More

    ಮೃತ ಆಮೆಯ ಹೊಟ್ಟೆಯಲ್ಲಿತ್ತು ಪಾರ್ಲೇಜಿ ಪ್ಯಾಕ್! ಸಮುದ್ರ ಜೀವಿಗಳ ಜೀವ ತೆಗೆಯುತ್ತಿದೆ ಪ್ಲಾಸ್ಟಿಕ್

    ಕಾರವಾರ: ತಲೆಬರಹ ನೋಡಿದರೆ, ಆಮೆಗಳೂ ಬಿಸ್ಕತ್ ತಿನ್ನಲು ಶುರು ಮಾಡಿದವಾ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ, ವಿಷಯ ತಿಳಿದಷ್ಟು ಸರಳವಾಗಿಲ್ಲ. ನಾವು ತಿಂದು ಬಿಸಾಕುವ ಪ್ಲಾಸ್ಟಿಕ್ ವಸ್ತುಗಳು ಸಮುದ್ರ ಜೀವಿಗಳ ಜೀವ ತೆಗೆಯುತ್ತಿವೆ.

    ಹೌದು, ಶನಿವಾರ ತಾಲೂಕಿನ ದೇವಬಾಗ ಕಡಲ ತೀರದಲ್ಲಿ ಸಿಕ್ಕ ಆಮೆಯ ಮೃತ ದೇಹದಲ್ಲಿ ಪಾರ್ಲೇಜಿ ಬಿಸ್ಕತ್ ಪ್ಯಾಕ್ (ರ್ಯಾಪರ್) ಸಿಕ್ಕಿದೆ.
    ಹಾಕ್ಸ್ ಬಿಲ್ ಪ್ರಭೇದಕ್ಕೆ ಸೇರಿದ ಆಮೆ ಇದಾಗಿದ್ದು ಸುಮಾರು 30 ವರ್ಷದ್ದಾಗಿರಬಹುದು ಎಂದು ಅಂದಾಜಿಸಲಾಗಿದೆ. ಅರಣ್ಯ ಇಲಾಖೆಯ ಮರೈನ್ ಇಕೋ ಸಿಸ್ಟಂ ವಿಭಾಗದ ಅಧಿಕಾರಿಗಳು ಮೃತ ಆಮೆಯ ಮರಣೋತ್ತರ ಪರೀಕ್ಷೆ ನಡೆಸಿದಾಗ ಆತಂಕಕಾರಿ ವಿಷಯ ಬಯಲಾಗಿದೆ.

    ಹಾಕ್ಸ್ ಬಿಲ್ ಪ್ರಭೇದದ ಆಮೆಗಳು ಅತಿ‌‌‌ ಚಿಕ್ಕ ಗಾತ್ರದವಾಗಿದ್ದು, ಫೆಸಿಪಿಕ್, ಅಟ್ಲಾಂಟಿಕ್ ಸಾಗರ, ಅರಬ್ಬಿ ಸಮುದ್ರದ ಅಂಡಮಾನ್, ಲಕ್ಷದ್ವೀಪ ಮುಂತಾದ ಹವಳದ ದಂಡೆಗಳಿರುವ ತೀರಗಳಲ್ಲಿ ಮಾತ್ರ ಕಾಣಸಿಗುತ್ತವೆ.

    ಅತಿ ಚಿಕ್ಕ ಕಡ ಆಮೆ ಪ್ರಭೇದ ಇದಾಗಿದ್ದು, ಆಭರಣಗಳಿಗಾಗಿ ಇವುಗಳ ಚಿಪ್ಪನ್ನು ಬೇಟೆಯಾಡಿ ಬಳಸಲಾಗುತ್ತದೆ. ಅದಕ್ಕಾಗಿ ಬೇಟೆಯಾಡಲಾಗುತ್ತದೆ.
    ಕಳೆದ ತಿಂಗಳು ಇದೇ ಪ್ರಭೇದದ ಆಮೆಯ ಮೃತ ದೇಹ ಕಾರವಾರದಲ್ಲಿ ಪತ್ತೆಯಾಗಿದೆ.‌ ಈಗ ಸಿಕ್ಕಿದ ಆಮೆ ಮೃತ ದೇಹದ ರೆಕ್ಕೆಗಳಿಗೆ ಮೀನಿನ ಬಲೆ ಸಿಕ್ಕಿಕೊಂಡಿತ್ತು ಎಂದು ಆರ್ ಎಫ್ ಒ ಪ್ರಮೋದ ನಾಯಕ ತಿಳಿಸಿದ್ದಾರೆ.

    ಇದನ್ನೂ ಓದಿ: ಬಾವಿಗೆ ಬಿದ್ದು ಚಿರತೆ ಮರಿ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts