More

    ಸೆಕ್ಯುಲರಿಸಂಅನ್ನು ತುಷ್ಟೀಕರಣ ಎಂದು ಬಿಂಬಿಸಲಾಗಿದೆ: ಪಿ. ಚಿದಂಬರಂ

    ಕಲ್ಕತ್ತಾ: ಇತ್ತೀಚಿನ ವರ್ಷಗಳಲ್ಲಿ ಸೆಕ್ಯುಲರಿಸಂ ಎಂಬ ಪದಕ್ಕೆ ಬೇರೆಯದ್ದೆ ಅರ್ಥವನ್ನು ಕೊಡಲಾಗಿದ್ದು, ಅದನ್ನು ತುಷ್ಠೀಕರಣವನ್ನಾಗಿ ಬದಲಾಯಿಸಲಾಗಿದೆ ಎಂದು ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್​ ನಾಯಕ ಪಿ. ಚಿದಂಬರಂ ಆರೋಪಿಸಿದ್ದಾರೆ.

    ಕಲ್ಕತ್ತಾದ ಸೇಂಟ್ ಕ್ಸೇವಿಯರ್ ವಿಶ್ವವಿದ್ಯಾಲಯದಲ್ಲಿ ನಡೆದ ‘Future of Democracy’ ವಿಚಾರ ಸಂಕೀರ್ಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸೆಕ್ಯುಲರಿಸಂ ಎಂಬ ಪದವನ್ನು ತಪ್ಪಾಗಿ ಅರ್ಥೈಸಲಾಗಿದೆ. ಈ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದಿದ್ದಾರೆ.

    ಇದನ್ನೂ ಓದಿ: ಪ್ರಶ್ನೆ ಕೇಳಲು ಲಂಚ ಪಡೆದ ಪ್ರಕರಣ; ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಸಿಬಿಐ

    ತುಷ್ಟೀಕರಣ ಎಂಬ ಪದವು ಸೆಕ್ಯುಲರಿಸಂ ವಿರುದ್ಧದ ಪದವಾಗಿ ಬಳಸಲಾಗುತ್ತಿದ್ದು, ನೀವು ಮುಸ್ಲಿಮರಾಗಿದ್ದರೆ ನಿಮ್ಮನ್ನು ನಾಗರೀಕರಂತೆ ಪರಿಗಣಿಸುವುದಿಲ್ಲ. ಚುನಾವಣೆಯಲ್ಲಿ ಧರ್ಮದ ಮಹತ್ವ ಯಾವತ್ತಿಗೂ ಪಾತ್ರ ವಹಿಸಬಾರದು. ಆದರೆ, ಇಂದಿನ ದಿನಗಳಲ್ಲಿ ಧರ್ಮ ಪ್ರಮುಖ ಪಾತ್ರ ವಹಿಸುತ್ತಿದ್ದು, ಅದು ಪ್ರಸ್ತುತ ವಿಚಾರವಾಗಿದೆ.

    ನಾವು ಪ್ರಜಾಪ್ರಭುತ್ವವನ್ನು ಉತ್ತೇಜಿಸುವ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿದ್ದೇವೆ. ಮಾಧ್ಯಮಗಳು, ಜನಸಾಮಾನ್ಯರು, ಜನಪ್ರತಿನಿಧಿಗಳು, ಅಧಿಕಾರಶಾಹಿಗಳು ಈಗ ಪ್ರತಿನಿತ್ಯ ಆತಂಕದಲ್ಲಿ ದಿನದೂಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವದ ವಿರೋಧಿಯಾಗಿದ್ದು, ಸರ್ಕಾರಿ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆರೋಪಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts