More

    ಶುಕ್ರ ಗ್ರಹವು ಸಕ್ರಿಯ ಜ್ವಾಲಾಮುಖಿಗಳನ್ನು ಹೊಂದಿದೆ ಎಂಬುದಕ್ಕೆ ಸಾಕ್ಷ್ಯಾಧಾರ ಪತ್ತೆ ಹಚ್ಚಿದ ವಿಜ್ಞಾನಿಗಳು

    ನವದೆಹಲಿ: ಶುಕ್ರ ಗ್ರಹ ಕುರಿತು ಯೂನಿವರ್ಸಿಟಿಸ್​ ಸ್ಪೇಸ್​​ ರಿಸರ್ಚ್​​ ಅಸೋಸಿಯೇಷನ್(ಯುಎಸ್​ಆರ್​ಎ) ನೇತೃತ್ವದಲ್ಲಿ ನಡೆದ​ ನೂತನ ಸಂಶೋಧನಾ ವರದಿಯೊಂದು ಸೈನ್ಸ್​ ಅಡ್ವಾನ್ಸ್​ ಜರ್ನಲ್​ನಲ್ಲಿಂದು ಪ್ರಕಟವಾಗಿದೆ.

    ಇದರ ಪ್ರಕಾರ ಬಹುಶಃ ಕೆಲ ವರ್ಷಗಳ ಹಿಂದಷ್ಟೇ ಶುಕ್ರನಲ್ಲಿ ಲಾವಾರಸ ಹರಿದಿದೆ ಎನ್ನಲಾಗಿದ್ದು, ಇಂದಿಗೂ ಕೂಡ ಶುಕ್ರನಲ್ಲಿ ಜ್ವಾಲಾಮುಖಿಗಳು ಸಕ್ರಿಯವಾಗಿರಬಹುದು. ಏಕೆಂದರೆ ಸೌರ ಮಂಡಲದಲ್ಲಿ ಭೂಮಿಯನ್ನು ಬಿಟ್ಟರೆ ಇತ್ತೀಚೆಗೆ ಸ್ಫೋಟ ಸಂಭವಿಸಿರುವ ಏಕ ಮಾತ್ರ ಗ್ರಹವೆಂದರೆ ಶುಕ್ರ ಎಂದು ಸಂಶೋಧನೆಯಲ್ಲಿ ಪ್ರತಿಪಾದಿಸಲಾಗಿದೆ.

    ಒಂದು ವೇಳೆ ಶುಕ್ರನಲ್ಲಿ ಇಂದಿಗೂ ಜ್ವಾಲಮುಖಿಗಳು ಇದ್ದರೆ, ಗ್ರಹಗಳ ಒಳಾಂಗಣವನ್ನು ಅರ್ಥ ಮಾಡಿಕೊಳ್ಳಲು ಭೇಟಿ ಮಾಡುವಂತಹ ಉತ್ತಮವಾದ ಸ್ಥಳವಾಗಲಿದೆ ಎಂದು ಅಧ್ಯಯನ ನೇತೃತ್ವ ವಹಿಸಿದ ಯುಎಸ್​ಆರ್​ಎ ವಿಜ್ಞಾನಿ ಡಾ. ಜಸ್ಟಿನ್​ ಫಿಲಿಬರ್ಟೋ ತಿಳಿಸಿದ್ದಾರೆ.

    ಉದಾಹರಣಗೆ ಗ್ರಹಗಳು ಹೇಗೆ ಕೂಲ್​ ಆಗಿವೆ ಮತ್ತು ಭೂಮಿ ಮತ್ತು ಶುಕ್ರ ಏಕೆ ಜ್ವಾಲಾಮುಖಿಗಳನ್ನು ಹೊಂದಿವೆ, ಆದರೆ ಮಂಗಳ ಗ್ರಹವೇಕೆ ಹೊಂದಿಲ್ಲ ಎಂಬುದನ್ನು ನಾವು ಅಧ್ಯಯನ ಮಾಡಬಹುದಾಗಿದೆ. ಭವಿಷ್ಯದ ಮಿಷನ್​ ಮೂಲಕ ಗ್ರಹಗಳ ಮೇಲ್ಮೈನಲ್ಲಿನ ಹರಿವುಗಳು ಮತ್ತು ಬದಲಾವಣೆಗಳ ಜತೆಯಲ್ಲಿ ಜ್ವಾಲಾಮುಖಿಗಳ ಜೀವಂತಿಕೆ ಸಂಬಂಧಿಸಿದ ಸಾಕ್ಷಿಗಳನ್ನು ಖಂಡಿತ ಕಾಣಬಹುದಾಗಿದೆ ಎಂದು ಫಿಲಿಬರ್ಟೋ ಹೇಳಿದ್ದಾರೆ.

    1990ಕ್ಕೂ ಮುಂಚೆಯೇ ನಾಸಾದ ಮೆಗೆಲ್ಲಾನ್​ ಸ್ಪೇಸ್​ ಕ್ರಾಫ್ಟ್​ ಸೆರೆಹಿಡಿದಿದ್ದ ರಾಡಾರ್​ ಇಮೇಜಿಂಗ್​ನಲ್ಲಿ ಶುಕ್ರ ಗ್ರಹವು ಜ್ವಾಲಾಮುಖಿಗಳ ವಿಶ್ವ ಎಂದು ಬಹಿರಂಗ ಪಡಿಸಿತ್ತು. ಅಲ್ಲದೆ, ಸಕ್ರಿಯ ಜ್ವಾಲಾಮುಖಿಗಳು ಇರುವಿಕೆಯ ಬಗ್ಗೆಯೂ ಉಲ್ಲೇಖಿಸಿತ್ತು. ನಾಸಾ ಮಾತ್ರವಲ್ಲದೆ, 2000ದಲ್ಲಿ ಯೂರೋಪಿಯನ್​ ಸ್ಪೇಸ್​​ ಏಜೆನ್ಸಿ(ಇಎಸ್​ಎ)ಯ ವೇನಸ್​ ಎಕ್ಸ್​ಪ್ರೆಸ್​ ಆರ್ಬಿಟರ್​ ಶುಕ್ರನ ಮೇಲ್ಮೈನ ಕೆಲ ಭಾಗಗಳಲ್ಲಿ ಹೊರಸೂಸುವ ಇನ್​ಫ್ರಾರೇಡ್​ ಲೈಟ್​ಗಳನ್ನು ಅಳತೆ ಮಾಡಿ ಶುಕ್ರನ ಮೇಲಿನ ಜ್ವಾಲಾಮುಖಿಯ ಮೇಲೆ ಬೆಳಕು ಚೆಲ್ಲಿತ್ತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts