More

    ವೃಂದ ನೇಮಕದಿಂದ ಅನ್ಯಾಯ: ಸಮಸ್ಯೆ ಬಗೆಹರಿಸಲು ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಒತ್ತಾಯ

    ರಾಮನಗರ :   ಸೇವಾನಿರತ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಕ್ರಮವಹಿಸಬೇಕು ಎಂದು ಡಿಡಿಪಿಐ ಹಾಗೂ ಡಯಟ್ ಪ್ರಾಂಶುಪಾಲರಿಗೆ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಮಂಗಳವಾರ ಮನವಿ ಸಲ್ಲಿಸಿದರು.

    ಶಿಕ್ಷಕರ ಸಮಸ್ಯೆ ಗಳನ್ನು ಬಗೆಹರಿಸದಿದ್ದರೆ ಕನಿಷ್ಠ 3 ಆನ್‌ಲೈನ್ ತರಬೇತಿ ಗಳನ್ನು ಬಹಿಷ್ಕರಿಸ ಲಾಗುವುದು ಎಂದು ಜಿಲ್ಲಾ ಅಧ್ಯಕ್ಷ ರಮೇಶ್ ಎಚ್ಚರಿಸಿದರು. 2017ರಲ್ಲಿ ತಿದ್ದುಪಡಿ ಮಾಡಿರುವ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮದಿಂದ ಪದವೀಧರ ಶಿಕ್ಷಕರಿಗೆ ಅನ್ಯಾಯವಾಗಿದೆ. ಸಮಸ್ಯೆ ಬಗೆಹರಿಸಲು ಶಿಕ್ಷಣ ಇಲಾಖೆಗೆ ಹಲವು ಬಾರಿ ರಾಜ್ಯ ಸಂಘ ಮನವಿ ಮಾಡಿದ್ದರೂ ಪರಿಹಾರ ದೊರೆತಿಲ್ಲ ಎಂದು ಬೇಸರಿಸಿದರು.

    ಸಮಸ್ಯೆಗಳನ್ನು ಬಗೆಹರಿಸುವವರೆಗೂ ಯಾವುದೇ ರೀತಿಯ ತರಬೇತಿಗಳಲ್ಲಿ ಶಿಕ್ಷಕರು ಪಾಲ್ಗೊಳ್ಳುವುದಿಲ್ಲ. ನಮ್ಮ ಸಮಸ್ಯೆಗಳಿಗೆ ಶೀಘ್ರವಾಗಿ ಪರಿಹಾರ ದೊರಕದಿದ್ದಲ್ಲಿ ಹಂತ ಹಂತವಾಗಿ ಹೋರಾಟ ರೂಪಿಸಲು ಸಂಘಟನೆ ನಿರ್ಧರಿಸಿದೆ ಎಂದರು.

    ಈ ನಿರ್ಧಾರವನ್ನು ಶಿಕ್ಷಣ ಸಚಿವರಿಗೆ, ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಇದು ಮೊದಲ ಹಂತದ ಹೋರಾಟವಾಗಿದ್ದು, ಜಿಲ್ಲೆಯ ಸಮಸ್ತ ಶಿಕ್ಷಕ ಬಂಧುಗಳು ಕನಿಷ್ಠ 3.0 ಆನ್‌ಲೈನ್ ತರಬೇತಿಗಳನ್ನು ಬಹಿಷ್ಕರಿಸಿ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

    ರಾಮನಗರ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಎಂ. ಕೆಂಪೇಗೌಡ, ಪ್ರಧಾನ ಕಾರ್ಯದರ್ಶಿ ಟಿ.ಬಿ. ಗುಣಶೇಖರಯ್ಯ, ಖಜಾಂಚಿ ಗುರುಮೂರ್ತಿ, ಉಪಾಧ್ಯಕ್ಷ ಮಲ್ಲೇಶಯ್ಯ, ಸಹಕಾರ್ಯದರ್ಶಿ ಎನ್.ಎ. ಅಶೋಕ, ಸಂಘಟನಾ ಕಾರ್ಯದರ್ಶಿ ಎಂ.ಎನ್.ಕುಮಾರಸ್ವಾಮಿ, ತಾಲೂಕು ಘಟಕಗಳ ಅಧ್ಯಕ್ಷರಾದ ಎಂ. ಕಾಂತರಾಜು, ಎಸ್.ಎಂ.ನಾಗೇಶ್, ನೇ.ರ.ಪ್ರಭಾಕರ್, ಶಿವನಸಂದ್ರ ಶಿವರಾಮಯ್ಯ, ಪ್ರಧಾನ ಕಾರ್ಯದರ್ಶಿಗಳಾದ ವೈ.ಸಿ.ನಟರಾಜ್, ಪಿ.ವಾಸುದೇವ್, ಬಿ.ವೀರಭದ್ರಯ್ಯ, ಎ.ಬಿ.ಶಿವಲಿಂಗಯ್ಯ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts