More

    ಶಾಲೆಗೆ ಹೋಗುವ ದಾರಿಯಲ್ಲಿ ತಂದೆಯ ಸ್ನೇಹಿತರಿಂದ ಮಗಳ ಕಿಡ್ನಾಪ್; ಲೈಂಗಿಕ ಕಿರುಕುಳ ನೀಡಿ ಕೊಲೆಗೆ ಯತ್ನ..!

    Uttar Pradesh: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಶಾಲೆಗೆ ಹೋಗುತ್ತಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆಗೆ ಯತ್ನಿಸಿರುವ ಘಟನೆ ನಡೆದಿದೆ. ಆಶ್ಚಯಕರ ಸಂಗತಿ ಅಂದ್ರೆ ತಂದೆಯ ಸ್ನೇಹಿತರು ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ.


    ಉತ್ತರಪ್ರದೇಶದ ಹಾಪುರ್​ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಮಗಳನ್ನ ಕಿಡ್ನಾಪ್​​ ಮಾಡಿದ ಮೂವರೂ ಆರೋಪಿಗಳು ಬಾಲಕಿಯ ತಂದೆಗೆ ಚಿರ ಪರಿಚಿತರಾಗಿದ್ದರು. ಬಾಲಕಿ ಶಾಲೆಗೆ ತೆರಳುವ ಸಮಯಕ್ಕೆ ಕಾದು ಕುಳಿತಿದ್ದ ಆರೋಪಿಗಳು, ಆಟೋ ಒಳಗೆ ಕುಳಿತು ಶಾಲೆಗೆ ತೆರಳಬೇಕಿದ್ದ ಬಾಲಕಿಯನ್ನ ಎಳೆದು ಹೊಡೆದು ಬೈಕ್​ನಲ್ಲಿ ಕುಳಿತುಕೊಳ್ಳುವಂತೆ ಒತ್ತಾಯಿಸಿದ್ದಾರೆ.


    ಬೈಕ್​ನಲ್ಲಿ ಕುಳಿತ ಬಾಲಕಿಯನ್ನು ನೇರವಾಗೊ ಓಯೋ ರೂಮ್​​​ಗೆ ಎಳೆದೊಯ್ದ ಕಾಮುಕರು ಆಕೆಯ ಮೇಲೆ ರಾಕ್ಷಸರಂತೆ ಎರಗಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಇಲ್ಲಿಗೆ ಯಾವುದೂ ಕೊನೆಗೊಂಡಿಲ್ಲ ಬಾಲಕಿಯ ವಿಡಿಯೋವೊಂದನ್ನ ಚಿತ್ರೀಕರಿಸಿದ ಆರೋಪಿಗಳು ಅಲ್ಲಿ ನಡೆದ ಘಟನೆಯ ಕುರಿತಂತೆ ಎಲ್ಲಿಯೂ ಮಾತನಾಡಬಾರದು. ಪೊಲೀಸರಿಗೆ ದೂರು ನೀಡಲು ಯತ್ನಿಸುವ ಪ್ರಯತ್ನ ಮಾಡಿದಲ್ಲಿ ವಿಡಿಯೋ ಲೀಕ್​​ ಮಾಡೋದಾಗಿ ಬಾಲಕಿಗೆ ಬೆದರಿಕೆ ಹಾಕಿದ್ದಾರೆ.


    ಕಾಮುಕರು ಆಕೆಯ ಮೇಲೆ ಎರಗಿದಾಗ ಬಾಲಕಿ ಇದಕ್ಕೆ ವಿರೋಧ ವ್ಯಕ್ತ ಪಡಿಸಿದ್ದು, ಆರೋಪಿಗಳು ಸಂತ್ರಸ್ತೆಯ ಕತ್ತು ಹಿಸುಕಿ ಕೊಲೆ ಮಾಡೋದಕ್ಕೂ ಯತ್ನಿಸಿದ್ದಾರೆ.


    ಘಟನೆಯ ಕುರಿತಂತೆ 11 ನೇ ತರಗತಿ ವಿದ್ಯಾರ್ಥಿನಿ ತನ್ನ ಕುಟುಂಬಕ್ಕೆ ಸಂಪೂರ್ಣ ಮಾಹಿತಿ ನೀಡಿದ್ದು, ಮೂವರು ಆರೋಪಿಗಳ ವಿರುದ್ಧ ದೂರು ದಾಖಲಿಸಲಾಗಿದೆ. ಜತೆಗೆ ಪೊಲೀಸರು ಬಾಲಕಿಯನ್ನ ವೈದ್ಯಕೀಯ ಚಿಕಿತ್ಸೆಗೂ ಕಳುಹಿಸಿದ್ದಾರೆ.


    ವಿದ್ಯಾರ್ಥಿನಿಯ ತಂದೆ ಘಟನೆಯ ಕುರಿತಂತೆ ಈಗಾಗಲೇ FIR ದಾಖಲಿಸಿದ್ದಾರೆಂದು ಹಾಪುರ್ ಪೊಲೀಸ್ ವರಿಷ್ಠಾಧಿಕಾರಿ ರಾಜ್‌ಕುಮಾರ್ ಅಗರ್ವಾಲ್ ಹೇಳಿದ್ದಾರೆ. ನನ್ನ ಕೆಲ ಪರಿಚಯಸ್ಥ ಸ್ನೇಹಿತರಿಂದಲೇ ನನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts