More

    ಕನ್ನಡಿಗರನ್ನು ಕೆರಳಿಸುತ್ತಿರುವ ಮರಾಠಿ ‘ಬಾಯ್ಸ್​’; ಸಿನಿಮಾವನ್ನೇ ನಿಷೇಧಿಸುವಂತೆ ಎದ್ದಿದೆ ವಾಯ್ಸ್​..

    ಬೆಳಗಾವಿ: ಮರಾಠಿಯ ‘ಬಾಯ್ಸ್​ 3’ ಚಿತ್ರ ಇಂದು ಮಹಾರಾಷ್ಟ್ರ ಸೇರಿದಂತೆ ಎಲ್ಲೆಡೆ ಬಿಡುಗಡೆ ಆಗಿದೆ. ಆದರೆ ಈ ಚಿತ್ರದಲ್ಲಿ ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದವನ್ನು ಕೆದಕುವ ಅಂಶ ಇರುವುದು ಕನ್ನಡಿಗರನ್ನು ಕೆರಳಿಸಿದೆ.

    ಚಿತ್ರದ ಒಂದು ದೃಶ್ಯದಲ್ಲಿ ಕೆಲವು ಮರಾಠಿಗರು ಕರ್ನಾಟಕದ ಪೊಲೀಸ್ ಠಾಣೆಯೊಂದಕ್ಕೆ ಬರುತ್ತಾರೆ. ಅಲ್ಲಿದ್ದ ಪೊಲೀಸ್ ಅಧಿಕಾರಿ, ‘‘ಮರಾಠಿ ಮಾತನಾಡಿದರೆ ಗೊತ್ತಾಗುವುದಿಲ್ಲ. ಕನ್ನಡದಲ್ಲಿ ಮಾತಾಡಿ ಇಲ್ಲವೇ ಇಂಗ್ಲಿಷ್‌ನಲ್ಲಿ ಮಾತಾಡಿ’’ ಎಂದು ತಾಕೀತು ಮಾಡುತ್ತಾರೆ. ಅದಕ್ಕೆ ಪ್ರತಿಯಾಗಿ ಮರಾಠಿ ಭಾಷಿಕನೊಬ್ಬ ಆ ಪೊಲೀಸ್ ಅಧಿಕಾರಿಗೆ, ‘‘ನಿಮಗೆ ಕನ್ನಡ ಹೇಗೆ ಮುಖ್ಯವೋ ನಮಗೆ ಮರಾಠಿ ಮುಖ್ಯ. ನಮ್ಮ ಮರಾಠಿ ಭಾಷೆಯ ಅಭಿಮಾನವನ್ನು ಬೆಳಗಾವಿಯಲ್ಲಿ ತೋರಿಸದಿದ್ದರೆ ಮತ್ತೆಲ್ಲಿ ತೋರಿಸಬೇಕು?’’ ಎಂದು ಪ್ರಶ್ನಿಸುತ್ತಾನೆ. ಈ ದೃಶ್ಯ ಇದೀಗ ವಿವಾದ ಸೃಷ್ಟಿಸಿದೆ.

    ಗಡಿವಿವಾದವನ್ನು ವಿನಾಕಾರಣ ಕೆದಕುವ ಈ ಚಿತ್ರವನ್ನು ಬೆಳಗಾವಿ ಸೇರಿದಂತೆ ರಾಜ್ಯದೆಲ್ಲೆಡೆ ನಿಷೇಧಿಸಬೇಕು ಎಂಬ ಕೂಗು ಈಗ ಕೇಳಿಬರತೊಡಗಿದೆ. ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣದವರು ಇಂದು ಬೆಳಗಾವಿಯಲ್ಲಿ ಪೊಲೀಸ್ ಆಯುಕ್ತ ಬೋರಲಿಂಗಯ್ಯ ಅವರನ್ನು ಭೇಟಿ ಮಾಡಿ, ‘ಬಾಯ್ಸ್​ 3’ ಚಿತ್ರವನ್ನು ನಿಷೇಧಿಸುವಂತೆ ಆಗ್ರಹಿಸಿದ್ದಾರೆ.

    ಕೆಜಿಎಫ್​-2 ಚಿತ್ರದ ಪ್ರೇರಣೆ; 72 ಗಂಟೆಗಳಲ್ಲಿ 3 ಸೆಕ್ಯುರಿಟಿ ಗಾರ್ಡ್​ಗಳ ಕೊಲೆ: ನಿದ್ರೆಗೆಟ್ಟ ಕೈದಿಗಳು..

    ತ್ರಿವೇಣಿ ಸಂಗಮದಲ್ಲಿನ ಮಹಾ ಕುಂಭಮೇಳಕ್ಕೆ ಬರಲಿದ್ದಾರೆ ಯುಪಿ ಸಿಎಂ ಯೋಗಿ ಆದಿತ್ಯನಾಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts