More

    ಶಾಲಾವಧಿ ನಂತರವೂ ಪಠ್ಯ ಬೋಧನೆ

    ಅರಕೇರಾ: ಶಾಲಾ ಅವಧಿ ಮುಗಿದ ಬಳಿಕವೂ ಶಿಕ್ಷಕರ ತಂಡವೊಂದು ಮಕ್ಕಳಿಗೆ ಉಚಿತವಾಗಿ ಹೆಚ್ಚುವರಿ ಬೋಧನೆ ಮಾಡುತ್ತಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಬೇಕೆಂಬ ಗುರಿಯೊಂದಿಗೆ ಶಿಕ್ಷಕರು ಬಾಡಿಗೆ ಕಟ್ಟಡದಲ್ಲಿ ಬೋಧನೆಯಲ್ಲಿ ತೊಡಗಿದ್ದಾರೆ.

    ಪಟ್ಟಣದ ಸರ್ಕಾರಿ ಆದರ್ಶ ವಿದ್ಯಾಲಯದ ಶಿಕ್ಷಕರಾದ ಕುಮಾರಸ್ವಾಮಿ ಹಿರೇಮಠ, ಚನ್ನಮಲ್ಲಪ್ಪ, ಮಂಜುನಾಥ ವಿದ್ಯಾರ್ಥಿಗಳಿಗೆ ಇಂಗ್ಲಿಷ್, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳನ್ನು ಬೋಧಿಸುತ್ತಿದ್ದಾರೆ. 2020-21 ಹಾಗೂ 2022-23 ನೇ ಸಾಲಿನಲ್ಲಿ ಆದರ್ಶ ವಿದ್ಯಾಲಯ ಶಾಲೆಗೆ ಶೇ.100 ಫಲಿತಾಂಶ ದೊರೆತಿದೆ.

    ವಿದ್ಯಾರ್ಥಿಗಳು ಪರೀಕ್ಷೆಯನ್ನು ಸುಲಭವಾಗಿ ಎದುರಿಲಿ ಎಂಬ ಉದ್ದೇಶದೊಂದಿಗೆ ಶಿಕ್ಷಕರು ಮಾರ್ಗದರ್ಶನ ಮಾಡುತ್ತಿದ್ದಾರೆ. ಮಾದರಿ ಪ್ರಶ್ನೆಪತ್ರಿಕೆಗಳನ್ನು ಬಿಡಿಸುವ ಚಟುವಟಿಕೆ ನೀಡುತ್ತಿದ್ದಾರೆ. ಕಟ್ಟಡದ ಬಾಡಿಗೆ, ಪ್ರಶ್ನೆ ಹಾಗೂ, ಉತ್ತರ ಪತ್ರಿಕೆಗಳಿಗೆ ತಗಲುವ ವೆಚ್ಚವನ್ನು ಶಿಕ್ಷಕ ಕುಮಾರಸ್ವಾಮಿ ಹಿರೇಮಠ ಭರಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts