More

    ಅಕ್ರಮ ಮರಳು ತಡೆಯಲು ಬೆಳಗ್ಗೆ 4 ಗಂಟೆಗೆ ಕಾರ್ಯಾಚರಣೆಗಿಳಿದ ಡಿಸಿ ನೇತೃತ್ವದ ತಂಡ

    ಕಾರವಾರ: ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ಅವ್ಯಾಹತವಾಗಿದ್ದು, ನಿಯಂತ್ರಣಕ್ಕೆ ಕ್ರಮ ವಹಿಸಲಾಗುವುದು. ಜಿಲ್ಲೆಯಲ್ಲಿ ಉಂಟಾಗಿರುವ ಮರಳಿನ ಅಭಾವ ನೀಗಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ತಿಳಿಸಿದರು.
    ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಜಿಲ್ಲೆಯ ಕರಾವಳಿಯ ಗಂಗಾವಳಿ, ಕಾಳಿ, ಅಘನಾಶಿನಿ, ಶರಾವತಿ ಈ ನಾಲ್ಕು ನದಿಗಳ ಸಿಆರ್‌ಜಡ್ ಪ್ರದೇಶದ 19 ಮರಳು ದಿಬ್ಬಗಳಲ್ಲಿ ಪ್ರವಾಹ ಉಂಟಾಗಬಹುದಾದ ಮರಳನ್ನು ತೆರವು ಮಾಡಿ ದಂಡೆಯ ಮೇಲೆ ಹಾಕಲು ಸಿಆರ್‌ಜಡ್ ಅನುಮತಿ ನೀಡಿದೆ. ಆದರೆ, ಅದನ್ನು ಮಾರಾಟ ಮಾಡಲು ಅವಕಾಶವಿಲ್ಲ. ಹಾಗಾಗಿ ಸಮಸ್ಯೆ ಮುಂದುವರಿದಿದೆ. ನಿರ್ಮಾಣ ಕಾಮಗಾರಿಗಳಿಗೆ ಬೇಕಾದ ಮರಳಿನ ಬೆಲೆ ಹೆಚ್ಚಿರುವ ಮಾಹಿತಿ ಇದೆ ಎಂದರು.
    ಇನ್ನೊಂದೆಡೆ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ ಎಂಬುದು ಗಮನಕ್ಕಿದೆ. ಅದನ್ನು ತಡೆಯಲು ಸಂಬಂಧಪಟ್ಟ ವಿವಿಧ ಇಲಾಖೆಗಳು ಕಾರ್ಯನಿರ್ವಹಿಸಬೇಕಿದೆ. ಅವರಿಗೆ ಹೇಳುವ ಮೊದಲು ನಾವು ಕಾರ್ಯಪ್ರವೃತ್ತರಾಗಬೇಕು. ಈ ನಿಟ್ಟಿನಲ್ಲಿ ಶುಕ್ರವಾರ ಬೆಳಗ್ಗೆ 4 ಗಂಟೆಗೆ ಹೊರಟು, ಅಂಕೋಲಾ, ಕುಮಟಾ ಭಾಗದಲ್ಲಿ ಕಾರ್ಯಾಚರಣೆ ನಡೆಸಿ ಮರಳು ವಶಪಡಿಸಿಕೊಂಡು ಗಣಿ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದರು.

    ಇದನ್ನೂ ಓದಿ
    ಅಂಕೋಲಾ ಶಿರೂರು, ಕುಮಟಾದ ಕೋಡ್ಕಣಿ, ಮಿರ್ಜಾನ್, ದೀವಗಿ, ತಾರೆಬಾಗಿಲು ಹೆಗಡೆ ಪ್ರದೇಶಗಳಲ್ಲಿ ದಾಳಿ ಮಾಡಿ ವಾಹನಗಳಲ್ಲಿ ತುಂಬಿದ್ದ ಹಾಗೂ ಅಕ್ರಮವಾಗಿ ಸಂಗ್ರಹಿಸಿಟ್ಟ ಮರಳನ್ನು ವಶಕ್ಕೆ ಪಡೆಯಲಾಗಿದೆ ಎಂದರು. ಕುಮಟಾ ಉಪ ವಿಭಾಗಾಧಿಕಾರಿ ಕಲ್ಯಾಣಿ, ತಹಸೀಲ್ದಾರ್ ಸತೀಶ ಗೌಡ, ಅಂಕೋಲಾ ತಹಸೀಲ್ದಾರ್ ಅಶೋಕ ಭಟ್ಟ ಜತೆಗಿದ್ದರು. ಇನ್ನೊಂದೆಡೆ ಎಡಿಸಿ ಪ್ರಕಾಶ ರಜಪೂತ ಅವರ ನೇತೃತ್ವದ ತಂಡವು ಕಾರವಾರ ಭಾಗದಲ್ಲಿ ದಾಳಿ ನಡೆಸಿದೆ ಎಂದು ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts