More

    ಸಹಾಯ ಮಾಡಿದ್ದೇ ತಪ್ಪಾ? ಲಿಫ್ಟ್​ನಲ್ಲಿ ಸಿಲುಕಿದ್ದವನನ್ನು ಕಾಪಾಡಿದ್ದಕ್ಕೆ ಸೆಕ್ಯೂರಿಟಿ ಗಾರ್ಡ್​ಗೆ ಕಪಾಳಮೋಕ್ಷ

    ಚಂಡೀಗಢ: ಸಹಾಯ ಮಾಡಿದರೆ ಕೃತಜ್ಞತೆ ಸಲ್ಲಿಸುವುದನ್ನು ನೋಡಿದ್ದೇವೆ. ಆದರೆ, ಇಲ್ಲೊಬ್ಬ ವ್ಯಕ್ತಿ ಸಕಾಲಕ್ಕೆ ನೆರವಾದ ವ್ಯಕ್ತಿಗೆ ಕಪಾಳ ಮೋಕ್ಷ ಮಾಡುವ ಮೂಲಕ ದುರಹಂಕಾರ ಮೆರೆದು, ಪೊಲೀಸರ ಅತಿಥಿಯಾಗಿದ್ದಾನೆ. ಈ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.

    ಬಂಧಿತ ವ್ಯಕ್ತಿಯನ್ನು ವರುಣ್​ ನಾಥ್​ ಎಂದು ಗುರುತಿಸಲಾಗಿದೆ. ಅಲ್ಲದೆ, ಆತನಿಗೆ ಜಾಮೀನಿನ ಜೊತೆಗೆ ಎಚ್ಚರಿಕೆಯನ್ನು ನೀಡಿ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಗುರುಗ್ರಾಮದ ನಿರ್ವಾಣ ಕಂಟ್ರಿಯ ಕ್ಲೋಸ್​ ನಾರ್ಥ್​ ಸೊಸೈಟಿಯಲ್ಲಿ ಈ ಘಟನೆ ನಡೆದಿದ್ದು, ಇಡೀ ಪ್ರಕರಣ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಆರೋಪಿ ವರುಣ್​, ಕ್ಲೋಸ್​ ನಾರ್ಥ್ ಸೊಸೈಟಿಯ ನಿವಾಸಿ. 14ನೇ ಮಹಡಿಯಿಂದ ಲಿಫ್ಟ್​ನಲ್ಲಿ ಬರುತ್ತಿರುವಾಗ ಇದ್ದಕ್ಕಿದ್ದಂತೆ ಲಿಫ್ಟ್​ ನಿಂತು ಹೋಗಿದೆ. ಅಲ್ಲಿಯೇ ಸಿಲುಕಿಕೊಂಡ ವರುಣ್​, ತಕ್ಷಣ ಸೆಕ್ಯುರಿಟಿ ಗಾರ್ಡ್​ಗೆ ಲಿಫ್ಟ್​ ಒಳಗೆ ಅಳವಡಿಸಿದ್ದ ಇಂಟರ್ಕಾಮ್​ ಮೂಲಕ ಮಾಹಿತಿ ನೀಡಿದ್ದಾರೆ. ತಕ್ಷಣ ಲಿಫ್ಟ್​ ಮ್ಯಾನ್​ ಜೊತೆಗೆ ಸ್ಥಳಕ್ಕೆ ಧಾವಿಸಿದ ಸೆಕ್ಯುರಿ ಗಾರ್ಡ್​ ಅಶೋಕ್​, ಐದೇ ನಿಮಿಷದಲ್ಲಿ ವರಣ್​​ ಅವರನ್ನು ಲಿಫ್ಟ್​ನಿಂದ ಹೊರ ಕರೆತರುವ ಮೂಲಕ ರಕ್ಷಿಸಿದ್ದಾರೆ.

    ಲಿಫ್ಟ್​ನಿಂದ ಹೊರಬರುತ್ತಿದ್ದಂತೆ ಕೋಪಗೊಂಡಿದ್ದ ವರುಣ್​, ಸೆಕ್ಯುರಿಟಿ ಗಾರ್ಡ್​ ಮೇಲೆ ಹಲ್ಲೆ ಮಾಡಿದ್ದಾನೆ. ವರುಣ್​ ತಪ್ಪು ಮಾಡಿರುವುದು ಸಿಸಿಟಿವಿಯಲ್ಲಿ ಬಯಲಾಯಿತು. ಈ ಘಟನೆಯ ಬೆನ್ನಲ್ಲೇ ಕೆಲವೊತ್ತು ಕೆಲಸ ನಿಲ್ಲಿಸಿದ ಸೆಕ್ಯೂರಿಟಿ ಗಾರ್ಡ್​ಗಳು ಸೊಸೈಟಿಯ ನಿವಾಸಿಗಳ ವಿರುದ್ಧ ಅಸಮಾಧಾನ ಹೊರಹಾಕಿದರು. ಸೇವೆಯನ್ನು ಒದಗಿಸಲು ಹಗಲಿರುಳು ಶ್ರಮಿಸುತ್ತೇವೆ. ಆದರೆ ಕೆಲವು ನಿವಾಸಿಗಳು ನಮ್ಮನ್ನು ಗುಲಾಮರಂತೆ ಪರಿಗಣಿಸುತ್ತಾರೆ. ಆರೋಪಿ ವರುಣ್ ನಾಥ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

    3-4 ನಿಮಿಷಗಳಲ್ಲಿ ಲಿಫ್ಟ್‌ನಿಂದ ಹೊರಬರಲು ನಾನು ಅವರಿಗೆ ಸಹಾಯ ಮಾಡಿದೆ. ಅವರು ಹೊರಬಂದ ತಕ್ಷಣ ನನ್ನನ್ನು ಥಳಿಸಲು ಪ್ರಾರಂಭಿಸಿದರು ಎಂದು ಸಿಬ್ಬಂದಿ ಅಶೋಕ್ ಕುಮಾರ್ ಅಳಲು ತೋಡಿಕೊಂಡರು.

    ಪ್ರತಿಭಟನೆಯ ಬೆನ್ನಲ್ಲೇ ವರುಣ್​ ಅವರನ್ನು ಬಂಧಿಸಿದ ಪೊಲೀಸರು ಜಾಮೀನು ನೀಡಿ ಜೊತೆಗೆ ಎಚ್ಚರಿಕೆಯನ್ನೂ ನೀಡಿ ಮನೆಗೆ ಕಳುಹಿಸಿದ್ದಾರೆ. (ಏಜೆನ್ಸೀಸ್​)

    ರೈಲು ನಿಲ್ದಾಣದಲ್ಲಿ ತಾಯಿಯೊಂದಿಗೆ ಮಲಗಿದ್ದಾಗ ಕಳುವಾದ ಮಗು ಬಿಜೆಪಿ ನಾಯಕಿಯ ಮನೆಯಲ್ಲಿ ಪತ್ತೆ!

    ಕುತೂಹಲ ಮೂಡಿಸಿದ ನಟಿ ರಮ್ಯಾ ಟ್ವೀಟ್​: ಫ್ಯಾನ್ಸ್​ಗೆ ಸಿಹಿ ಸುದ್ದಿ ನೀಡಲು ಮುಹೂರ್ತ ಫಿಕ್ಸ್​

    ರಾಮನಗರದಲ್ಲಿ ಮಳೆ ನಿಂತರೂ ನಿಲ್ಲದ ಪ್ರವಾಹದ ಭೀತಿ: ಮಳೆ ಹಾನಿಯ ಸ್ಪಷ್ಟ ಚಿತ್ರಣ ಗೋಚರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts