More

    ಬೈಲಹೊಂಗಲ: ಸೀಡ್ ಪಾಲಿಸಿಯಿಂದ ಜೀವ ವೈವಿಧ್ಯತೆ ಸಂಪೂರ್ಣ ಹಾಳು

    ಬೈಲಹೊಂಗಲ: ಸೀಡ್ ಪಾಲಿಸಿ-2019 ಜಾರಿಗೆಯಾದರೆ ರೈತರ ಹಿತ ಬೀಜ ಕಂಪನಿಗಳಿಗೆ ಮಾರಾಟವಾಗುತ್ತದೆ. ಹಾಗಾಗಿ ಪಾಲಿಸಿ ಜಾರಿ ಮಾಡಬಾರದು ಎಂದು ಸವದತ್ತಿ ಎಪಿಎಂಸಿ ಸದಸ್ಯ ಎಫ್.ಎಸ್.ಸಿದ್ದನಗೌಡರ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

    ಭಾರತೀಯ ಕೃಷಿಕ ಸಮಾಜ ನವದೆಹಲಿ ವತಿಯಿಂದ ಶನಿವಾರ ಎಸಿ ಮೂಲಕ ಪ್ರಧಾನಮಂತ್ರಿ ಮತ್ತು ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ ಮಾತನಾಡಿ, ಪಾಲಿಸಿ ಜಾರಿಯಾದಲ್ಲಿ ಬಿತ್ತನೆ ಬೀಜ ವಿಧೇಯಕ ರೈತರ ಜೀವನದ ಮೇಲೆ ತೂಗುಗತ್ತಿಯಾಗಲಿದೆ. ಭಾರತೀಯ ಬೀಜ ವೈವಿಧ್ಯತೆ ಸಂಪೂರ್ಣ ಹಾಳಾಗುತ್ತದೆ. ಆದ್ದರಿಂದ ಸರ್ಕಾರ ಈ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಕಮತ ಮಾತನಾಡಿ, ಕೇಂದ್ರ ಸರ್ಕಾರ 2104ರಲ್ಲಿ ಈ ಕಾಯ್ದೆ ಜಾರಿಗೆ ತರಲು ಪ್ರಯತ್ನಿಸಿತ್ತು. ರೈತರಿಂದ ಬಾರಿ ಪ್ರತಿರೋಧ ವ್ಯಕ್ತವಾಗಿತ್ತು. ಭಾರತದಲ್ಲಿ ಬಿಟಿ ಕಂಪನಿಯ ಕುಲಾಂತರಿ ಬೀಜಗಳ ಹಾವಳಿ ಹೆಚ್ಚಾಗಿ ಪ್ರತಿಯೊಬ್ಬರು ವಿಷ ಆಹಾರ ಸೇವಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಈ ನೀತಿಯನ್ನು ಸಂಪೂರ್ಣ ರದ್ದುಗೊಳಿಸಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದರು. ಜಿಲ್ಲಾ ಕಾರ್ಯಾಧ್ಯಕ್ಷ ಈರಪ್ಪ ಹುಬ್ಬಳ್ಳಿ, ಕಾರ್ಯದರ್ಶಿ ಸುರೇಶ ಹೊಳಿ, ನ್ಯಾಯವಾದಿ ಎಂ.ಎಂ.ಅಬ್ಬಾಯಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts