ಕೆ.ಆರ್​. ಪೇಟೆಯಲ್ಲಿ ಇಬ್ಬರು ಮಹಿಳಾ ಕಾನ್​ಸ್ಟೆಬಲ್​ಗಳಿಗೆ ಠಾಣೆಯಲ್ಲೇ ಶಾಸ್ತ್ರೋಕ್ತ ಸೀಮಂತ! ಸಾರ್ವಜನಿಕರಿಂದ ಮೆಚ್ಚುಗೆ

Seemantha
Published on

ಮಂಡ್ಯ: ಕೆಲಸವನ್ನು ಬದಿಗಿಟ್ಟು ಠಾಣೆಯಲ್ಲಿದ್ದ ಎಲ್ಲ ಪೊಲೀಸ್ ಸಿಬ್ಬಂದಿ ಕಾರ್ಯಕ್ರಮವೊಂದರ ಸಿದ್ಧತೆಯಲ್ಲಿದ್ದರು. ಕಾರಣ ತಮ್ಮ ಠಾಣೆಯ ಮಹಿಳಾ ಸಿಬ್ಬಂದಿಯೊಬ್ಬರ ಸೀಮಂತ ಕಾರ್ಯ. ಕೆ.ಆರ್​. ಪೇಟೆಯ ಟೌನ್ ಪೊಲೀಸ್ ಠಾಣೆಯ ಪೊಲೀಸರೆಲ್ಲರು ಸೇರಿಕೊಂಡು ಠಾಣೆಯಲ್ಲಿ ತುಂಬು ಗರ್ಭಿಣಿಯರಿಗೆ ಬಾಗಿನ ನೀಡಿ, ಸೀಮಂತ ಕಾರ್ಯದ ಮೂಲಕ ಹೆರಿಗೆಗೆ ಬೀಳ್ಕೋಟ್ಟಿದ್ದಾರೆ.

Seemantha Shastra, Mandya

ಇಬ್ಬರು ಮಹಿಳಾ ಪೊಲೀಸ್ ಸಿಬ್ಬಂದಿಗೆ ಮಡಿಲಕ್ಕಿ ತುಂಬಿ ಸೀಮಂತ ಮಾಡುವ ಮೂಲಕ ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆ ಎಲ್ಲರ ಗಮನ ಸೆಳೆದಿದೆ. ಶಾರದಾ ಮತ್ತು ಅಸ್ಮಬಾನು ಎಂಬ ಮಹಿಳಾ ಪೇದೆಗಳಿಗೆ ಸೀಮಂತ ಕಾರ್ಯ ಮಾಡಿ, ಶುಭ ಹಾರೈಸಿ ಪೋಲಿಸ್ ಇನ್ಸ್​ಪೆಕ್ಟರ್​​ ಸುಮಾರಾಣಿ ಅವರು ಬೀಳ್ಕೊಟ್ಟಿದ್ದಾರೆ.

ಠಾಣೆಯ ಎಲ್ಲ ಸಿಬ್ಬಂದಿ ಸೇರಿ ಇಬ್ಬರು ಮಹಿಳಾ ಪೇದೆಗಳಿಗೆ ಉಡಿ ತುಂಬಿ, ಮಡಿಲಕ್ಕಿ ಹಾಕಿ, ಕೊಬ್ಬರಿ ಬೆಲ್ಲ, ತೆಂಗಿನಕಾಯಿ, ಅರಿಶಿಣ-ಕುಂಕುಮ ಹಾಗೂ ಬಳೆಗಳನ್ನು ನೀಡಿ, ಕೆಲಸದ ಒತ್ತಡದ ನಡುವೆಯೂ ಅರ್ಥಪೂರ್ಣವಾಗಿ ಸೀಮಂತ ಕಾರ್ಯ ಮಾಡಿದ್ದಾರೆ. ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Seemantha Shastra, Mandya

ಮಂಡ್ಯ ಯುವಕನ ಕೊಲೆ

ತಿಪಟೂರು ನಗರದ ಕೆ.ಆರ್.ಬಡಾವಣೆಯಲ್ಲಿ ಶನಿವಾರ ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಹೊಸಕೆರೆಯ ಮಹೇಂದ್ರ(34) ಎಂಬುವವನ ಮೃತದೇಹ ಪತ್ತೆಯಾಗಿದ್ದು ಕೊಲೆ ಎಂದು ಶಂಕಿಸಲಾಗಿದೆ. ಶನಿವಾರ ಬೆಳಗ್ಗೆ ಈತನ ತೊಡೆಯ ಭಾಗದಲ್ಲಿ ಚಾಕುವಿನಿಂದ ಇರಿಯಲಾಗಿದ್ದು ತೀವ್ರ ರಕ್ತಸ್ರಾವದಿಂದ ಬಿದ್ದು ಒದ್ದಾಡಿದ್ದಾನೆ, ಚೀರಾಟ ಗಮನಿಸಿದ ಸ್ಥಳೀಯರು 108 ಆಂಬುಲೆನ್ಸ್ಗೆ ಕರೆ ಮಾಡಿದರೂ ಪ್ರಾಣ ಹೋಗಿದೆ.

ಮೃತನ ಬಳಿಯಿಂದ ಬ್ಯಾಗ್‌ನಲ್ಲಿದ್ದ ಕಾಗದಗಳಿಂದ ವಿಳಾಸ ಪತ್ತೆಯಾಗಿದೆ, ನಗರಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net