More

    ಪ್ರಸಕ್ತ ವರ್ಷ ಶೇ.30 ಪಠ್ಯ ಕಡಿತಕ್ಕೆ ರಾಜ್ಯ ಸರ್ಕಾರ ನಿರ್ಧಾರ; ಇಂದು ಅಧಿಕೃತ ಆದೇಶ ಸಾಧ್ಯತೆ

    ಚಾಮರಾಜನಗರ: ಈ ಶೈಕ್ಷಣಿಕ ವರ್ಷದಲ್ಲಿ ಶೇ.30 ಪಠ್ಯ ಕಡಿತಕ್ಕೆ ನಿರ್ಧಾರ ಮಾಡಲಾಗಿದ್ದು, ಮಂಗಳವಾರ ಸಂಜೆ ಅಥವಾ ಬುಧವಾರ ಪಠ್ಯ ಕಡಿತದ ಆದೇಶ ಹೊರಬೀಳಲಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್​ ಕುಮಾರ್ ತಿಳಿಸಿದರು. ಮಂಗಳವಾರ ತಾಲೂಕಿನ ವಿವಿಧ ಶಾಲೆಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿ 1ರಿಂದ 9ನೇ ತರಗತಿ ಮಕ್ಕಳಿಗೆ ಶಾಲೆ ಆರಂಭಿಸುವ ವಿಚಾರಕ್ಕೆ ಸಂಬಂಧಿಸಿದಂತೆ ತಜ್ಞರ ಸಮಿತಿಯೊಂದಿಗೆ ಜ.15ರ ಬಳಿಕ ಸಮಾಲೋಚನೆ ನಡೆಯಲಿದೆ ಎಂದರು. ಖಾಸಗಿ ಶಾಲಾ ಶುಲ್ಕ ವಿಚಾರಕ್ಕೆ ಸಂಬಂಧಿಸಿದಂತೆ ಟ್ಯೂಷನ್ ಶುಲ್ಕದಲ್ಲಿ ಶೇ.70 ಮಾತ್ರ ತೆಗೆದುಕೊಳ್ಳಲು ಒಪ್ಪಿ ಎರಡು ಒಕ್ಕೂಟಗಳು ಮುಂದೆ ಬಂದಿವೆ. ಕೋವಿಡ್​ನಿಂದಾಗಿ ಪಾಲಕರು ಮತ್ತು ಶಿಕ್ಷಕರು ಜರ್ಜರಿತರಾಗಿದ್ದಾರೆ. ಎರಡೂ ಕಡೆಯ ಪ್ರಮುಖರ ಸಭೆ ಕರೆದು ಒಂದು ಸೂತ್ರ ರಚಿಸಲು ಪ್ರಯತ್ನ ನಡೆಸಲಾಗುವುದು ಎಂದು ತಿಳಿಸಿದರು. ಇಲ್ಲಿವರೆಗೂ ನಾನು ರಾಜ್ಯದಲ್ಲಿ 150ರಿಂದ 170 ಶಾಲೆಗೆ ಭೇಟಿ ನೀಡಿದ್ದೇನೆ. ವಿದ್ಯಾಗಮ ನಿಲ್ಲಿಸಬಾರದೆಂಬ ಅಭಿಪ್ರಾಯ ವಿದ್ಯಾರ್ಥಿಗಳಿಂದ ಕೇಳಿಬಂದಿದೆ. ತೆರೆದ ಪುಸ್ತಕ ಪರೀಕ್ಷೆ ಬಗ್ಗೆ ಇನ್ನೂ ಹೆಚ್ಚಿನ ಚಿಂತನೆಯಾಗಬೇಕಿದೆ ಎಂದು ಹೇಳಿದರು.

    ಪಠ್ಯಕಡಿತ ಬೇಡ: ರಾಜ್ಯ ಸರ್ಕಾರ ಪಠ್ಯ ಕಡಿಮ ಮಾಡಲು ತೀರ್ವನದಿಂದ ಹಿಂದೆ ಸೆರೆಯಬೇಕು. ಈ ರೀತಿ ಮಾಡಿದರೆ ಗ್ರಾಮೀಣ ಮಕ್ಕಳಿಗೆ ತೊಂದರೆಯಾಗಲಿದೆ ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ಅಭಿಪ್ರಾಯಪಟ್ಟಿದ್ದಾರೆ. ಈಗಾಗಲೇ ಸಿಬಿಎಸ್​ಇ, ಐಸಿಎಸ್​ಇ ಪಠ್ಯಗಳಲ್ಲಿ ಸಾಕಷ್ಟು ಅಂತರವಿದ್ದು, ರಾಜ್ಯ ಪಠ್ಯ ಕ್ರಮದ ಮಕ್ಕಳು ವಯಸ್ಸಿಗೆ -ತರಗತಿಗೆ ಅನುಗುಣವಾದ ಕಲಿಕಾ ಸಾಮರ್ಥ್ಯಗಳನ್ನು ಪಡೆದುಕೊಳ್ಳದಿದ್ದರೆ ಅವರ ಒಟ್ಟು ಶಿಕ್ಷಣದ ಮೇಲೆ ದೀರ್ಘಕಾಲಿಕ ಪರಿಣಾಮ ಬೀರುತ್ತದೆ. ಇದು ಹೆಚ್ಚು ಗ್ರಾಮೀಣ ಹಾಗೂ ಅವಕಾಶ ವಂಚಿತ ಕೆಳಸ್ತರದ ಮಕ್ಕಳ ಕಲಿಕೆಗೆ ದೊಡ್ಡ ಹಿನ್ನಡೆ ಉಂಟು ಮಾಡುತ್ತದೆ. ಜನವರಿ 15ರಿಂದ ಎಲ್ಲ ತರಗತಿಗಳು ಪ್ರಾರಂಭವಾಗಿ ಜೂನ್ 30 ರವರೆಗೆ ಶಾಲೆಗಳು ನಡೆದರೆ, ಈಗಿರುವ ಪಠ್ಯವನ್ನು ಮುಗಿಸಲು ಕಷ್ಟಸಾಧ್ಯವೇನಲ್ಲ. ಪಠ್ಯಕಡಿತ ಕೈ ಬಿಡಬೇಕೆಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ಅನುಕೂಲಕ್ಕೆ ತಕ್ಕಂತೆ ಬಸ್ ಸೇವೆ

    ಶಾಲಾ-ಕಾಲೇಜುಗಳು ಆರಂಭವಾಗುತ್ತಿರುವುದರಿಂದ ಅವಶ್ಯಕತೆಗೆ ಅನುಗುಣವಾಗಿ ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನಿಗದಿತ ನಿಲ್ದಾಣಗಳಲ್ಲಿ ಬಸ್​ಗಳನ್ನು ನಿಲ್ಲಿಸುವಂತೆ ಚಾಲಕರಿಗೆ ನಿರ್ದೇಶನ ನೀಡುವುದಾಗಿ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ತಿಳಿಸಿದ್ದಾರೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ವಿದ್ಯಾರ್ಥಿಗಳಿಗೆ ಬಸ್ ನಿಲ್ಲಿಸದಿರುವ ಘಟನೆ ಕುರಿತು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಎಸ್. ಸುರೇಶ್​ಕುಮಾರ್ ಅವರು ಸಿಬ್ಬಂದಿಗೆ ಸೂಕ್ತ ನಿರ್ದೇಶನ ನೀಡುವಂತೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಿಗೆ ಪತ್ರ ಬರೆದಿದ್ದರು. ಸಚಿವರ ಪತ್ರಕ್ಕೆ ಪ್ರತಿಕ್ರಿಯಿಸಿರುವ ಕಳಸದ ಅವರು, ಬಸ್ ನಿಲ್ಲಿಸದೆ ಸಮಸ್ಯೆ ಉಂಟು ಮಾಡಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಲ್ಲಿ ಬಸ್ ಸೇವೆ ನೀಡಲಾಗುವುದು ಎಂದರು.

    ಮತ್ತಿಬ್ಬರಿಗೆ ರೂಪಾಂತರಿ ವೈರಸ್

    ರಾಜ್ಯದಲ್ಲಿ ಮತ್ತೆರಡು ರೂಪಾಂತರ ಕರೊನಾ ವೈರಸ್ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಯುಕೆಯಿಂದ ಆಗಮಿಸಿದವರಲ್ಲಿ 45 ಮಂದಿಗೆ ಹಾಗೂ ಅವರ ಪ್ರಾಥಮಿಕ ಸಂಪರ್ಕ ಹೊಂದಿದ್ದ 26 ಮಂದಿಯಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಸೋಮವಾರ ಯುಕೆಯಿಂದ 215 ಮಂದಿ ಪ್ರಯಾಣಿಕರು ಆಗಮಿಸಿದ್ದು, ಐವರಲ್ಲಿ ಸೋಂಕು ದೃಢಪಟ್ಟಿತ್ತು.

    751 ಪ್ರಕರಣ: ರಾಜ್ಯದಲ್ಲಿ ಸೋಮವಾರ 751 ಹೊಸ ಕರೊನಾ ಪ್ರಕರಣಗಳು ಪತ್ತೆಯಾಗಿದ್ದು, 1,183 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 9.28 ಲಕ್ಷ ತಲುಪಿದ್ದು, ಒಟ್ಟು ಗುಣಮುಖರ ಸಂಖ್ಯೆ 9.07 ಲಕ್ಷಕ್ಕೆ ಏರಿಕೆಯಾಗಿದೆ. 8,909 ಸಕ್ರಿಯ ಪ್ರಕರಣಗಳಿದ್ದು, 203 ಮಂದಿ ಐಸಿಯುನಲ್ಲಿದ್ದಾರೆ.

    ನಾಲ್ಕೇ ದಿನದಲ್ಲಿ 10 ಸಾವಿರ ಆ್ಯಪ್​ ಡೌನ್​ಲೋಡ್; ವಿಜಯವಾಣಿ ವಿದ್ಯಾಭಿಯಾನಕ್ಕೆ ಅಭೂತ ಪೂರ್ವ ಸ್ಪಂದನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts