More

    ವಸತಿ ಶಾಲೆಗಳಿಗೆ ಸ್ವಂತ ಕಟ್ಟಡಕ್ಕೆ ಆದ್ಯತೆ: ಶಾಸಕ ಪರಣ್ಣ ಮುನವಳ್ಳಿ

    ಗಂಗಾವತಿ: ವಸತಿ ಶಾಲೆಗಳಿಗೆ ಸ್ವಂತ ಕಟ್ಟಡ ಒದಗಿಸುವ ಮೂಲಕ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.


    ನಗರದ ಕನಕಗಿರಿ ರಸ್ತೆಯ ಕ್ರಿಯೇಟಿವ್ ಪಾರ್ಕ್ ಬಳಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಮಂಜೂರಾದ ಪರಿಶಿಷ್ಟ ವರ್ಗಗಳ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯ ಕಟ್ಟಡ ನಿರ್ಮಾಣಕ್ಕೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.


    ಹಿಂದಿನ ಸರ್ಕಾರ ವಸತಿ ನಿಲಯಗಳ ಬಲವರ್ಧನೆಗೆ ಆದ್ಯತೆ ನೀಡಿರಲಿಲ್ಲ. ಬಿಜೆಪಿ ಆಡಳಿತಾವಧಿಯಲ್ಲಿ ಅತಿ ಹೆಚ್ಚು ವಸತಿ ನಿಲಯಗಳ ಮಂಜೂರು ಜತೆಗೆ ಸ್ವಂತ ಕಟ್ಟಡ ನಿರ್ಮಾಣವಾಗಿವೆ. ನಗರದಲ್ಲಿ ಈಗಾಗಲೇ 4ಕ್ಕೂ ಹೆಚ್ಚು ವಸತಿ ನಿಲಯಗಳಿಗೆ ಸ್ವಂತ ಕಟ್ಟಡ ಒದಗಿಸಲಾಗಿದೆ ಎಂದರು.


    ನಯೋಪ್ರಾ ಅಧ್ಯಕ್ಷ ಎಸ್.ರಾಘವೇಂದ್ರ ಶ್ರೇಷ್ಟಿ ಮಾತನಾಡಿ, ನಯೋಪ್ರಾದಿಂದ ವಸತಿ ನಿಲಯಕ್ಕಾಗಿ ಸಿಎ ಸೈಟ್ ಮಂಜೂರು ಮಾಡಲಾಗಿದ್ದು, ವಿನ್ಯಾಸದ ಲೇಔಟ್‌ನಲ್ಲಿ ಒದಗಿಸಲಾಗಿದೆ ಎಂದರು. ಸದಸ್ಯರಾದ ಶಿವಪ್ಪ ಮಾದಿಗ, ಅರ್ಜುನ ರಾಯ್ಕರ್, ನಗರಸಭೆ ವಿಪಕ್ಷ ನಾಯಕ ನವೀನ್ ಮಾಲಿ ಪಾಟೀಲ್, ಸದಸ್ಯರಾದ ರಮೇಶ ಚೌಡ್ಕಿ, ಮಾಜಿ ಸದಸ್ಯರಾದ ಜೋಗದ ಹನುಮಂತಪ್ಪ ನಾಯಕ, ವೀರಭದ್ರಪ್ಪ ನಾಯಕ, ಮುಖಂಡರಾದ ಜೋಗದ ನಾರಾಯಣಪ್ಪ ನಾಯಕ, ಸಂತೋಷ ಕೆಲೋಜಿ, ಚನ್ನಪ್ಪ ಮಳಗಿ, ಕಾಶೀನಾಥ ಚಿತ್ರಗಾರ ಇತರರಿದ್ದರು.

    ರೆಡ್ಡಿ ಮನೆಯಿಂದ ಹೊರಬರಲಿಲ್ಲ
    ಕಾಮಗಾರಿ ಸ್ಥಳದಲ್ಲಿಯೇ ಕೆಆರ್‌ಪಿಪಿ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ ಮನೆ ಇದೆ. ಕಾರ್ಯಕ್ರಮಕ್ಕೆ ಶಾಸಕ ಮತ್ತು ಬಿಜೆಪಿ ಬೆಂಬಲಿಗರ ವಾಹನ ಬರುತ್ತಿದ್ದಂತೆ ಕೆಆರ್‌ಪಿಪಿ ಬೆಂಬಲಿಗರು ಗಲಿಬಿಲಿಗೊಳಗಾದರು. ಈ ಹಿಂದೆ ಬಿಜೆಪಿಯಲ್ಲಿದ್ದ ಕೆಲವರು ಶಾಸಕರನ್ನು ನೋಡಿ ಮುಜುಗರಕ್ಕೆ ಒಳಗಾದ ಪ್ರಸಂಗ ನಡೆಯಿತು. ಬಿಜೆಪಿ ಮತ್ತು ಕೆಆರ್‌ಪಿಪಿ ಬೆಂಬಲಿಗರು ಕೈ ಸನ್ನೆ ಮೂಲಕ ಕುಶಲೋಪಚರಿ ವಿಚಾರಿಸಿ ಸುಮ್ಮನಾದರು. ಶಾಸಕ ಪರಣ್ಣಮುನವಳ್ಳಿ ಬಂದಿರುವ ಬಗ್ಗೆ ರೆಡ್ಡಿಗೆ ಗೊತ್ತಿದ್ದರೂ ಸೌಜನ್ಯಕ್ಕಾದರೂ ಹೊರಗೆ ಬರಲಿಲ್ಲ. ರೆಡ್ಡಿ ಮನೆ ರಸ್ತೆಯತ್ತ ಮುನವಳ್ಳಿ ಬರುತ್ತಿದ್ದಂತೆ ಊಹಾಪೋಹಗಳು ಸೃಷ್ಟಿಯಾದರೂ, ಯಾವುದೂ ಸತ್ಯವಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts