More

    VIDEO | ಪ್ರವಾಹಪೀಡಿತ ಪಟ್ಟಣದಿಂದ ಭಯಾನಕ ವಿಡಿಯೋ ವೈರಲ್!

    ರತ್ನಗಿರಿ : ಮಹಾರಾಷ್ಟ್ರದ ಕೊಂಕಣ ತೀರವು ದುರಂತಕಾರಿ ಮಳೆ ಮತ್ತು ಪ್ರವಾಹಕ್ಕೆ ನಲುಗುತ್ತಿರುವಂತೆಯೇ, ರತ್ನಗಿರಿ ಜಿಲ್ಲೆಯ ಚಿಪ್ಲುನ್​ ಪಟ್ಟಣದಿಂದ ಭಯಾನಕ ವಿಡಿಯೋ ಒಂದು ಪ್ರಕಟಗೊಂಡಿದೆ. ಜಲಾವೃತ ಪ್ರದೇಶದಿಂದ ಮಹಿಳೆಯೊಬ್ಬಳನ್ನು ರಕ್ಷಿಸುತ್ತಿರುವ ಸಂದರ್ಭದಲ್ಲಿ, ಆಕೆ, ಎತ್ತರದಿಂದ ನೀರಿಗೆ ವಾಪಸ್ ಬಿದ್ದಿರುವ ದೃಶ್ಯ ಇದು.

    ಈ 11 ಸೆಕೆಂಡುಗಳ ವಿಡಿಯೋದಲ್ಲಿ ಹಗ್ಗವನ್ನು ಹಿಡಿದು ಮೇಲಕ್ಕೆ ಎಳೆಯಲ್ಪಡುತ್ತಿರುವ ಮಹಿಳೆಯು ಇನ್ನೇನು ತಾರಸಿಯನ್ನು ತಲುಪಿದಳು ಎನ್ನುವಾಗ ಹಿಡಿತ ತಪ್ಪಿ ಕೆಳಕ್ಕೆ ಬಿದ್ದಿರುವುದನ್ನು ಕಾಣಬಹುದು. ಈ ಮೈನವಿರೇಳಿಸುವ ಘಟನೆಯ ವಿಡಿಯೋ ತುಣುಕನ್ನು ಎನ್​ಡಿಟಿವಿ ವರದಿ ಮಾಡಿದೆ.

    ಸುಮಾರು 70 ಸಾವಿರ ಜನಸಂಖ್ಯೆಯುಳ್ಳ ಚಿಪ್ಲುನ್​ನಲ್ಲಿ ಅರ್ಧಕ್ಕೂ ಹೆಚ್ಚು ಪ್ರದೇಶಗಳು ಜಲಾವೃತಗೊಂಡಿದ್ದು, 5,000 ಕ್ಕೂ ಹೆಚ್ಚು ಜನರು ಸಿಕ್ಕಿಹಾಕಿಕೊಂಡಿದ್ದಾರೆ. ಎನ್​ಡಿಆರ್​ಎಫ್ ಮತ್ತು ರಾಜ್ಯ ರೆಸ್ಕ್ಯೂ ತಂಡಗಳೊಂದಿಗೆ ಭಾರತೀಯ ನೌಕಾ ಪಡೆ ಕೂಡ ಪ್ರವಾಹಪೀಡಿತ ಪ್ರದೇಶಗಳಿಂದ ಜನರನ್ನು ರಕ್ಷಿಸಲು ಮಹಾರಾಷ್ಟ್ರ ಸರ್ಕಾರಕ್ಕೆ ಸಹಾಯ ಒದಗಿಸುತ್ತಿದೆ ಎನ್ನಲಾಗಿದೆ.

    ಇದನ್ನೂ ಓದಿ: ಭಾರಿ ಮಳೆಗೆ ಹಳಿಗಳು ಜಲಾವೃತ: ತಾಳಗುಪ್ಪ-ಮೈಸೂರು ರೈಲು ಸಂಚಾರ ಸ್ಥಗಿತ

    ಜುಲೈ ತಿಂಗಳಲ್ಲಿ 40 ವರ್ಷಗಳಲ್ಲಿ ಅತ್ಯಧಿಕವಾದ ಮಟ್ಟದ ಮಳೆಯನ್ನು ಮಹಾರಾಷ್ಟ್ರ ಕಂಡಿದ್ದು, ರತ್ನಗಿರಿ, ರಾಯಗಡ ಮತ್ತು ಕೋಲ್ಹಾಪುರ ಜಿಲ್ಲೆಗಳು ಪ್ರವಾಹಪೀಡಿತವಾಗಿವೆ. ಸಾಂಗ್ಲಿ ಮತ್ತು ಅಮರಾವತಿ ಜಿಲ್ಲೆಗಳಲ್ಲೂ ಪ್ರವಾಹದ ಸ್ಥಿತಿ ನಿರ್ಮಾಣಗೊಂಡಿದ್ದು, ರಾಜ್ಯದ ಹಲವು ಪ್ರದೇಶಗಳಿಗೆ ಹವಾಮಾನ ಇಲಾಖೆಯು ರೆಡ್​ ಮತ್ತು ಆರೆಂಜ್ ಅಲರ್ಟ್​ ನೀಡಿದೆ ಎನ್ನಲಾಗಿದೆ. (ಏಜೆನ್ಸೀಸ್)

    ಸಿಎಂ ಯಡಿಯೂರಪ್ಪ ಸಿಟಿ ರೌಂಡ್ಸ್! ಎಲ್ಲೆಲ್ಲಿಗೆ ಭೇಟಿ – ಇಲ್ಲಿದೆ ವಿವರ

    ಪಂಜಾಬ್​ ಸಿಎಂ ಮತ್ತು ಸಿಧು ನಡುವೆ ಶಾಂತಿ ಘೋಷಣೆ?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts