More

    ಶೀಘ್ರದಲ್ಲಿ ಕಾರವಾರದಲ್ಲಿ ಜಿಲ್ಲಾ ಸ್ಕೌಟ್‌ ಮತ್ತು ಗೈಡ್ಸ್‌ ಕಚೇರಿ

    ಕಾರವಾರ: ಮನುಷ್ಯನೊಬ್ಬನ ಬದುಕಿನ ಸರ್ವತೋಮುಖ ಅಭಿವೃದ್ಧಿ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯಿಂದ ಆಗುತ್ತದೆ ಎಂದು ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯ ರಾಜ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಹೇಳಿದರು.
    ನಗರದ ಹಬ್ಬುವಾಡ ಕ್ರೀಡಾ ವಸತಿ ಶಾಲೆಯಲ್ಲಿ ಅ.26 ರಿಂದ ನವೆಂಬರ್1 ರವರೆಗೆ ಆಯೋಜನೆಯಾಗಿರುವ ಭಾರತ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಮಟ್ಟದ ಕಬ್ಸ್, ಬುಲ್ ಬುಲ್ಸ್, ಶಿಕ್ಷಕ, ಶಿಕ್ಷಕಿಯರಿಗೆ ಮೂಲ ತರಬೇತಿ ಶಿಬಿರದಲ್ಲಿ ಶನಿವಾರ ಅತಿಥಿಯಾಗಿ ಅವರು ಮಾತನಾಡಿದರು.
    ದೇಶಪ್ರೇಮ, ಶಿಸ್ತು, ವಿಜ್ಞಾನ, ಪ್ರಾಣಿ ಪ್ರಪಂಚ ಮುಂತಾದ ಎಲ್ಲ ವಿಷಯಗಳ ಬಗ್ಗೆ ಸ್ಕೌಟ್ ಮತ್ತು ಗೈಡ್ಸ್ ಪಠ್ಯಕ್ರಮ ರೂಢಿಸಲಾಗಿದೆ, ಶಕ್ಷಣದಿಂದ ಕೇವಲ ಹೊಟ್ಟೆ ತುಂಬಿಸಿಕಳ್ಳಬಹುದು. ಆದರೆ, ಮನುಷ್ಯತ್ವ, ಸಚ್ಚಾರಿತ್ರ್ಯವನ್ನು ರೂಪಿಸುವುದು ನಮ್ಮ ಉದ್ದೇಶ. ಅದನ್ನು ಇಲ್ಲಿ ಕಲಿಸಲಾಗುತ್ತದೆ ಎಂದರು. ಕೇವಲ ಸಮವಸ್ತ್ರ ಧರಿಸಿದರೆ ಸ್ಕೌಟ್ ಮತ್ತು ಗೈಡ್ಸ್ ಆಗುವುದಿಲ್ಲ. ನಿಯಮಗಳನ್ನು ಹೃದಯದಲ್ಲಿ ಇಟ್ಟುಕೊಂಡು ಅದನ್ನು ಕಾರ್ಯಗತ ಮಾಡಬೇಕು ಎಂದು ಸಲಹೆ ನೀಡಿದರು. ಕಾರವಾರದಲ್ಲಿ ಜಿಲ್ಲಾ ಸ್ಕೌಟ್ ಕಚೇರಿ ನಿರ್ಮಾಣಕ್ಕೆ ಜಾಗ ಇದ್ದು, ಕಟ್ಟಡ ನಿರ್ಮಾಣಕ್ಕೆ ರಾಜ್ಯ ಕಚೇರಿಯಿಂದ ಬೇಕಾದ ಸಹಕಾರ ನೀಡಲಾಗುವುದು. ಮುಡಗೇರಿಯಲ್ಲಿ 12 ಎಕರೆ ಜಾಗ ಸ್ಕೌಟ್‌ ಸಂಸ್ಥೆಯ ಹೆಸರಿಗಿದೆ. ಅಲ್ಲಿ ತರಬೇತಿ ಕೇಂದ್ರ ತೆರೆಯಲು ರಾಜ್ಯ ಕಚೇರಿಯಿಂದ ಸಹಕಾರ ನೀಡಲಾಗುವುದು ಎಂದು ಸಿಂಧ್ಯಾ ಭರವಸೆ ನೀಡಿದರು.

    ಇದನ್ನೂ ಓದಿ:ಅಕ್ರಮ ಮರಳು ತಡೆಯಲು ಬೆಳಗ್ಗೆ 4 ಗಂಟೆಗೆ ಕಾರ್ಯಾಚರಣೆಗಿಳಿದ ಡಿಸಿ ನೇತೃತ್ವದ ತಂಡ
    ಡಿಡಿಪಿಐ ಲತಾ ನಾಯಕ ಕಾರ್ಯಕ್ರಮ ಉದ್ಘಾಟಿಸಿ, ಸ್ಕೌಟ್ ಮತ್ತು ಗೈಡ್ಸ್ ಇಡೀ ವಿಶ್ವದಲ್ಲಿರುವ ಧರ್ಮ ನಿರಪೇಕ್ಷ ಸಂಸ್ಥೆಯಾಗಿದೆ ಎಂದರು. ಸಂಸ್ಥೆಯ ಜಿಲ್ಲಾಧ್ಯಕ್ಷ ಜಿ.ಜಿ.ಸಭಾಹಿತ, ಸೇವೆಯೇ ಸಂಘಟನೆಯ ಧ್ಯೇಯವಾಗಿದೆ ಎಂದರು. ಸ್ಥಳೀಯ ಸಂಸ್ಥೆಯ ಛಾಯಾ ಜಾವ್ಕರ್, ಪ್ರಭಾಕರ ಭಟ್, ಪಿಡಬ್ಲುಡಿ ಇಂಜಿನಿಯರ್ ರಮೇಶ, ತರಬೇತುದಾರರಾದ ಆನಂದ ಅಡಿಗ, ಕರಿಸಿದ್ದಪ್ಪ, ಶಾರದಾ ಹೆಗಡೆ, ಇಂದಿರಾ ಬಾರಂಗಿ, ಎಂ.ಡಿ.ಗೌಡ, ಆರ್.ಟಿ.ಹೆಬ್ಬಾರ ಇದ್ದರು. ಮಾದೇವ ರಾಣೆ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts