More

    ಸಿಬಿಎಸ್​​ಸಿ, ಐಸಿಎಸ್​ಸಿ ಪರೀಕ್ಷೆಗಳಿಗೆ ಹೈಬ್ರಿಡ್​ ಮೋಡ್​ ನಿರಾಕರಿಸಿದ ಸುಪ್ರೀಂ

    ನವದೆಹಲಿ: ಸಿಬಿಎಸ್​​ಸಿ ಮತ್ತು ಐಸಿಎಸ್​ಸಿ ಶಿಕ್ಷಣ ಮಂಡಳಿಗಳು ನಡೆಸುತ್ತಿರುವ 10ನೇ ತರಗತಿ ಮತ್ತು 12ನೇ ತರಗತಿಯ ಟರ್ಮ್​ 1 ಪರೀಕ್ಷೆಗಳಿಗೆ ಆನ್​ಲೈನ್​ ಮತ್ತು ಆಫ್​ಲೈನ್​​ ಎರಡೂ ವಿಧಾನದಲ್ಲಿ ನಡೆಯಲು ಅವಕಾಶ ಕೋರಿದ್ದ ವಿದ್ಯಾರ್ಥಿಗಳ ಅರ್ಜಿಯನ್ನು ಇಂದು ಸುಪ್ರೀಂ ಕೋರ್ಟ್​ ವಜಾಗೊಳಿಸಿದೆ.

    2021-2022ರ ಶೈಕ್ಷಣಿಕ ವರ್ಷಕ್ಕೆ ಪರೀಕ್ಷೆಗಳನ್ನು ಆಫ್​ಲೈನ್​ ವಿಧಾನದಲ್ಲಿ ಮಾತ್ರ ನಡೆಸಲು ನಿರ್ಧರಿಸಿ ಅಕ್ಟೋಬರ್​ನಲ್ಲಿ ಹೊರಡಿಸಲಾಗಿದ್ದ ಆದೇಶಗಳ ವಿರುದ್ಧ 6 ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್​ನಲ್ಲಿ ರಿಟ್​ ಅರ್ಜಿ ಸಲ್ಲಿಸಿದ್ದರು. ಕರೊನಾ ಹಿನ್ನೆಲೆಯಲ್ಲಿ ಪರೀಕ್ಷೆಗಳಿಗೆ ಆನ್​ಲೈನ್​ ವಿಧಾನದ ಆಯ್ಕೆಯನ್ನು ಕೂಡ ನೀಡಿ, ಹೈಬ್ರಿಡ್​ ಮೋಡ್​ನಲ್ಲಿ ಪರೀಕ್ಷೆಗಳನ್ನು ನಡೆಸಬೇಕು ಎಂದು ಕೋರಿದ್ದರು.

    ಇದನ್ನೂ ಓದಿ: ನಿರಂತರ ಮಳೆಗೆ ಕುಸಿದುಬಿದ್ದ ಅಂಗನವಾಡಿ ಕಟ್ಟಡ; ಸ್ವಲ್ಪದರಲ್ಲೇ ಮಕ್ಕಳು ಬಚಾವ್​

    ಇಂದು ಈ ವಿವಾದದ ಮೇಲೆ ತೀರ್ಪು ಹೊರಡಿಸಿದ ನ್ಯಾಯಮೂರ್ತಿ ಎ.ಎಂ.ಖನ್ವಿಲ್ಕರ್​ ಮತ್ತು ನ್ಯಾಯಮೂರ್ತಿ ಸಿ.ಟಿ.ರವಿಕುಮಾರ್​ ಅವರ ನ್ಯಾಯಪೀಠವು, ಪರೀಕ್ಷೆಗಳು ಅದಾಗಲೇ ಆರಂಭವಾಗಿರುವ ಕಾರಣ ಈ ವಿಚಾರವನ್ನು ಪರಿಗಣಿಸುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿತು. ಕೋವಿಡ್​ ಮುನ್ನೆಚ್ಚರಿಕೆ ಕ್ರಮಗಳನ್ನು ಸಮರ್ಪಕವಾಗಿ ಪಾಲಿಸಿ ಆಫ್​ಲೈನ್​ ವಿಧಾನದಲ್ಲೇ ಪರೀಕ್ಷೆಗಳನ್ನು ನಡೆಸಬಹುದೆಂದು ಹೇಳಿತು. (ಏಜೆನ್ಸೀಸ್)

    ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆರಗಿದ ಚಿರತೆ

    ಪ್ರಿಯಾಂಕ್ ಖರ್ಗೆ ಶಾಸ್ತ್ರ ಹೇಳೋರಾ? ಸಚಿವ ಬೈರತಿ ಬಸವರಾಜ ವ್ಯಂಗ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts