More

    ಸುಪ್ರೀಂಕೋರ್ಟ್​ನಿಂದ ಮಹತ್ವದ ಆದೇಶ: ಪರಿಹಾರ ಮೊತ್ತದಲ್ಲಿ ಹೆಚ್ಚಳ: ಯಾರಿಗೆ? ಇಲ್ಲಿದೆ ವಿವರ..

    ನವದೆಹಲಿ: ಸರ್ವೋಚ್ಚ ನ್ಯಾಯಾಲಯ ಇಂದು ಮಹತ್ವದ ಆದೇಶವೊಂದನ್ನು ನೀಡಿದ್ದು, ಆ ಮೂಲಕ ನಿಗದಿತ ಸಂತ್ರಸ್ತರ ಪರಿಹಾರ ಮೊತ್ತದಲ್ಲಿ ಹೆಚ್ಚಳವಾಗಲಿದೆ. ನ್ಯಾಯಮೂರ್ತಿ ಎಸ್.ರವೀಂದ್ರ ಭಟ್ ಹಾಗೂ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ನ್ಯಾಯಪೀಠ ಈ ಆದೇಶವನ್ನು ನೀಡಿದೆ.

    ಒಳಚರಂಡಿಯನ್ನು ಕೈಯಲ್ಲಿ ಸ್ವಚ್ಛ ಮಾಡುವಾಗ ಸಾವಿಗೀಡಾದವರ ಕುಟಂಬಕ್ಕೆ ಮತ್ತು ಇಂಥ ಪ್ರಕರಣಗಳಲ್ಲಿ ಅಂಗವೈಕಲ್ಯ ಉಂಟಾದವರಿಗೆ ನೀಡುವ ಪರಿಹಾರ ಮೊತ್ತವನ್ನು ಹೆಚ್ಚಿಸುವಂತೆ ಈ ನ್ಯಾಯಪೀಠ ಶುಕ್ರವಾರ ಆದೇಶ ನೀಡಿದೆ.

    ಇದನ್ನೂ ಓದಿ: ಅರಿಶಿನ-ಕುಂಕುಮ ಬಳಸದೆ ಆಯುಧಪೂಜೆ ಮಾಡಿ: ಸರ್ಕಾರದಿಂದ ಹೊಸ ಆದೇಶ

    ಒಳಚರಂಡಿ ಅಥವಾ ಸೆಪ್ಟಿಕ್ ಟ್ಯಾಂಕ್​ಗಳನ್ನು ಕೈಯಲ್ಲಿ ಸ್ವಚ್ಛ ಮಾಡುವಾಗ ಸಾವಿಗೀಡಾದವರ ಕುಟುಂಬಕ್ಕೆ 30 ಲಕ್ಷ ರೂ. ಹಾಗೂ ಇಂಥ ಸಂದರ್ಭದಲ್ಲಿ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದವರಿಗೆ 20 ಲಕ್ಷ ರೂಪಾಯಿಗೆ ಕಡಿಮೆ ಇರದಂತೆ ಪರಿಹಾರ ನೀಡಬೇಕು ಎಂದು ಆದೇಶಿಸಲಾಗಿದೆ.

    ಇದನ್ನೂ ಓದಿ: ಐಸ್​ ಕ್ರೀಮ್​ ಟ್ರಕ್​ಗಳಲ್ಲಿ ಶವ!: ಹೊರಗೆ ಮಕ್ಕಳು ಐಸ್ ​​ಕ್ರೀಮ್ ಮೆಲ್ಲುವ ಚಿತ್ರ, ಒಳಗೆ ಮೃತದೇಹಗಳು!

    ಅಲ್ಲದೆ ಭಾಗಶಃ ಅಂಗವೈಕಲ್ಯಕ್ಕೆ ಒಳಗಾದವರಿಗೆ 10 ಲಕ್ಷ ರೂಪಾಯಿಗೆ ಕಡಿಮೆ ಇರದಂತೆ ಪರಿಹಾರ ನೀಡಬೇಕು ಎಂದಿರುವ ನ್ಯಾಯಪೀಠ, ಕೈಯಲ್ಲಿ ಸ್ವಚ್ಛಗೊಳಿಸುವಂಥ ಇಂಥ ವ್ಯವಸ್ಥೆಯನ್ನು ಸಂಪೂರ್ಣವಾಗಿ ತೊಲಗಿಸಬೇಕಾದ ಅಗತ್ಯವಿದೆ ಎಂದೂ ಅಭಿಪ್ರಾಯ ಪಟ್ಟಿದೆ.

    ‘ಪಾಕಿಸ್ತಾನಕ್ಕೆ ಜಿಂದಾಬಾದ್ ಹೇಳದೆ ಇನ್ನೇನು ಹೇಳಲಿ?’: ಬೆಂಗಳೂರು ಪೊಲೀಸರ ಜತೆ ಪಾಕ್​ ಯುವಕನ ವಾಗ್ವಾದ

    ತಪ್ಪಾಯ್ತು ಅಂದ್ರೂ ಬಿಡ್ಲಿಲ್ಲ: ಬಹರೈನ್​ನಲ್ಲಿ ಸ್ಟೇಟಸ್​ ಹಾಕಿ ಕೆಲಸ ಕಳ್ಕೊಂಡ ಕರ್ನಾಟಕದ ಡಾಕ್ಟರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts