More

    ಗಮನಸೆಳೆದ 45 ಕ್ಕೂ ಹೆಚ್ಚು ವಿಜ್ಞಾನ ಮಾದರಿ

    ಚಿತ್ರದುರ್ಗ: ಸೌರಶಕ್ತಿಯ ಉಪಯೋಗ, ಹಸಿರುಮನೆ ಪರಿಣಾಮ, ಭೂಮಿಯ ರಕ್ಷಣೆ, ಪವನಶಕ್ತಿ, ಮಾಲಿನ್ಯದಿಂದಾಗುವ ದುಷ್ಪರಿಣಾಮ, ಸೋಲಾರ್‌ನಿಂದ ವಿದ್ಯುಚ್ಛಕ್ತಿ ಉತ್ಪಾದನೆ, ಹೈಡ್ರೋ ಎಲೆಕ್ಟ್ರಿಸಿಟಿ, ರಾಕೆಟ್ ಒಳಗೊಂಡು ವಿದ್ಯಾರ್ಥಿಗಳ ನೈಪುಣ್ಯದಿಂದ ತಯಾರಾಗಿದ್ದ ವಿಜ್ಞಾನ ಮಾದರಿಗಳು ನೋಡುಗರನ್ನು ಆಕರ್ಷಿಸಿತು.

    ತರಳಬಾಳು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಶಾಲೆಯ 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ತಯಾರಿಸಿದ್ದ 45 ವಿಜ್ಞಾನ ಮಾದರಿಗಳು ನೋಡುಗರ ಮೆಚ್ಚುಗೆಗೆ ಪಾತ್ರವಾದವು.

    ನಾಲ್ಕೈದು ವಿದ್ಯಾರ್ಥಿಗಳ ತಂಡ ಒಂದೊಂದು ಮಾದರಿ ತಯಾರಿಸಿದ್ದು, ಅವುಗಳನ್ನು ವಿಶ್ಲೇಷಿಸಿ ಗಮನ ಸೆಳೆದರು. ಜತೆಗೆ ಆಹಾರ ಮೇಳ ಪ್ರದರ್ಶನದಲ್ಲಿ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಗೋಭಿ, ನೂಡಲ್ಸ್, ಮಸಾಲಪುರಿ, ಕಾರ ಮತ್ತು ಮಸಾಲ ಮಂಡಕ್ಕಿ ಸೇರಿ ತರಹೇವಾರಿ ತಿನಿಸುಗಳನ್ನು ಸಿದ್ಧಪಡಿಸಿದ್ದರು. ನೋಡುಗರು ರುಚಿಯನ್ನು ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts