More

    ರಾಮನಗರದಲ್ಲಿ ಮಳೆ ನಿಂತರೂ ನಿಲ್ಲದ ಪ್ರವಾಹದ ಭೀತಿ: ಮಳೆ ಹಾನಿಯ ಸ್ಪಷ್ಟ ಚಿತ್ರಣ ಗೋಚರ

    ರಾಮನಗರ: ರಣ ಮಳೆಗೆ ನಲುಗಿರುವ ರೇಷ್ಮೆ ನಾಡು ರಾಮನಗರದಲ್ಲಿ ಮಳೆ ಬಿಡುವು ನೀಡಿದ್ದರೂ ಪ್ರವಾಹದ ಭೀತಿ ಮಾತ್ರ ಹಾಗೇ ಇದೆ. ನಿನ್ನೆ ಸುರಿದ ಭಾರಿ ಮಳೆಗೆ ರಾಮನಗರದ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ಇಂದು ಮಳೆ ಕೊಂಚ ತಗ್ಗಿರುವುದರಿಂದ ಪ್ರವಾಹದಿಂದ ಉಂಟಾಗಿರುವ ಹೀನಾಯ ಸ್ಥಿತಿ ಕಣ್ಣಿಗೆ ಗೋಚರಿಸುತ್ತಿದೆ.

    ಇಂದು ಕೂಡ ಚನ್ನಪಟ್ಟಣದ ಬೀಡಿ ಕಾಲನಿ ಜಲಾವೃತಗೊಂಡಿದೆ. ನಿನ್ನೆಯಿಂದಲು ಕಾಲನಿ ಜಲಾವೃತಗೊಂಡಿದ್ದು, ನಿನ್ನಿಗಿಂತ ಅಲ್ಪ ಮಟ್ಟಿಗೆ ನೀರಿನ ಪ್ರಮಾಣ ತಗ್ಗಿದೆ. ಖುದ್ದು ಸಿಎಂ ಕೂಡ ಬೀಡಿ ಕಾಲನಿಗೆ ಭೇಟಿ ಕೊಟ್ಟಿ ಪರಿಶೀಲನೆ ನಡೆಸಿದ್ದಾರೆ. ಮನೆಗಳಲ್ಲಿನ ವಸ್ತುಗಳು ನೀರು ಪಾಲಾಗಿರುವುದರಿಂದ ಜನರು ಕಂಗಾಲಾಗಿದ್ದಾರೆ.

    ಕಾಲನಿಯ 250 ಮನೆಗಳಲ್ಲಿನ ಅಗತ್ಯ ವಸ್ತುಗಳು ನೀರು ಪಾಲಾಗಿದೆ. ಮತ್ತೆ ಮಳೆ ಬಂದ್ರೆ ಕತೆ ಏನು ಎಂಬ ಆತಂಕದಲ್ಲೆ ಜನರು ದಿನ ದೂಡುವಂತಾಗಿದೆ. ಸದ್ಯ ಸಿಎಂ ಬೊಮ್ಮಾಯಿ ಅವರು ಪರಿಹಾರದ ಭರವಸೆ ನೀಡಿದ್ದಾರೆ.

    ಕೈಗಾರಿಕಾ ಘಟಕ ಜಲಾವೃತ
    ಕನಕಪುರ ತಾಲೂಕಿನ ಕೈಗಾರಿಕಾ ಪ್ರದೇಶ ಜಲಾವೃತವಾಗಿದೆ. ಹಾರೋಹಳ್ಳಿಯಲ್ಲಿರುವ ಕೈಗಾರಿಕಾ ಘಟಕಗಳಿಗೆ ನೀರು ನುಗ್ಗಿದೆ. ಕರ್ಪೂರ ತಯಾರಿಕಾ ಘಟಕ ಸಂಪೂರ್ಣ ಜಲಾವೃತವಾಗಿದೆ. ರಸ್ತೆ ತುಂಬಾ ಮಳೆ ನೀರು ತುಂಬಿ ಹರಿಯುತ್ತಿದೆ.

    ಕೆರೆ ಏರಿ ಬಿರುಕು
    ರಾಮನಗರ ತಾಲೂಕಿನ ಮೇಗಳದೊಡ್ಡಿ ಕೆರೆ ಏರಿಯಲ್ಲಿ ಬಿರುಕು ಮೂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ. ಕೆರೆ ಏರಿ ಅಪಾಯಯದ ಹಂಚಿನಲ್ಲಿದ್ದು, ಏರಿ ಹೊಡೆದರೆ ಅಪಾರ ಹಾನಿಯಾಗುವ ಸಾಧ್ಯತೆ ಇದೆ. ಅನಾಹುತಕ್ಕೂ ಮುನ್ನ ಶೀಘ್ರ ಕೆರೆ ಏರಿ ದುರಸ್ಥಿಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

    ನಗರದಾದ್ಯಂತ ತಗ್ಗಿದ ಪ್ರವಾಹ ಪರಿಸ್ಥಿತಿ
    ರಾಮನಗರದಾದ್ಯಂತ ಪ್ರವಾಹ ಪರಿಸ್ಥಿತಿ ತಗ್ಗಿದೆ. ಆದರೆ, ಪ್ರವಾಹದ ಪ್ರಭಾವ ಮಾತ್ರ ಇನ್ನೂ ಹಾಗೇ ಇದೆ. ಸೀರೆಹಳ್ಳ ಮತ್ತು ಭಕ್ಷಿಕೆರೆ ಕೋಡಿ ನೀರಿನ ಹರಿವಿನ ಪ್ರಮಾಣ ಇಳಿಕೆಯಾಗಿದ್ದು, ಮಳೆ ಹಾನಿಯ ಚಿತ್ರಣ ಸ್ಪಷ್ಟವಾಗಿ ಗೋಚರವಾಗುತ್ತಿದೆ. ಅರ್ಕೇಶ್ವರ ಕಾಲನಿಯ ಪೆಟ್ರೋಲ್ ಬಂಕ್ ಸಂಪೂರ್ಣ ಹಾನಿಯಾಗಿದೆ. ನೀರಿನ ರಭಸಕ್ಕೆ ರಸ್ತೆ ಮತ್ತು ಸೇತುವೆ ಕೊಚ್ಚಿಹೋಗಿದೆ. (ದಿಗ್ವಿಜಯ ನ್ಯೂಸ್​)

    ಬಲವಂತವಾಗಿ ದನದ ಮಾಂಸ ತಿನ್ನಿಸಿದ ಪ್ರೇಯಸಿ: ಮನನೊಂದು ಸಾವಿನ ಹಾದಿ ಹಿಡಿದ ಹಿಂದು ಯುವಕ

    ಗಣೇಶ ಹಬ್ಬ ಹಿನ್ನೆಲೆ ಆ.31 ರಂದು ಪಾಲಿಕೆ ವ್ಯಾಪ್ತಿಯಲ್ಲಿ ಮಾಂಸ ಮಾರಾಟ, ಪ್ರಾಣಿ ವಧೆ ನಿಷೇಧಿಸಿ BBMP ಆದೇಶ

    ಪೊಲೀಸ್​ ಅಧಿಕಾರಿ ಆಗಬೇಕೆಂಬ ಕನಸು ಕಂಡಿದ್ದ ಯುವತಿ ದುರಂತ ಅಂತ್ಯ: ಮನಕಲಕುತ್ತೆ ಈಕೆಯ ಕತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts