More

    ದೇಶದ್ರೋಹ ಪ್ರಕರಣ : ನಟಿ ಆಯಿಷಾ ಸುಲ್ತಾನಗೆ ನಿರೀಕ್ಷಣಾ ಜಾಮೀನು

    ತಿರುವನಂತಪುರಂ: ದೇಶದ್ರೋಹ ಪ್ರಕರಣ ಎದುರಿಸುತ್ತಿರುವ ಲಕ್ಷದ್ವೀಪ ಮೂಲದ ನಟಿ-ರೂಪದರ್ಶಿ​ ಆಯಿಷಾ ಸುಲ್ತಾನ ಅವರಿಗೆ ಕೇರಳ ಹೈಕೋರ್ಟ್​ ಇಂದು ನಿರೀಕ್ಷಣಾ ಜಾಮೀನು ನೀಡಿದೆ.

    ಆಯಿಷಾ ವಿರುದ್ಧ ಲಕ್ಷದ್ವೀಪ ಬಿಜೆಪಿ ಅಧ್ಯಕ್ಷ ಅಬ್ದುಲ್​ ಖಾದರ್​ ಅವರು ನೀಡಿರುವ ದೂರಿನ ಮೇಲೆ ಕವರತ್ತಿ ಪೊಲೀಸ್​ ಠಾಣೆಯಲ್ಲಿ ಐಪಿಸಿ ಸೆಕ್ಷನ್​ 124 ಎ ಅಡಿಯಲ್ಲಿ (ದೇಶದ್ರೋಹ) ಮತ್ತು 153 ಬಿ ಅಡಿಯಲ್ಲಿ (ದ್ವೇಷ ಭಾಷಣ) ಪ್ರಕರಣ ದಾಖಲಾಗಿದೆ. ಮಲಯಾಳಂ ಟಿವಿ ಚಾನೆಲ್​ನಲ್ಲಿ ಪ್ರಸಾರವಾದ ಚರ್ಚಾ ಕಾರ್ಯಕ್ರಮದ ವೇಳೆ, ಲಕ್ಷದ್ವೀಪದಲ್ಲಿ ಕರೊನಾ ಹರಡಿಸಲು ಕೇಂದ್ರ ಸರ್ಕಾರ ಜೈವಿಕ ಅಸ್ತ್ರ ಬಳಸಿದೆ ಎಂದು ಆಯಿಷಾ ಗಂಭೀರ ಆರೋಪ ಮಾಡಿದ್ದು, ಸರ್ಕಾರದ ವರ್ಚಸ್ಸಿಗೆ ಧಕ್ಕೆ ತಂದಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

    ಇದನ್ನೂ ಓದಿ: ಲಸಿಕೆಗೆ ಒತ್ತಾಯಿಸುವುದು, ಸೌಲಭ್ಯ ಕಟ್‌ ಎನ್ನುವ ಬೆದರಿಕೆ ಹಾಕುವುದು ಕಾನೂನುಬಾಹಿರ ಎಂದ ಹೈಕೋರ್ಟ್‌

    ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವು ನಾನ್​ಬೇಲಬಲ್​ ಆಗಿರುವುದರಿಂದ ನಿರೀಕ್ಷಣಾ ಜಾಮೀನು ಕೋರಿ ಜೂನ್ 14 ರಂದು ಕೇರಳ ಹೈಕೋರ್ಟ್​ನಲ್ಲಿ ಆಯಿಷಾ ಅರ್ಜಿ ಸಲ್ಲಸಿದ್ದರು. ತಮ್ಮ ಮಾತುಗಳು ಯಾವುದೇ ದುರುದ್ದೇಶದಿಂದ ಕೂಡಿರಲಿಲ್ಲ. ತಮಗೆ ತೊಂದರೆ ಕೊಡುವ ಉದ್ದೇಶದಿಂದ ದೂರು ದಾಖಲಿಸಲಾಗಿದೆ ಎಂದು ಆಯಿಷಾ ಹೇಳಿದ್ದರು. (ಏಜೆನ್ಸೀಸ್)

    ಡೆಲ್ಟಾ ಪ್ಲಸ್ ಸೋಂಕಿನಿಂದ ಒಬ್ಬರು ಗುಣಮುಖ: ಸಚಿವ ಸುಧಾಕರ್ ಮಾಹಿತಿ

    ಟ್ವಿಟರ್ ಇಂಡಿಯ ಎಂಡಿಗೆ ಕರ್ನಾಟಕ ಹೈಕೋರ್ಟ್​ ರಿಲೀಫ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts