More

    ಶಾಲಾ ಮಕ್ಕಳ ಶೂ, ಸಾಕ್ಸ್​ ಖರೀದಿಯಲ್ಲಿ ಪ್ರಭಾವಿಗಳ ಹಸ್ತಕ್ಷೇಪ

    ಶಿವಾನಂದ ಹಿರೇಮಠ ಗದಗ
    ಜಿಲ್ಲೆಯ ಶಿರಹಟ್ಟಿ, ಲಕ್ಷ್ಮೇಶ್ವರ ಮತ್ತು ಮುಂಡರಗಿ ಭಾಗದಲ್ಲಿನ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣ ಸಮಿತಿಗೆ(ಎಸ್​ಡಿಎಂಸಿ) ರಾಜ್ಯ ಸರ್ಕಾರ ನೀಡಿದ್ದ ಸ್ವಾಯತ್ತತೆಯ ಹಕ್ಕು ಮೊಟಕುಗೊಳುತ್ತಿದೆ. ಶಾಲಾ ಮಕ್ಕಳಿಗೆ ಉತ್ತಮ ಗುಣ ಮಟ್ಟದ ಶೂ ಮತ್ತು ಸಾಕ್ಸ್​ ಖರೀದಿ ಮಾಡಲು ಆಯಾ ಎಸ್​ಡಿಎಂಸಿ ಗೆ ರಾಜ್ಯ ಸರ್ಕಾರ ನೀಡಿದ್ದ ಅಧಿಕರಾವನ್ನು ಸ್ಥಳಿಯ ಪ್ರಬಾವಿಗಳು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಶೂ. ಸಾಕ್ಸ್​ ಖರೀದಿಯಲ್ಲಿ ಸ್ಥಳಿಯ ಪ್ರಭಾವಿಗಳ ಹಸ್ತಕ್ಷೇಪವಾಗುತ್ತಿದ್ದು, ಪ್ರಭಾವಿಗಳು ಸೂಚಿಸಿದ ಏಜೆನ್ಸಿ ಅವರಿಂದಲೇ ಶೂ ಮತ್ತು ಸಾಕ್ಸ್​ ಖರೀದಿಸಬೇಕು ಎಂದು ಬಿಇಒಗಳ ಮೇಲೆ ಮತ್ತು ಆಯಾ ಶಾಲಾ ಮುಖ್ಯೋಪಾಧ್ಯಾಯರು, ಎಸ್​ಡಿಎಂಸಿ ಸದಸ್ಯರಿಗೆ ಪ್ರಭಾವಿಗಳು ಮೌಖಿಕ ಆದೇಶ ನೀಡಿದ್ದಾರೆ. ಪ್ರಭಾವಿಗಳ ಆದೇಶಕ್ಕೆ ವಿಚಲಿತರಾಗಿರುವ ಮುಖ್ಯೋಪಾಧ್ಯಾಯರು, ಎಸ್​ಡಿಎಂಸಿ ಸದಸ್ಯರು ತಮ್ಮ ಅಧಿಕಾರ ಮರೆತು ಶೂ ಖರೀದಿಸುತ್ತಿದ್ದಾರೆ. ಕೆಲ ಎಸ್​ಡಿಎಂಸಿ ಸದಸ್ಯರು ಈ ಅಕ್ರಮ ಚಟುವಟಿಕೆಯನ್ನು ವಿರೋಧಿಸಿ ಮೇಲಾಧಿಕಾರಿಗಳಿಗೆ ಸೂರು ನೀಡಲು ಮುಂದಾಗಿದ್ದಾರೆ.
    ಏನಿದು ಯೋಜನೆ?
    2023 – 24ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶಾಲಾ ಮಕ್ಕಳಿಗೆ ಉತ್ತಮ ಗುಣಮಟ್ಟದ ಶೂ ಮತ್ತು ಸಾಕ್ಸ್​ ಖರೀದಿಸುವ ಅಧಿಕಾರ ಆಯಾ ಶಾಲಾ ಎಸ್​ಡಿಎಂಸಿ ಸಮಿತಿಗೆ ವಹಿಸಲಾಗಿದೆ. ಜೂ.22, 2023 ರಂದು ಸರ್ಕಾರ ಹೊರಡಿಸಿದ್ದ ಆದೇಶದಂತೆ ಎಸ್​ಡಿಎಂಸಿ ಸದಸ್ಯರು ಖರೀದಿ ಪ್ರಕ್ರಿಯೆ ಜರುಗಿಸಲು ಸ್ವತಂತ್ರರು. ಉತ್ತಮ ಗುಣಮಟ್ಟ ಆಯ್ಕೆ ಎಸ್​ಡಿಎಂಸಿ ಸದಸ್ಯರಾಗಿರುತ್ತದೆ.

    ಏನಿದು ಪ್ರಕರಣ?
    ಶಿರಹಟ್ಟಿ, ಲಕ್ಷ್ಮೇಶ್ವರ ಮತ್ತು ಮುಂಡರಗಿ ಭಾಗದಲ್ಲಿನ ಶಾಲಾ ಮುಖ್ಯೋಪಾಧ್ಯಾಯರಿಗೆ ಮತ್ತು ಎಸ್​ಡಿಎಂಸಿ ಸದಸ್ಯರಿಗೆ ಬಿಇಓಗಳ ಮೂಲಕ ಮೌಖಿಕ ಸೂಚನೆ ನೀಡಲಾಗಿದ್ದು, ಓರ್ವ ಖಾಸಗಿ ಕಂಪನಿಯವರು ಆಯಾ ಶಾಲೆಗಳಿಗೆ ಶೂ ಪೂರೈಸಿ ಚೆಕ್​ ಮೂಲಕ ಹಣ ಪಡೆಯುತ್ತಿದ್ದಾರೆ. ಈ ಪ್ರಕ್ರಿಯೆಯನ್ನು ಕೆಲ ಎಸ್​ಡಿಎಂಸಿ ಸದಸ್ಯರು ವಿರೋಧಿಸಿದ್ದಾರೆ. ಕೆಲವರು ಪ್ರಭಾವಿಗಳ, ಬಿಇಓಗಳ ಆದೇಶಕ್ಕೆ ಕಟಿಬಿದ್ದು ಏಜನ್ಸಿ ಅವರಿಂದ ಖರೀದಿಸಿದ್ದಾರೆ. ಇನ್ನೂ ಶೂಗಳು ಕಳಪೆ ಮಟ್ಟದಿಂದ ಕೂಡಿವೆ ಎಂದು ಆರೋಪ ಕೇಳಿ ಬರುತ್ತಿದೆ. ಮಕ್ಕಳಿಗೆ ಶೂ ಹೊಂದುತ್ತಿಲ್ಲ ಮತ್ತು ಭಾರವಾಗಿವೆ ಎಂಬ ಮಾತುಗಳು ಕೇಳೀಬರುತ್ತಿವೆ. ಅದಾಗ್ಯೂ, ಈಗ ವಿತರಿಸುತ್ತಿರುವ ಶೂ ಮೂಲ ಬೆಲೆ 80 ರಿಂದ 120ರೂ. ವರೆಗೆ ಇದ್ದು, ಸರ್ಕಾರ ಸೂಚಿತ ಬೆಲೆಗೆ ಖರೀದಿಸಲಾಗುತ್ತಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ಬಷ್ಟವಾಗುತ್ತಿದೆ ಎಂಬುದು ಪ್ರಮುಖ ಆರೋಪ. ಮಾಹಿತಿ ಪ್ರಕಾರ ಶೂ ಖರೀದಿ ಮತ್ತು ಪೂರೈಕೆಯ ಮಧ್ಯಸ್ಥಿಕೆಯಲ್ಲಿ ಲಾಂತರ ರೂ. ಕಮಿಷನ್​ ಅವ್ಯಹಾರ ಆರೋಪ ಕ್ಷೇತ್ರದಾದ್ಯಂತ ಅಲೆದಾಡುತ್ತಿವೆ. ಕಡಿಮೆ ವೆಚ್ಚದ ಶೂಗಳನ್ನು ಅಧಿಕ ಮೊತ್ತಕ್ಕೆ ಖರೀದಿಸಿರುವ ಆರೋಪ ಒಂದೆಡೆಯಾದರೆ, ಎಸ್​ಡಿಎಂಸಿ ಸದಸ್ಯರ ಸ್ವಾಯತ್ತ ಹಕ್ಕನ್ನು ಕಸಿದಿದ್ದು ಪ್ರಜಾಸತಾತ್ಮಕ ವ್ಯವಸ್ಥೆಗೆ ಧಕ್ಕೆ ಎಂಬುದು ಇನ್ನೊಂದು ಆರೋಪವಾಗಿದೆ.

    ಸಹ್ತಕ್ಷೇಪಕ್ಕೆ ಶಿಸ್ತುಕ್ರಮ:
    ಜೂ.22, 2023 ರಂದು ಸರ್ಕಾರದ ಆದೇಶದಲ್ಲಿ “ಶೂ, ಸಾಕ್ಸ್​ ಖರೀದಿಸುವ ಪ್ರಕ್ರಿಯೆ ಪಾರದರ್ಶಕ ಇರುವಂತೆ ನೋಡಿಕೊಳ್ಳುವ ಅಧಿಕಾರ ಬಿಇಒಗಳದ್ದಾಗಿರುತ್ತದೆ. ಸಿಆರ್​ಪಿ, ಬಿಆರ್​ಪಿ ಮತ್ತು ಬಿಇಒಗಳು ಹಸ್ತಕ್ಷೇಪ ಮಾಡಿದರೆ ಅವರ ಮೇಲೆ ಶಿಸ್ತುಕ್ರಮ ಜರುಗಿಸಲು ಆದೇಶದಲ್ಲಿ ತಿಳಿಸಲಾಗಿದೆ,

    ಸರ್ಕಾರದ ನಿಯಮ?

    • ಮಕ್ಕಳಿಗೆ ಅನುಕೂಲ ಆಗಲು ಸ್ಥಳಿಯ ಹವಾಮಾನಕ್ಕೆ ತಕ್ಕಂತೆ ಶೂ ಖರೀದಿಸಬೇಕೆಂಬ ನಿಯಮವಿದೆ. ಶಿರಹಟ್ಟಿ, ಲಕ್ಷ್ಮೇಶ್ವರ, ಮುಂಡರಗಿ ಭಾಗದ ಉಷ್ಣಾಂಷ ಪ್ರದೇಶವಾಗಿದ್ದು, ಇಲ್ಲಿನ ಹವಾಮಾನ ತಕ್ಕಂತೆ ಶೂಗಳಿಲ್ಲ.
    • ಶೂ,ಸಾಕ್ಸ್​ ಖರೀದಿಗೂ ಮುನ್ನ ದರಪಟ್ಟಿ ಆಹ್ವಾನಿಸುವ ನಿಯಮ ಉಲ್ಲಂನೆ.
    • ಶೂಗಳ ಮೇಲ್ಪದರ ಪಿವಿಸಿ ಕೋಟೆಡ್​, 1.5 ಎಂ.ಎಂ ಕಾಟನ್​ ್ಯಾಬ್ರಿಕ್​ ಮತ್ತು ಇತರೆ ಮಾನದಂಡಗಳಂತೆ ಶೂಗಳ ಇರುವಿಕೆ ಅನುಮಾನ ವ್ಯಕ್ತವಾಗಿದೆ.

    ಸರ್ಕಾರ ಸೂಚಿತ ಬೆಲೆ
    ಶಾಲಾ ವರ್ಗ – ಶೂ ಬೆಲೆ
    1 ರಿಂದ 5ನೇ ತರಗತಿ ವಿದ್ಯಾಥಿರ್ಗಳಿಗೆ & ತಲಾ 265 ರೂ.
    6 ರಿಂದ 8ನೇ ತರಗತಿ ವಿದ್ಯಾಥಿರ್ಗಳಿಗೆ & ತಲಾ 295 ರೂ.

    9 ರಿಂದ 10ನೇ ತರಗತಿ ವಿದ್ಯಾಥಿರ್ಗಳಿಗೆ & ತಲಾ 325 ರೂ.

    ಕೋಟ್​:
    ಕ್ಷೇತ್ರದಲ್ಲಿ ಹಲವರು ಪ್ರಭಾವ ಬೀರಿದ್ದಾರೆ. ಕಳಪೆ ಗುಣಮಟ್ಟದ ಶೂ ಇರುವುದರಿಂದ ವಿತರಣೆಗೆ ಅವಕಾಶ ನೀಡಿಲ್ಲ. ಏಜೆನ್ಸಿ ಅವರಿಂದಲೇ ಖರೀದಿಸಲು ಹಲವು ಬಾರಿ ತಿಳಿಸಿದ್ದರೂ, ಯಾವುದೇ ಒತ್ತಾಯಕ್ಕೆ ಮಣದಿಲ್ಲ. ಈಗಾಗಲೇ ವಿತರಿಸಿರುವ ಶೂಗಳ ಗುಣಮಟ್ಟ ಪರಿಶೀಲನೆ ಮತ್ತು ನಿಯಮ ಉಲ್ಲಂನೆ ತನಿಖೆ ಆಗಬೇಕು.
    ಪದ್ಮರಾಜ ಪಾಟೀಲ, ಗ್ರಾಪಂ ಸದಸ್ಯ, ಒಡೆಯರ ಮಲ್ಲಾಪುರ

    ಕೋಟ್​:
    ನಮ್ಮೂರ ಸರ್ಕಾರಿ ಶಾಲಾ ಮಕ್ಕಳಿಗೆ ಶೂ ಸಾಕ್ಸ್​ ವಿತರಣೆಗೆ ಪರವಾನಗಿ ಪಡೆದ ಏಜೆನ್ಸಿಯವರು ಕೊಡಮಾಡಿದ ಶೂಗಳ ಗುಣಮಟ್ಟದ ಬಗ್ಗೆ ಸ್ಪಷ್ಟತೆ ಸಿಗಲಿಲ್ಲ ಮತ್ತು ಅನುಮಾನ ಮೂಡಿತು. ಈ ಕಾರಣದಿಂದ ಎಸ್​ ಡಿಎಂಸಿ ಮತ್ತು ಮುಖ್ಯ ಶಿಕ್ಷಕರು ಸೇರಿ ನಾವೇ ಸ್ವತಹ ಲಭ್ಯ ಅನುದಾನದಲ್ಲಿ ಗುಣಮಟ್ಟದ ಶೂ ಸಾಕ್ಸ್​ ವಿತರಿಸಿದ್ದೇವೆ.
    – ಹೆಸರು ಹೇಳಲಿಚ್ಚಿಸದ ಎಸ್​ ಡಿ ಎಂ ಸಿ ಅದ್ಯಕ್ಷರು

    ಕೋಟ್​:
    ನನ್ನ ಕ್ಷೇತ್ರದಲ್ಲಿ ಯಾವುದೇ ಶಾಲೆಗೂ ಏಜೆನ್ಸಿ ಅವರಿಂದ ಶೂ ಖರೀದಿಸ ಎಂದು ಪ್ರಭಾವ ಬೀರಿಲ್ಲ.ಏಜೆನ್ಸಿ ಅವರಿಂದ ಶೂ ಖರೀದಿ ಮಾಡುವಂತೆಶಾಲೆಗಳಿಗೆ ಸೂಚಿಸಲು ನನ್ನ ಮೇಲೂ ಹಲವರು ಪ್ರಭಾವ ಬೀರಿದ್ದಾರೆ. ನನಗೆ ವರ್ಗಾವಣೆ ಆದರೂ ಪರವಾಗಿ ನಿಯಮ ಉಲ್ಲಂಘಿಸುವುದಿಲ್ಲ ಎಂದು ಹೇಳಿದ್ದೇವೆ. -ಹೆಸರು ಹೇಳಲು ಇಚ್ಚಿಸದ ಬಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts