More

  ಅನ್‌ಮೋಲ್ ಪದವಿಪೂರ್ವ ಕಾಲೇಜಿಗೆ ಶೇ. 100 ಫಲಿತಾಂಶ

  ದಾವಣಗೆರೆ : ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಗರದ ಹೊರ ವಲಯದ ಅನ್‌ಮೋಲ್ ವಿಜ್ಞಾನ ಪದವಿಪೂರ್ವ ಕಾಲೇಜು ಸತತವಾಗಿ 2ನೇ ಬಾರಿಯೂ ಶೇ. 100 ಫಲಿತಾಂಶ ಪಡೆದಿದೆ.
   ಒಟ್ಟು 132 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರ ಪೈಕಿ 75 ಮಂದಿ ಅತ್ಯುತ್ತಮ ಶ್ರೇಣಿಯಲ್ಲಿ, 56 ಮಕ್ಕಳು ಉನ್ನತ ಶ್ರೇಣಿಯಲ್ಲಿ ಹಾಗೂ ಒಬ್ಬ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
   ಪಿ. ಶ್ರೇಯಸ್ 600 ಕ್ಕೆ 586 (ಶೇ. 97.67) ಅಂಕ ಗಳಿಸಿ ಕಾಲೇಜಿಗೆ ಟಾಪರ್ ಆಗಿದ್ದಾನೆ. ಟಿ.ಎನ್. ನೀರಜ್ ಮತ್ತು ಬಿ.ಎಸ್. ವಿಶ್ವ ತಲಾ 579, ಎಸ್.ಎಚ್. ಯಶ್‌ವೀರ್ 575 ಅಂಕ ಗಳಿಸಿದ್ದಾರೆ.
   ವಿದ್ಯಾರ್ಥಿಗಳ ಸಾಧನೆಗೆ ಅನ್‌ಮೋಲ್ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ, ಪ್ರಾಚಾರ್ಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.
   

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts