಯವಾಗಿ ಠಾಣೆಗಳ ಮುಂದೆ ವಾಹನಗಳನ್ನು ನಿಲ್ಲಿಸುವುದರಿಂದ ಯಾವುದೇ ಪ್ರಯೋಜನ ಇಲ್ಲ, ಇದರ ಬದಲಾಗಿ ಬಾಂಡ್ ಪಡೆದು ತ್ವರಿತವಾಗಿ ವಿಲೇವಾರಿ ಮಾಡಬೇಕು..’ ಎಂದು ಹೈಕೋರ್ಟ್ ಹೇಳಿದೆ.

    ನಗರದ ಪೊಲೀಸ್ ಠಾಣೆಗಳಲ್ಲಿ ಸಾವಿರಾರು ವಾಹನಗಳು ಬಿಡುಗಡೆಯಾಗದೆ ಪೊಲೀಸ್​​ ಠಾಣೆಗಳ ಸುಪರ್ದಿಯಲ್ಲೇ ಇವೆ. ಇದರಿಂದ ಸಾರ್ವಜನಿಕರಿಗೂ ಕಿರಿಕಿರಿ, ಪೊಲೀಸ್ ಸಿಬ್ಬಂದಿಗಳಿಗೂ ತೊಂದರೆ ಆಗುತ್ತಿತ್ತು. ಹಲವೆಡೆ ಟ್ರಾಫಿಕ್​​ ಸಮಸ್ಯೆಯೂ ಎದುರಾಗುತ್ತಿತ್ತು. ಈಗ ಹೈಕೋರ್ಟ್​​​ ಸೂಚನೆಯಿಂದ ಜನರಿಗೆ ಆಗುತ್ತಿದ್ದ ಅನಗತ್ಯ ತೊಂದರೆಗೆ ಫುಲ್​​ಸ್ಟಾಪ್​​ ಬಿದ್ದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts