More

    ಶಾಲೆಗೆ ಭೂದಾನ ಮಾಡಿದ ರೈತ ಮಹಿಳೆಯರು

    ಕುಷ್ಟಗಿ: ತಾಲೂಕಿನ ಎಂ.ಗುಡದೂರಿಗೆ ಮಂಜೂರಾದ ಪ್ರೌಢಶಾಲೆಗೆ ಒಂದು ಎಕರೆ ಜಮೀನನ್ನು ದಾನವಾಗಿ ನೀಡುವ ಮೂಲಕ ಮಾದರಿಯಾದ ಸಂಗಮ್ಮ ಹಾಗೂ ಯಲ್ಲಮ್ಮ ಜೀರ್‌ರನ್ನು ಸೋಮವಾರ ಪಟ್ಟಣದ ಬಿಇಒ ಕಚೇರಿಯಲ್ಲಿ ಸನ್ಮಾನಿಸಲಾಯಿತು.

    ಇದನ್ನೂ ಓದಿ: ಶಾಲೆ ಅಭಿವೃದ್ಧಿಗೆ ಭೂದಾನಿಗಳ ಕೊಡುಗೆ ಅಪಾರ

    ಬಿಇಒ ಸುರೇಂದ್ರ ಕಾಂಬ್ಳೆ ಮಾತನಾಡಿ, ಪೂರ್ವಜರು ದಾನವಾಗಿ ನೀಡಿದ ಜಮೀನನ್ನು ವಶಪಡಿಸಿಕೊಳ್ಳಲು ಮುಂದಾಗುವ ಅನೇಕರಿರುವ ಸಂದರ್ಭದಲ್ಲಿ ದಾನ ನೀಡಿರುವ ರೈತ ಮಹಿಳೆಯರ ಶೈಕ್ಷಣಿಕ ಕಾಳಜಿ ಮೆಚ್ಚುವಂಥದ್ದು ಎಂದು ಕೊಂಡಾಡಿದರು.

    ಬಸವ ಸಮಿತಿ ಅಧ್ಯಕ್ಷ ಎಸ್.ಪಿ.ಬಿಜಕಲ್ ಮಾತನಾಡಿ. ಕಡಿಮೆ ಜಮೀನು ಹೊಂದಿದ್ದರೂ ಗ್ರಾಮದ ಮಕ್ಕಳ ಶಿಕ್ಷಣಕ್ಕಾಗಿ ಸಾಗುವಳಿ ಜಮೀನು ನೀಡಿದ್ದಾರೆ. ಇದು ಮಾದರಿ ಕಾರ್ಯವಾಗಿದೆ ಎಂದರು.

    ರೈತ ಮಹಿಳೆಯರ ಮಕ್ಕಳಾದ ಶರಣಪ್ಪ, ನಿರುಪಾದೆಪ್ಪ, ದೊಡ್ಡಪ್ಪ, ಪ್ರಮುಖರಾದ ನಾಗಪ್ಪ ದೋಟಿಹಾಳ, ಸೂಗಪ್ಪ ಅಂಗಡಿ, ಸಂಗಪ್ಪ ಪುರದ್, ರಮೇಶ ಬಿಜಕಲ್, ಬಸವರಾಜ ಲಿಂಗಸೂರು, ಪರಶುರಾಮ ಹರಿಜನ್, ಶರಣಪ್ಪ ಗುಡಿಹಿಂದಲ್, ಶಿವಪ್ಪ ಗುಡಿಹಿಂದಲ್,

    ಅಯ್ಯಪ್ಪ ಬಿಜಕಲ್, ಗ್ರಾಪಂ ಸದಸ್ಯರಾದ ಬಸಪ್ಪ ಬಿಜಕಲ್, ಬಸಮ್ಮ ತಳವಾರ್, ಶಿವರಾಜ ಗುಡಿಹಿಂದಲ್, ಬಿಆರ್‌ಪಿಗಳಾದ ಲೋಕೇಶ ಗೋಟೂರು, ಡಾ.ಜೀವನ್‌ಸಾಬ್ ವಾಲಿಕಾರ್, ಪ್ರೌಢಶಾಲೆಯ ಮುಖ್ಯಶಿಕ್ಷಕ ಸೋಮನಗೌಡ ಪಾಟೀಲ್ ಇದ್ದರು.

    ನಾವು ಸಾಲಿ ಕಲೀಲಿಲ್ಲ. ನಮ್ಮೂರಿನ ಹೆಣ್ಣು ಮಕ್ಕಳು ಕಲಿತು ವಿದ್ಯಾವಂತರಾಗಬೇಕು. ಹೈಸ್ಕೂಲ್ ಓದಿಗಾಗಿ ದೂರದ ಊರುಗಳಿಗೆ ಹೋಗಲು ಸಾಧ್ಯವಾಗದೆ ಬಹಳಷ್ಟು ಹೆಣ್ಣುಮಕ್ಕಳು ಅರ್ಧಕ್ಕೇ ಶಾಲೆ ಬಿಡುತ್ತಿದ್ದಾರೆ. ನಮ್ಮೂರಿಗೆ ಮಂಜೂರಾದ ಪ್ರೌಢಶಾಲೆ ಉಳೀಬೇಕು ಎಂಬ ಉದ್ದೇಶದಿಂದ ಜಮೀನು ನೀಡಿದ್ದೇವೆ.
    -ಸಂಗಮ್ಮ, ಯಲ್ಲಮ್ಮ, ಭೂದಾನಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts