More

    ಹಸಿರು ಮತ್ತು ಕಿತ್ತಳೆ ವಲಯದಲ್ಲಿ ಶಾಲೆ-ಕಾಲೇಜುಗಳು ಆರಂಭ

    ನವದೆಹಲಿ: ದೇಶಾದ್ಯಂತ ಕೋವಿಡ್​-19 ಸೋಂಕು ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಸದ್ಯ ರಾಷ್ಟ್ರಾದ್ಯಂತ ಲಾಕ್​ಡೌನ್​ ಜಾರಿಯಲ್ಲಿದೆ. ಇದರಿಂದಾಗಿ ನೂತನ ಶೈಕ್ಷಣಿಕ ವರ್ಷದಲ್ಲಿ ಶಾಲೆ-ಕಾಲೇಜುಗಳ ಪುನರಾರಂಭದ ಬಗ್ಗೆ ಸಾಕಷ್ಟು ಜಿಜ್ಞಾಸೆಗಳು ಮೂಡಿವೆ.

    ಇಂಥ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ವಲಯ ಆಧಾರಿತವಾಗಿ ಶಾಲೆ-ಕಾಲೇಜುಗಳನ್ನು ಜುಲೈನಿಂದ ಆರಂಭಿಸಲು ಒಲವು ವ್ಯಕ್ತಪಡಿಸಿದೆ. ಮೊದಲಿಗೆ ಹಸಿರು ಮತ್ತು ಕಿತ್ತಳೆ ವಲಯದಲ್ಲಿನ ಶಾಲೆ ಮತ್ತು ಕಾಲೇಜುಗಳನ್ನು ಆರಂಭಿಸುವ ಚಿಂತನೆ ನಡೆಸಿದೆ.

    ಹಸಿರು ಮತ್ತು ಕಿತ್ತಳೆ ವಲಯದಲ್ಲಿ ಶಾಲೆಗಳಲ್ಲಿ 8ನೇ ತರಗತಿಯಿಂದ ಪಾಠಪ್ರವಚನ ಆರಂಭವಾಗಲಿವೆ. ಶೇ.30 ವಿದ್ಯಾರ್ಥಿಗಳ ಹಾಜರಾತಿಯೊಂದಿಗೆ ಈ ತರಗತಿಗಳು ಕಾರ್ಯನಿರ್ವಹಿಸಲಿವೆ. ಈ ತರಗತಿಗಳು ಶೇ.100 ವಿದ್ಯಾರ್ಥಿಗಳೊಂದಿಗೆ ಕಾರ್ಯನಿರ್ವಹಿಸುವಂತೆ ಆದ ಬಳಿಕ ಒಂದರಿಂದ 7ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಪಾಠಪ್ರವಚನ ಆರಂಭಿಸುವ ಬಗ್ಗೆ ಕಾರ್ಯತಂತ್ರ ರೂಪಿಸಲಾಗುತ್ತಿದೆ.

    ಇದನ್ನೂ ಓದಿ: ಪ್ರಬಲ ಭೂಕಂಪಕ್ಕೂ ಜಗ್ಗಲಿಲ್ಲ ನ್ಯೂಜಿಲೆಂಡ್​ ನ ಈ ಗಟ್ಟಿ ಹೆಣ್ಣುಮಗಳು!

    1ರಿಂದ 7ನೇ ತರಗತಿ ಮಕ್ಕಳು ಕೋವಿಡ್​-19 ಶಿಷ್ಟಾಚಾರಗಳನ್ನು ಪಾಲಿಸುವ ಬಗ್ಗೆ ಅಷ್ಟೊಂದು ಪರಿಜ್ಞಾನ ಹೊಂದಿರುವುದಿಲ್ಲ. ಜತೆಗೆ ಅವುಗಳಿಗೆ ಅಷ್ಟು ತಿಳಿವಳಿಕೆ ಇರುವುದಿಲ್ಲ. ಹಾಗಾಗಿ, ಆ ಮಕ್ಕಳನ್ನು ಸದ್ಯ ಮನೆಯಲ್ಲೇ ಇರಿಸಿ, ಪ್ರೌಢಶಾಲೆ ಹಾಗೂ ಕಾಲೇಜುಗಳನ್ನು ಪುನರಾರಂಭಿಸುವುದು ಸರ್ಕಾರದ ಉದ್ದೇಶವಾಗಿದೆ ಎನ್ನಲಾಗಿದೆ.

    ಮಾರ್ಚ್​ 16ರಿಂದ ಶಾಲೆಗಳು ಮುಚ್ಚಲ್ಪಟ್ಟಿರುವುದರಿಂದ, ಶಾಲೆಗಳು ಯಾವಾಗ ಆರಂಭವಾಗುತ್ತವೆ ಎಂಬ ಬಗ್ಗೆ ಕುತೂಹಲ ಮೂಡಿದೆ. ಆದರೆ ಶಾಲೆಗಳನ್ನು ಪುನರಾರಂಭಿಸುವ ಮೊದಲು ಶಾಲೆಗಳಲ್ಲಿ ಅನುಸರಿಸಬೇಕಾದ ದೈಹಿಕ ಅಂತರ ಮತ್ತಿತರ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಶಿಕ್ಷಕರಿಗೆ ತರಬೇತಿ ನೀಡುವುದು ಅವಶ್ಯಕವಾಗಿದೆ. ಹೀಗಾಗಿ, ಶಾಲೆಗಳ ಪುನರಾರಂಭ ವಿಳಂಬವಾಗುತ್ತಿರುವುದಾಗಿ ಹೇಳಲಾಗುತ್ತಿದೆ.

    ಲಾಕ್​ಡೌನ್​ ಮುಗಿಯಿತೆಂದು ಶಿಮ್ಲಾ ಪ್ರವಾಸಕ್ಕೆ ಹೊರಡುವುದಾದರೆ ಸ್ವಲ್ಪ ನಿಲ್ಲಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts