More

    ದಿಂಗಾಲೇಶ್ವರ ಶ್ರೀಗಳಿಗೆ ಪೊಲೀಸ್ ರಕ್ಷಣೆ: ಮನವಿ

    ಲಕ್ಷ್ಮೇಶ್ವರ: ನಾಡಿನ ಧಾರ್ಮಿಕ ಕ್ಷೇತ್ರದ ಹೆಸರಾಂತ ಶ್ರೀ ಶಿರಹಟ್ಟಿ ಫಕೀರೇಶ್ವರ ಸಂಸ್ಥಾನದ ಮಠದ ಉತ್ತರಾಧಿಕಾರಿಗಳಾದ ಜ.ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳ ಮೇಲೆ ಯಾರೂ ಸಂಚು ರೂಪಿಸುತ್ತಿರುವುದು ಕಾರಣ ಸರ್ಕಾರ ಸೂಕ್ತ ರಕ್ಷಣೆ, ಭದ್ರತೆ ಕಲ್ಪಿಸಲೇಬೇಕು ಸರ್ಕಾರ ಇದನ್ನು ಭಕ್ತರ ಪರವಾದ ಮನವಿ ಎಂದಾದರೂ ಭಾವಿಸಲಿ ಇಲ್ಲವೇ ಎಚ್ಚರಿಕೆ ಎಂದಾದರೂ ಭಾವಿಸಲಿ ಎಂದು ಶಿರಹಟ್ಟಿ ಮತ್ತು ಬಾಲೇಹೊಸೂರ ಮಠದ ಭಕ್ತ, ಕಾಂಗ್ರೇಸ್ ಮುಖಂಡ ಫಕ್ಕೀರೇಶ ಮ್ಯಾಟಣ್ಣವರ ಆಗ್ರಹಿಸಿದ್ದಾರೆ.
    ಅವರು ಸೋಮವಾರ ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಈ ನಾಡಿನ ಶ್ರೇಷ್ಠ ಪ್ರವಚನಕಾರರು, ಸದ್ಗುಣಗಳ ಧೀಕ್ಷೆ-ದುಶ್ಚಟಗಳ ಭೀಕ್ಷೆ ಎಂಬ ಸಂದೇಶವನ್ನು ನಾಡಿನ ನೀಡುತ್ತಾ ಸಮಾಜ ಸುಧಾರಣೆ ಮತ್ತು ಧರ್ಮಪ್ರವರ್ತಕರೂ, ತ್ರಿವಿಧ ದಾಸೋಹಿಗಳೂ ಮತ್ತು ಸಮಾಜದಲ್ಲಿ ನಡೆಯುವ ಅನ್ಯಾಯ, ಭ್ರಷ್ಟಾಚಾರ,ಅಭಿವೃದ್ಧಿ ವಿಚಾರ, ಯಾವುದೇ ಸರ್ಕಾರದ ಜನ ಜನವಿರೋಧಿ ಆಡಳಿತ, ನೀತಿಯನ್ನು ಎಚ್ಚರಿಸಿ ಸರಿ ದಾರಿಗೆ ತರುವಲ್ಲಿ ತಮ್ಮನ್ನೇ ತೊಡಗಿಸಿಕೊಂಡಿರುವ ಅತ್ಯಂತ ಪ್ರಭಾವಶಾಲಿ ಜಗದ್ಗುರುಗಳಾಗಿದ್ದಾರೆ.
    ಧರ್ಮಕ್ಕೆ ಧಕ್ಕೆ, ಮಠಾದೀಶರು ಸೇರಿ ಶ್ರೀ ಸಾಮಾನ್ಯರಿಗೆ ಅನ್ಯಾಯ, ಮಠಮಾನ್ಯಗಳ, ಸರ್ಕಾರದ ಆಸ್ತಿ ಕಬಳಿಕೆ ಹುನ್ನಾರ ನಡೆದಾದ ಒಟ್ಟಿನಲ್ಲಿ ಏನೇ ಅನ್ಯಾಯ-ಅಕ್ರಮ ನಡೆದರೂ ಎಂತಹದ್ದೇ ಶಕ್ತಿಯನ್ನು ಎದುರಿಸಿ ನಿಲ್ಲುವ ಸತ್ಯ-ನಿಷ್ಠೆಯ ದಿಟ್ಟ ಶ್ರೀಗಳು ಸಮಾಜದ ಆಸ್ತಿಯಾಗಿದ್ದಾರೆ. ಅವರು ಶಿರಹಟ್ಟಿ ಮಠದ ಉತ್ತರಾಧಿಕಾರಿಗಳಾದ ನಂತರ ಮತ್ತು ಅದಕ್ಕಿಂತ ಮೊದಲೂ ಅವರ ಮೇಲೆ ಸಂಚು ರೂಪಿಸುವ, ಅವರ ಧೈರ್ಯ ಕುಂದಿಸುವ ಕೆಲಸ ನಡೆಯುತ್ತಾ ಬಂದಿದೆ. ಜು.೧೨ ರ ರಾತ್ರಿ ಮೂವರು ಅಪರಿಚಿತ, ಹಿಂದಿ ಮಾತನಾಡುವ ವ್ಯಕ್ತಿಗಳು ಶಿರಹಟ್ಟಿ ಮಠದ ಕಂಪೌAಡ್ ಹಾರಿ ಅವರು ವಾಸಿಸುವ ಕೊಠಡಿಯತ್ತ ಧಾವಿಸಿದ್ದಾರೆ. ಭಕ್ರರು ನೋಡಿ ಕೂಗುತ್ತಿದ್ದಂತೆಯೇ ಪರಾರಿಯಾಗಿದ್ದಾರೆ. ಅವರ ಮೇಲೆ ಹಲವಾರು ಭಾರಿ ದಾಳಿ ಮಾಡುವ ಪ್ರಯತ್ನವಾಗಿದ್ದರೂ ಅವರ ಮೇಲಿರುವ ದೇವರ-ಗುರುಗಳ ಆಶೀರ್ವಾದ, ಕೋಟ್ಯಾಂತರ ಭಕ್ತರ ಪ್ರಾರ್ಥನೆ ಶ್ರೀಗಳಿಗೆ ಶ್ರೀರಕ್ಷೆಯಾಗಿದೆ.
    ನಾಡಿನ ಭಕ್ತಗಣ ಆಸ್ತಿಯಾಗಿರುವ ಶ್ರೀಗಳ ಮೇಲೆ ಆಗಾಗ್ಗೆ ನಡೆಯುತ್ತಿರುವ ಸಂಚುಗಳ ಬಗ್ಗೆ ಪೊಲೀಸ್ ಇಲಾಖೆಗೆ ಸಂಪೂರ್ಣ ಮಾಹಿತಿ ಇದೆ. ಇತ್ತೀಚಿನ ದಿನಗಳಲ್ಲಿ ಈ ನಾಡಿನ ಅನೇಕ ಸ್ವಾಮೀಜಿಗಳು, ಸಂತರು, ಮುನಿಗಳು, ಸಾಹಿತಿಗಳು ಸೇರಿ ಪ್ರಭಾವಿಗಳ ಹತ್ಯೆ, ಹಲ್ಲೆ ನಡೆದಿರುವುದು ಗಮನಾರ್ಹ. ಅಲ್ಲದೇ ಶಿರಹಟ್ಟಿ ಮಠದ ಉತ್ತರಾಧಿಕಾರಿಗಳಾದ ಮೇಲೆ ಅವರು ಶ್ರೀಮಠದ ಎಲ್ಲ ಶಾಖಾಮಠ, ಶಾಲಾ-ಕಾಲೇಜು ಆಡಳಿತ ಸುಧಾರಣೆ, ಮಠದ ಆಸ್ತಿಗಳ ಸಂರಕ್ಷಣೆ ಮತ್ತು ಲೆಕ್ಕಬಾಕಿ ಪರಿಶೀಲನೆಯಿಂದ ಅನೇಕರಿಗೆ ತೊಂದರೆ-ಇರುಸು-ಮುರುಸಾಗಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಇತ್ತೀಚಿನ ದಿನಗಳಲ್ಲಿ ಮಠದಲ್ಲಿನ ಆಸ್ತಿಗಳನ್ನು ಹಾಳು ಮಾಡುವುದು, ಅಪರಿಚಿತರುಗಳು ಶ್ರೀಗಳ ಚಲನ-ವಲನ ಗಮನಿಸುವುದು, ಭೀತಿ ಹುಟ್ಟಿಸುವ ಕೆಲಸ ಮಾಡುತ್ತಿರುವುದು ಭಕ್ತರಲ್ಲಿ ಆತಂಕ ಮೂಡಿಸಿದೆ. ಈಗಾಗಲೇ ಅವರ ರಕ್ಷಣೆಗಾಗಿ ಶ್ರೀಗಳು, ಭಕ್ತರು ಪೊಲೀಸ್‌ಠಾಣೆ ಮೆಟ್ಟಲೇರಿದ್ದಾರೆ. ಈ ಹಿಂದಿನಿAದಲೂ ಶ್ರೀಗಳಿಗೆ ರಕ್ಷಣೆ ಕಲ್ಪಿಸಬೇಕು ಎಂಬುದು ಭಕ್ತರ ಕೂಗು ಆದ್ದರಿಂದ ಈ ನಾಡಿನ ಮುಖ್ಯಮಂತ್ರಿಗಳು, ಗೃಹಮಂತ್ರಿಗಳು, ಜಿಲ್ಲಾಉಸ್ತುವಾರಿ ಸಚಿವರು, ಪೊಲೀಸ್ ಇಲಾಖೆ, ಜಿಲ್ಲಾಡಳಿತ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಶ್ರೀಗಳಿಗೆ ಸಂರಕ್ಷಣೆ, ಭದ್ರತೆಗಾಗಿ ಅಂಗರಕ್ಷಕರನ್ನು ನೇಮಿಸಬೇಕು. ಇಷ್ಟಾಗಿಯೂ ಶ್ರೀಗಳಿಗೇನಾದರೂ ತೊಂದರೆಯಾದಲ್ಲಿ ಭಕ್ತ ಸಮೂಹ ಸರ್ಕಾರದ ವಿರುದ್ಧ ಧಂಗೆ ಏಳಬೇಕಾಗುತ್ತದೆ ಎಂದು ಎಚ್ಚರಿಸಿದರು.
    ಈ ವೇಳೆ ಭಕ್ತರಾದ ಮಾರ್ತಂಡಪ್ಪ ಪೆದ್ದರ, ಮುತ್ತಣ್ಣ ಗುಳೇದ, ಹನಮಂತಪ್ಪ ಕೋಣನತಂಬಗಿ, ಶಂಬಣ್ಣ ಯಳವತ್ತಿ, ಸಿದ್ದಣ್ಣ ಮರಳಿಹಳ್ಳಿ, ಜುಂಜಪ್ಪ ಮುದಿಯಮ್ಮನವರ, ಜಗದೀಶ ಹುಲ್ಲಮ್ಮನವರ, ಫಕ್ಕಿರೇಶ ನಾವಿ, ಹನಮಂತಪ್ಪ ದೊಡ್ಡಮನಿ, ರಾಜು ಬಾಲೆಹೊಸೂರ ಸೇರಿ ಹಲವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts