More

    ರೈತರ ‘ದೆಹಲಿ ಚಲೋ’: ಪಂಚಕುಲದಲ್ಲಿ ಸೆಕ್ಷನ್ 144 ಜಾರಿ, ಹರಿಯಾಣದ 7 ಜಿಲ್ಲೆಗಳಲ್ಲಿ ಮೊಬೈಲ್, ಇಂಟರ್‌ನೆಟ್ ಸ್ಥಗಿತ

    ಚಂಡೀಗಢ: ರೈತರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರವನ್ನು ಒತ್ತಾಯಿಸಲು ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ನೇತೃತ್ವದಲ್ಲಿ ಫೆ.13 ರಂದು 200 ಕ್ಕೂ ಹೆಚ್ಚು ರೈತ ಸಂಘಗಳೊಂದಿಗೆ ‘ದೆಹಲಿ ಚಲೋ’ ಬೃಹತ್ ಮೆರವಣಿಗೆ ಹಮ್ಮಿಕೋಂಡಿರುವ ಹಿನ್ನೆಲೆಯಲ್ಲಿ ಪಂಚಕುಲದಲ್ಲಿ ಸೆಕ್ಷನ್ 144 ಜಾರಿಗೊಳಿಸಿದ್ದು, ಹರಿಯಾಣದ 7 ಜಿಲ್ಲೆಗಳಲ್ಲಿ ಮೊಬೈಲ್ ಕರೆಗಳು, ಎಸ್ಸೆಮ್ಮೆಸ್​, ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.

    ಇದನ್ನೂ ಓದಿ: ಏಪ್ರಿಲ್​ನಿಂದ ಫಾಸ್ಟ್​ ಟ್ಯಾಗ್ ಬಂದ್​..! ಕಾರಣ ಇದೇ ನೋಡಿ..

    ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ ಪಿ) ಖಾತರಿಪಡಿಸುವ ಕಾನೂನು ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತೀವ್ರಗೊಳಿಸುವುದು ಪ್ರತಿಭಟನೆಯ ಉದ್ದೇಶವಾಗಿದೆ ಎಂದು ರೈತ ಸಂಘಟನೆಗಳು ತಿಳಿಸಿವೆ. ಆದರೆ ಈ ಹಿಂದೆ ರೈತ ಸಂಘಟನೆಗಳು ದೆಹಲಿಯಲ್ಲಿ ದೀರ್ಘಕಾಲದ ಪ್ರತಿಭಟನೆ ನಡೆಸಿದಾಗ ಉಂಟಾಗಿದ್ದ ಹಲವು ಅಹಿತಕರ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಹಹರಿಯಾಣ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂದಿದೆ.
    ಪಂಚಕುಲದಲ್ಲಿ ಸೆಕ್ಷನ್ 144 ರ ಹೇರಿಕೆ ಮತ್ತು ಹರಿಯಾಣದ ಹಲವಾರು ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳು ಮತ್ತು ಬೃಹತ್ SMS ಅನ್ನು ಸ್ಥಗಿತಗೊಳಿಸುವುದು ಸೇರಿದಂತೆ ಮಹತ್ವದ ಆಡಳಿತಾತ್ಮಕ ಮತ್ತು ಭದ್ರತಾ ಕ್ರಮಗಳನ್ನು ಹುಟ್ಟುಹಾಕಿದೆ.

    ಫೆಬ್ರವರಿ 13 ರಂದು ಅಂಬಾಲಾದಲ್ಲಿ ದೆಹಲಿ ಚಲೋಗೆ ಚಾಲನೆ ಸಿಗಲಿದೆ. ಶನಿವಾರ ರೈತ ಸಂಘಟನೆಗಳ ಮುಖಂಡರು ಮೆರವಣಿಗೆ ನಡಸಲು ಪೂರ್ವಭಾವಿ ಸಭೆ ನಡೆಸಿದ್ದರು. ಹೀಗಾಗಿ ಭದ್ರತೆ ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಅರೆಸೈನಿಕ ಸಿಬ್ಬಂದಿಯನ್ನು ಸಹ ನಿಯೋಜಿಸಲಾಗಿದೆ.

    ಪಂಚಕುಲದಲ್ಲಿ ಮೆರವಣಿಗೆ, ಪ್ರದರ್ಶನ ಮತ್ತು ಶಸ್ತ್ರಾಸ್ತ್ರಗಳನ್ನು ಸಾಗಿಸುವುದನ್ನು ನಿಷೇಧಿಸುವ ಸೆಕ್ಷನ್ 144 ಅನ್ನು ಅಧಿಕಾರಿಗಳು ಜಾರಿಗೊಳಿಸಿದ್ದಾರೆ ಎಂದು ಪಂಚಕುಲ ಡಿಸಿಪಿ ಸುಮೇರ್ ಸಿಂಗ್ ಪ್ರತಾಪ್ ಹೇಳಿದ್ದಾರೆ.

    ಇನ್ನು ಯೋಜಿತ ‘ದೆಹಲಿ ಚಲೋ’ ಮೆರವಣಿಗೆಗೆ ಮುಂಚಿತವಾಗಿ ಅಂಬಾಲಾ, ಜಿಂದ್ ಮತ್ತು ಫತೇಹಾಬಾದ್ ಜಿಲ್ಲೆಗಳಲ್ಲಿ ಪಂಜಾಬ್-ಹರಿಯಾಣ ಗಡಿಗಳನ್ನು ಮುಚ್ಚಲಾಗುತ್ತಿದೆ. ಹರ್ಯಾಣದ ಡಿಜಿಪಿ ಮತ್ತು ಅಂಬಾಲಾದ ಎಸ್ಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭದ್ರತಾ ವ್ಯವಸ್ಥೆಗಳನ್ನು ನಿರ್ಣಯಿಸಲು ಗಡಿ ಕೇಂದ್ರಗಳಲ್ಲಿ ತಪಾಸಣೆ ನಡೆಸಿದ್ದಾರೆ. ಶಂಭು ಗಡಿಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ತಪಾಸಣೆ ನಡೆಸಲಾಗುತ್ತಿದೆ.
    ರೈತರು ಮೆರವಣಿಗೆಗೆ ಸಜ್ಜಾಗುತ್ತಿದ್ದಾರೆ, ಅಗತ್ಯ ಸಾಮಗ್ರಿಗಳನ್ನು ಸಂಗ್ರಹಿಸುತ್ತಿದ್ದಾರೆ ಮತ್ತು ತಮ್ಮ ಟ್ರ್ಯಾಕ್ಟರ್ ಟ್ರಾಲಿಗಳನ್ನು ಸಿದ್ಧಪಡಿಸುತ್ತಿದ್ದಾರೆ, ಆದರೆ ಅವುಗಳನ್ನು ತಡೆಯಲು ಸರ್ಕಾರದ ಪ್ರಯತ್ನಗಳ ಹೊರತಾಗಿಯೂ.
    ಕೇಂದ್ರ ಸಚಿವರು ಇತ್ತೀಚೆಗೆ ರೈತ ಮುಖಂಡರ ಸಭೆಗಳನ್ನು ನಡೆಸಿದ್ದರು. ಆದರೆ ರೈತ ಸಂಘಟನೆಗಳು ಪಟ್ಟು ಹಿಡಿದು ಪ್ರತಿಭಟನೆಗೆ ಇಳಿದಿರುವುದರಿಂದ ಸರ್ಕಾರಗಳು ಅಗತ್ಯ ಕ್ರಮಗಳನ್ನು ಕೈಮ ಕೈಗೊಂಡಿವೆ.

    ಈ ಚಳಿಗಾಲದಲ್ಲಿ ಕಾಶ್ಮೀರದ ಗುಲ್ಮಾರ್ಗ್ ಏಕೆ ಹಿಮರಹಿತವಾಗಿದೆ? ಇದರ ಪರಿಣಾಮವೇನು? ವಿವರ ಇಲ್ಲಿದೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts