More

    ಈ ಫೋಟೋ ನೋಡಿ ಇದೆನೆಂದು ಹೇಳಬಲ್ಲಿರಾ? ಜಗತ್ತನ್ನೇ ಕಾಡುತ್ತಿರುವ ಮಹಾಮಾರಿಯ ನಿಜರೂಪ ಬಯಲು…!

    ನವದೆಹಲಿ: ಜಗತ್ತನ್ನೇ ಕಾಡುತ್ತಿರುವ, ಅಲ್ಲೋಕಲ್ಲೋಲವನ್ನೇ ಉಂಟು ಮಾಡುತ್ತಿರುವ ಮಹಾಮಾರಿಯ ನಿಜರೂಪ ಕೊನೆಗೂ ಬಯಲಾಗಿದೆ….!

    ಈವರೆಗೆ ಇದು ಹೀಗಿರುತ್ತೆ, ಹಾಗಿರುತ್ತೆ ಎಂದು ಕಲ್ಪನೆಗಳಲ್ಲಿ ಇದರ ಚಿತ್ರ ಬರೆಯಲಾಗುತ್ತಿತ್ತು. ಜತೆಗೆ, ವೈದರು, ಸಂಶೋಧಕರು ಹೇಳಿದ್ದಂತೆ ರೂಪ ನೀಡಲಾಗಿತ್ತು. ಇದೇ ಮೊದಲ ಬಾರಿಗೆ ಇದರ ನೈಜ ಚಿತ್ರ ಪ್ರಕಟವಾಗಿದೆ.

    ಇದನ್ನೂ ಓದಿ; 18 ಸಾವಿರ ಜನರಿಗೆ ಆಕ್ಸ್​ಫರ್ಡ್​ ವಿವಿ ಲಸಿಕೆ ಪ್ರಯೋಗ; ಮತ್ತೆ ಶುರುವಾಯ್ತು ಕ್ಲಿನಿಕಲ್​ ಟ್ರಯಲ್​ 

    ಹೌದು…! ನೀವು ಮೇಲೆ ನೋಡುತ್ತಿರುವುದು ಕರೊನಾ ವೈರಸ್​ನ ನಿಜ ರೂಪ. ಶ್ವಾಸಕೋಶದ ಕಣದಲ್ಲಿರುವ ಕೋಲುಗಳಂಥಹ ರಚನೆಯುಳ್ಳ ಕಣಗಳಿಗೆ ಅಂಟಿಕೊಂಡಿರುವ ಕರೊನಾ ವೈರಸ್​ನ ಚಿತ್ರವಿದು.

    ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಲಾದ ಕಣಗಳಿಗೆ ಸೋಂಕನ್ನು ಅಂಟಿಸಿ ಅದರ ಚಿತ್ರವನ್ನು ಸಂಶೋಧಕರು ತೆಗೆದಿದ್ದಾರೆ. ನಾರ್ಥ ಕರೋಲಿನಾ ವಿಶ್ವವಿದ್ಯಾಲಯದ ಕ್ಯಾಮಿಲ್​ ಎಹ್ರೆ ಸೇರಿ ಇತರ ಸಂಶೋಧಕರು ಸೇರಿ SARS-CoV-2 ಎಂದು ಕರೆಯಲಾಗುವ ವೈರಸ್​ ಸೋಂಕಿನ ಚಿತ್ರ ಸೆರೆಹಿಡಿದಿದ್ದಾರೆ.

    ಇದನ್ನೂ ಓದಿ; ದೇಶೀಯ ಕರೊನಾ ಲಸಿಕೆ ಕ್ಷಮತೆ ಸಾಬೀತು; ಪ್ರಾಣಿಗಳಲ್ಲಿ ಪ್ರಯೋಗ ಯಶಸ್ವಿ 

    ಅತ್ಯಂತ ಶಕ್ತಿಯುತ ಸೂಕ್ಷ್ಮದರ್ಶಕದಲ್ಲಿ ಸೆರೆಹಿಡಿಯಲಾಗಿರುವ ಈ ಚಿತ್ರದಲ್ಲಿ ಶ್ವಾಸಕೋಶದ ಕಣಗಳಿಗೆ ವೈರಸ್​ ಕಣಗಳು ವ್ಯಾಪಿಸಿರುವುದು ಕಂಡು ಬರುತ್ತದೆ. ಈ ಕಣಗಳಿಗೆ ವೈರಸ್​ ಅಂಟಿಸಿ 96 ತಾಸುಗಳ ಬಳಿಕ ಚಿತ್ರ ತೆಗೆಯಲಾಗಿದೆ. ಇದರ ನಿಜವಾದ ಚಿತ್ರಗಳಿಂದ ಇದನ್ನು ಅರ್ಥ ಮಾಡಿಕೊಳ್ಳುವುದು ಸುಲಭವಾಗಿದ್ದು, ಸಂಶೋಧನೆಗೂ ನೆರವಾಗಲಿದೆ ಎಂದು ತಜ್ಞರು ಹೇಳಿದ್ದಾರೆ.

    ಈ ಫೋಟೋದಲ್ಲಿ ಹತ್ತು ವ್ಯತ್ಯಾಸ ಗುರುತಿಸಬಲ್ಲಿರಾ? ಅಮೆರಿಕ ಗುಪ್ತಚರ ಸಂಸ್ಥೆ ಹಾಕಿದ ಸವಾಲಿದು….!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts