More

    ಯಾವುದೇ ಶಾಲೆ ಅ. 31ರ ವರೆಗೂ ತೆರೆಯುವುದಿಲ್ಲ; ಶಿಕ್ಷಣ ಸಚಿವರ ಸ್ಪಷ್ಟನೆ..

    ನವದೆಹಲಿ: ಅಕ್ಟೋಬರ್​ 15ರ ಬಳಿಕ ಶಾಲೆಗಳನ್ನು ತೆರೆಯಲು ನಿರ್ಧರಿಸಬಹುದು ಎಂದು ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದ ಬಳಿಕ ಶಾಲೆಗಳ ಆರಂಭ ಕುರಿತು ಎಲ್ಲ ರಾಜ್ಯಗಳಲ್ಲಿ ಚಿಂತನೆ ಶುರುವಾಗಿದೆ.

    ಕರ್ನಾಟಕದಲ್ಲೂ ಶಾಲೆ ಶುರು ಮಾಡಬೇಕೋ ಬೇಡವೋ ಎಂಬ ಬಗ್ಗೆ ಈಗಾಗಲೇ ಅಭಿಪ್ರಾಯ ಕೇಳಲಾಗಿದ್ದು, ಸರ್ಕಾರವೂ ಆ ಕುರಿತು ಭಾರಿ ಚರ್ಚೆಯನ್ನು ನಡೆಸುತ್ತಿದೆ. ಈ ನಡುವೆ ಬಹಳಷ್ಟು ಪಾಲಕರು ಸದ್ಯಕ್ಕೆ ಶಾಲೆಗಳನ್ನು ತೆರೆಯುವುದು ಬೇಡ ಎಂಬ ಸಲಹೆ ನೀಡಿದ್ದಾರೆ.

    ಇದನ್ನು ಓದಿ: ಶಾಲೆ ಆರಂಭಕ್ಕೆ ಬೇಡ ತರಾತುರಿ; ಪಾಲಕರ ಒಕ್ಕೊರಲ ಅಭಿಪ್ರಾಯ

    ಈ ಮಧ್ಯೆ ಶಾಲೆಗಳನ್ನು ಪುನಃ ಆರಂಭಿಸುವ ಕುರಿತು ದೆಹಲಿ ಸರ್ಕಾರ ತನ್ನ ನಿಲುವನ್ನು ಪ್ರಕಟಿಸಿದೆ. ದೆಹಲಿಯಲ್ಲಿ ಸರ್ಕಾರಿ ಹಾಗೂ ಖಾಸಗಿಯ ಎಲ್ಲ ಶಾಲೆಗಳು ಅಕ್ಟೋಬರ್​ 31ರ ವರೆಗೂ ಮುಚ್ಚಿರಲಿವೆ. ಈ ಬಗ್ಗೆ ಸದ್ಯದಲ್ಲೇ ಆದೇಶ ಹೊರಡಿಸಲಾಗುವುದು ಎಂದು ಅಲ್ಲಿನ ಶಿಕ್ಷಣ ಸಚಿವ ಮನಿಷ್ ಸಿಸೋಡಿಯಾ ಸುದ್ದಿಗಾರರಿಗೆ ತಿಳಿಸಿದ್ದಾರೆ. (ಏಜೆನ್ಸೀಸ್​)

    subreddit for best essays

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts