More

    ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದರೆ, ಸೆಂಟ್ರಲ್​ ಫೋರ್ಸ್​ ಕರೆಸಿ ಪಾಠ ಕಲಿಸುತ್ತೇವೆ; ಟಿಎಂಸಿಗೆ ಬಿಜೆಪಿ ಎಚ್ಚರಿಕೆ

    ಕೋಲ್ಕತ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗೆ ಇನ್ನೂ ಹಲವು ತಿಂಗಳುಗಳು ಬಾಕಿಯಿವೆ. ರಾಜ್ಯದಲ್ಲಿ ಈಗಾಗಲೇ ರಾಜಕೀಯ ಹೋಯ್ದಾಟಗಳು ಹೆಚ್ಚಾಗಿವೆ. ಟಿಎಂಸಿ ಕಾರ್ಯಕರ್ತರು ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆಗಳು ಹೆಚ್ಚಾಗಿವೆ. ಹೀಗಿರುವಾಗ ಟಿಎಂಸಿಗೆ ಎರಡನೇ ಬಾರಿಗೆ ಬಿಜೆಪಿ ಬೆದರಿಕೆ ನೀಡಿದೆ.

    ಇದನ್ನೂ ಓದಿ: ಎರಡನೇ ಮಗುವಿಗೆ ಜನ್ಮ ನೀಡುವ ತಾಯಿಗೆ ಸರ್ಕಾರದಿಂದ 6 ಸಾವಿರ ರೂಪಾಯಿ

    ರಾಜ್ಯದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ಹೆಚ್ಚಾಗುತ್ತಿವೆ. ಒಂದು ವೇಳೆ ಹಲ್ಲೆ ಮುಂದುವರಿದರೆ ಅದಕ್ಕೆ ತಕ್ಕ ಪಾಠ ಕಲಿಸಲಾಗುವುದು. ನಾವು ಯಾರದ್ದೂ ಕೈ ಕಾಲು ಮುರಿಯಲು ಹೋಗುವುದಿಲ್ಲ. ಆದರೆ ಮುಂದಿನ ಚುನಾವಣೆಗೆ ಕೇಂದ್ರೀಯ ಪಡೆಯನ್ನು ಕರೆಸಲಿದ್ದೇವೆ. ಅನ್ಯಾಯ ಮಾಡುವವರಿಗೆ ಕೇಂದ್ರೀಯ ಪಡೆ ತಕ್ಕ ಶಿಕ್ಷೆ ನೀಡಲಿದೆ ಎಂದು ರಾಜ್ಯದ ಬಿಜೆಪಿ ಮುಖ್ಯಸ್ಥ ದಿಲೀಪ್​ ಘೋಷ್​ ಹೇಳಿದ್ದಾರೆ.

    ನನ್ನ ಕಾರನ್ನು ಗುರಿಯಾಗಿ ಹಲ್ಲೆ ಮಾಡಲಾಗುತ್ತಿದೆ. ನಮ್ಮ 120 ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ. ಇದೇ ರೀತಿ ಮುಂದುವರಿದರೆ ಅದಕ್ಕೆ ತಕ್ಕ ಶಿಕ್ಷೆಯನ್ನು ಅನುಭವಿಸಲೇಬೇಕಾಗುತ್ತದೆ. ರಾಜ್ಯದಲ್ಲಿ ಪ್ರತಿನಿತ್ಯ ಬಾಂಬ್​ ಸ್ಫೋಟವಾಗುತ್ತಿದೆ. ಕಾರ್ಯಕರ್ತರ ಮೇಲೆ ಹಲ್ಲೆಯಾಗುತ್ತಿದ್ದರೂ ಟಿಎಂಸಿ ಸರ್ಕಾರ ಏನೂ ಕ್ರಮ ತೆಗೆದುಕೊಳ್ಳದೆ ಸುಮ್ಮನೆ ಕುಳಿತಿದೆ ಎಂದು ಅವರು ದೂರಿದ್ದಾರೆ.

    ಇದನ್ನೂ ಓದಿ: ಈ ನಗರದಲ್ಲಿ ಇನ್ನು ಸೂರ್ಯ ಹುಟ್ಟೋದು 2021ರಲ್ಲಿಯೇ!

    ಈ ಹಿಂದೆಯೂ ಒಮ್ಮೆ ದಿಲೀಪ್​ ಅವರು ಟಿಎಂಸಿಗೆ ಸಾರ್ವಜನಿಕ ಬೆದರಿಕೆ ಹಾಕಿದ್ದರು. ಆರು ತಿಂಗಳಲ್ಲಿ ಟಿಎಂಸಿ ಕಾರ್ಯಕರ್ತರು ಬದಲಾಗದಿದ್ದರೆ ಅವರ ಕೈ ಕಾಲು ಮುರಿದುಕೊಂಡು ಆಸ್ಪತ್ರೆ ಸೇರಬೇಕಾಗುತ್ತದೆ ಎಂದು ಎಚ್ಚರಿಸಿದ್ದರು. (ಏಜೆನ್ಸೀಸ್​)

    ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್​ 370 ವಾಪಾಸು ತರಲು ಯಾವುದೇ ಶಕ್ತಿಯಿಂದಲೂ ಸಾಧ್ಯವಿಲ್ಲ; ಬಿಜೆಪಿ

    ಕಸಿನ್​ಗಳ ಮದುವೆ ಕಾನೂನು ಬಾಹಿರ; ಹರಿಯಾಣ, ಪಂಜಾಬ್​ ಹೈ ಕೋರ್ಟ್​ ಆದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts