More

    ಲಾಕ್​ಡೌನ್​ನಲ್ಲಿ ಕಾದಂಬರಿ ಬರೆದ ಬಾಲಕ.. ‘ಅರ್ಧ ಜೀವನ- ಪೂರ್ತಿ ಲಾಕ್​ಡೌನ್​ನಲ್ಲಿ..’

    ಲಾಕ್​ಡೌನ್​ನಲ್ಲಿ ಮನೆಯಲ್ಲೇ ಕುಳಿತುಕೊಳ್ಳಬೇಕಾದಾಗ ಹಲವರು ಏನೇನನ್ನೋ ಮಾಡಿದ್ದಾರೆ. ಅಂಥದ್ದರಲ್ಲಿ ಇಲ್ಲೊಬ್ಬ ಬಾಲಕ ಕಾದಂಬರಿ ಬರೆದು ಗಮನ ಸೆಳೆದಿದ್ದಾನೆ. ಲಾಕ್​ಡೌನ್​ ಅವಧಿಯಲ್ಲಿ ಹಾಗೂ ಅದಕ್ಕೂ ಮುಂಚಿನ ಕೆಲವು ವರ್ಷಗಳಲ್ಲಿ ತಾನು ಗಮನಿಸಿದ್ದ ಸಾಮಾಜಿಕ ಸಮಸ್ಯೆಗಳನ್ನೇ ಆಧರಿಸಿ, ಹದಿನಾರು ವರ್ಷದ ಈ ಬಾಲಕ ಚೊಚ್ಚಲ ಕಾದಂಬರಿಯೊಂದನ್ನು ರಚಿಸಿದ್ದಾನೆ.

    ಕಾದಂಬರಿಗೆ ಬೇಕಾದ ಕಥೆಯ ಎಳೆಗೆ ಬೇಕಾದ ಅಂಶಗಳನ್ನು ನೆನಪಿಸಿಕೊಳ್ಳಲು ನನಗೆ 30 ದಿನಗಳು ಬೇಕಾದವು. ಲಾಕ್​ಡೌನ್​ ಅವಧಿಯಲ್ಲಿ ನಾನು ಮನೆಯಲ್ಲೇ ಕುಳಿತು ಅನುಭವಿಸಿದ ನೋವು-ನಲಿವು ಹಾಗೂ ಅದಕ್ಕೂ ಮುಂಚಿನ ಕೆಲವು ವರ್ಷಗಳಲ್ಲಿನ ನನ್ನ ಗ್ರಹಿಕೆ ಆಧರಿಸಿ ಈ ಕಾದಂಬರಿ ಬರೆದಿದ್ದೇನೆ ಎನ್ನುವ ಈ ಬಾಲಕ, ಮುಂದೆ ಇದರ ಸೀಕ್ವೆಲ್​ ಬಂದರೂ ಅಚ್ಚರಿ ಇಲ್ಲ ಎನ್ನುತ್ತಿದ್ದಾನೆ.

    ಅಂದಹಾಗೆ ಈ ಬಾಲಕನ ಹೆಸರು ಕ್ರಿಶ್​ ಕುನಾಲ್​. ಬಿಹಾರದ ವೈಶಾಲಿ ಜಿಲ್ಲೆಯ ಹಾಜಿಪುರದ ನಿವಾಸಿ ಆಗಿರುವ ಈತ, ಈ ಕಾದಂಬರಿಯನ್ನು ಹಿಂದಿಯಲ್ಲಿ ಬರೆದಿದ್ದು, ಅದಕ್ಕೆ ‘ಆಧ ಜೀವನ್​- ಪೂರ ಲಾಕ್​ಡೌನ್​ ಮೇ..’ ಎಂಬ ಶೀರ್ಷಿಕೆ ಕೊಟ್ಟಿದ್ದಾನೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts