More

    ಕರೊನಾ ಮಧ್ಯೆ ಪರೀಕ್ಷೆ ಏಕೆ? ಫಲಿತಾಂಶ ಯಾವಾಗ? ಆಂಧ್ರ ಸರ್ಕಾರಕ್ಕೆ ಸುಪ್ರೀಂ ತರಾಟೆ

    ನವದೆಹಲಿ : ಕರೊನಾ ಕರಿನೆರಳಲ್ಲಿ 12ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸುವ ನಿರ್ಧಾರ ಕೈಗೊಂಡಿರುವ ಆಂಧ್ರ ಪ್ರದೇಶ ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ವಿದ್ಯಾರ್ಥಿಗಳ ಜೀವಕ್ಕೆ ಅಪಾಯಕ್ಕೆ ಒಡ್ಡುತ್ತಿದ್ದೀರಾ ಎಂದು ಪ್ರಶ್ನಿಸಿದೆ. ಪರೀಕ್ಷೆಗಳಿಂದಾಗಿ ಒಂದೇ ಒಂದು ಸಾವು ಸಂಭವಿಸಿದರೂ ಅದಕ್ಕೆ ಸರ್ಕಾರವೇ ಜವಾಬ್ದಾರಿಯಾಗಲಿದೆ ಎಂದಿರುವ ಕೋರ್ಟ್​, ಒಂದು ಪಕ್ಷ ಹಾಗಾದಲ್ಲಿ 1 ಕೋಟಿ ರೂ.ಗಳವರೆಗೆ ಪರಿಹಾರ ಆದೇಶಿಸಬಹುದು ಎಂದು ಹೇಳಿದೆ.

    “ಇತರ ರಾಜ್ಯಗಳ ಬೋರ್ಡ್​ಗಳು ಕೋವಿಡ್ -19 ಸಂಖ್ಯೆಗಳಿಗೆ ಅನುಗುಣವಾಗಿ ಪರೀಕ್ಷೆಗಳನ್ನು ರದ್ದುಗೊಳಿಸುವ ಪ್ರಜ್ಞಾಪೂರ್ವಕ ನಿರ್ಧಾರವನ್ನು ತೆಗೆದುಕೊಂಡಿವೆ. ಒಂದು ವೇಳೆ ಪರೀಕ್ಷೆಗಳಿಂದ ಏನಾದರೂ ಮಾರಣಾಂತಿಕ ಘಟನೆಗಳು ಸಂಭವಿಸಿದಲ್ಲಿ, ಕೆಲವು ರಾಜ್ಯಗಳು ಮುಂಚೂಣಿ ಕಾರ್ಮಿಕರಿಗೆ 1 ಕೋಟಿ ರೂ. ಪರಿಹಾರ ನೀಡಿರುವುದನ್ನು ನಾವು ನೆನಪಿನಲ್ಲಿರಿಸಿಕೊಳ್ಳುತ್ತೇವೆ” ಎಂದು ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ದಿನೇಶ್ ಮಹೇಶ್ವರಿ ಅವರನ್ನೊಳಗೊಂಡ ನ್ಯಾಯಪೀಠ ಹೇಳಿತು.

    ಇದನ್ನೂ ಓದಿ: ಎರಡು ವರ್ಷದಿಂದ ಸಂಬಳವಿಲ್ಲವೆಂದು ಆತ್ಮಹತ್ಯೆಗೆ ಶರಣಾದ ಶಿಕ್ಷಕ! ಡೆತ್​ನೋಟ್​ನಲ್ಲಿ ಬಿಜೆಪಿ ಮಾಜಿ ಶಾಸಕನ ಹೆಸರು!

    “ಜುಲೈ ಕೊನೇ ವಾರದಲ್ಲಿ ಪರೀಕ್ಷೆ ನಡೆಸುವುದಾಗಿ ಹೇಳುತ್ತಿದ್ದೀರಿ. ಪರಿಸ್ಥಿತಿ ಏನಾಗುತ್ತದೆ ಎಂಬುದು ನಮಗೆ ಗೊತ್ತಿಲ್ಲ. ಡೆಲ್ಟಾ ಪ್ಲಸ್​ ಎಂಬ ಕರೊನಾ ವೈರಸ್​ನ ಹೊಸ ರೂಪಾಂತರಿ ಕಾಣಿಸಿಕೊಂಡಿದೆ. ಪರೀಕ್ಷೆಗಳನ್ನು ಜುಲೈನಲ್ಲಿ ಮಾಡಿದರೆ ಮತ್ತೆ ಫಲಿತಾಂಶವನ್ನು ಯಾವಾಗ ಘೋಷಿಸುತ್ತೀರಿ ? ನಿಮ್ಮ ಫಲಿತಾಂಶಗಳು ಹೊರಬರುವವರೆಗೆ ಯೂನಿವರ್ಸಿಟಿಗಳು ಕಾಯುವುದಿಲ್ಲ” ಎಂದು ಕೋರ್ಟ್ ಹೇಳಿತು.

    ಅನೂಭಾ ಶ್ರೀವಾಸ್ತವ ಸಹಾಯಿ ಎಂಬುವರು ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಜುಲೈನಲ್ಲಿ ಪರೀಕ್ಷೆಗಳನ್ನು ನಡೆಸುವ ಆಂಧ್ರ ಸರ್ಕಾರದ ನಿರ್ಧಾರದ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಡೆಯುತ್ತಿದೆ. ಸಾಂಕ್ರಾಮಿಕದ ನಡುವೆ ಪರೀಕ್ಷೆ ನಡೆಸಲು ಸೂಕ್ತ ಯೋಜನೆ ಮತ್ತು ಮೂಲಸೌಕರ್ಯಗಳಿವೆಯೇ ಎಂದು ಕೋರ್ಟ್​ ಪ್ರಶ್ನಿಸಿದೆ. ಎಲ್ಲಾ ಮುಖ್ಯ ವಿಚಾರಗಳನ್ನೂ ಗಮನಕ್ಕೆ ತೆಗೆದುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬುದಕ್ಕೆ ವಿವರಣೆ ಕೇಳಿದೆ. ನಾಳೆಯೂ ವಿಚಾರಣೆ ಮುಂದುವರಿಯಲಿದೆ. (ಏಜೆನ್ಸೀಸ್)

    ಸಾಲದ ಕಂತಿಗೆ ಮನೆಬಾಗಿಲಿಗೆ ಬಂದ ಏಜೆಂಟರು… ಮಾನ ಹೋಯಿತೆಂದು ಸಾವಿಗೆ ಶರಣಾದ ಪ್ಲಂಬರ್

    ಲಸಿಕೆ ಹಾಕಿಸಿಕೊಳ್ಳಲ್ಲ ಅಂದ್ರೆ ಭಾರತಕ್ಕೆ ಇಲ್ಲ ಅಮೆರಿಕಕ್ಕೆ ಹೋಗಿ : ಫಿಲಿಪೈನ್ಸ್​ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts