More

    ಕ್ಯಾತೆ ತೆಗೆದಿದ್ದ ನಿರ್ಭಯಾ ಅತ್ಯಾಚಾರ ಅಪರಾಧಿಯ ಬಾಯಿ ಮುಚ್ಚಿಸಿದ ಸುಪ್ರೀಂಕೋರ್ಟ್​; ಗಲ್ಲುಶಿಕ್ಷೆಗೆ ಸದ್ಯಕ್ಕಿಲ್ಲ ತಡೆ

    ನವದೆಹಲಿ: ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ದಿನ ಹತ್ತಿರ ಬರುತ್ತಿದ್ದಂತೆ ಅಪರಾಧಿಗಳಲ್ಲಿ ಓರ್ವನಾದ ಮುಕೇಶ್​ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿ, ಹೊಸದಾಗಿ ಕ್ಯೂರೇಟಿವ್​ ಮತ್ತು ಕ್ಷಮಾದಾನ ಅರ್ಜಿ ಸಲ್ಲಿಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದ.

    ಆದರೆ ಸುಪ್ರೀಂಕೋರ್ಟ್​ ಅರ್ಜಿಯನ್ನು ಇಂದು ತಿರಸ್ಕರಿಸಿದೆ. ಮತ್ತೊಮ್ಮೆ ಕ್ಯುರೇಟಿವ್​ ಮತ್ತು ಕ್ಷಮಾದಾನ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ ಎಂದು ಹೇಳಿದೆ. ಕಾನೂನು ಪ್ರಕ್ರಿಯೆಯ ವಿಚಾರದಲ್ಲಿ ನನ್ನ ಮಾಜಿ ವಕೀಲರಾದ ವೃಂದಾ ಗ್ರೋವರ್​ ಅವರು ದಾರಿ ತಪ್ಪಿಸಿದ್ದಾರೆ. ಸರಿಯಾದ ಮಾರ್ಗದರ್ಶನ ಮಾಡಲಿಲ್ಲ. ಹಾಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ನನಗೆ ಹೊಸದಾಗಿ ಕ್ಯುರೇಟಿವ್​ ಅರ್ಜಿ ಸಲ್ಲಿಸಲು, ರಾಷ್ಟ್ರಪತಿಗೆ ದಯಾ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ಮುಕೇಶ್​ ಸುಪ್ರೀಂಕೋರ್ಟ್​ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಒತ್ತಾಯಿಸಿದ್ದ.

    ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್​, ಇದು ಪ್ರಾಮುಖ್ಯವುಳ್ಳ ಅರ್ಜಿಯಲ್ಲ ಎಂದು ಹೇಳಿದೆ. ಕಾನೂನಿನ ಅನ್ವಯ ಮರಣದಂಡನೆ ಶಿಕ್ಷೆಯ ಮರುಪರಿಶೀಲನಾ ಅರ್ಜಿ ತಿರಸ್ಕಾರಗೊಂಡ ಮೂರುವರ್ಷದವರೆಗೆ ಕ್ಯುರೇಟಿವ್​ ಅರ್ಜಿ ಸಲ್ಲಿಸಲು ಅಪರಾಧಿಗೆ ಅವಕಾಶ ಇರುತ್ತದೆ. ಆದರೆ ಮುಕೇಶ್​ ತಮ್ಮ ಮಾಜಿ ವಕೀಲರಾದ ವೃಂದಾ ಇದನ್ನು ನನಗೆ ತಿಳಿಸಲಿಲ್ಲ. ಅವಸರದಿಂದ ಅರ್ಜಿ ಸಲ್ಲಿಸುವಂತೆ ಮಾಡಿದ್ದಾರೆ. ಹಾಗಾಗಿ ಹೊಸದಾಗಿ ಕಾನೂನು ಪ್ರಕ್ರಿಯೆ ನಡೆಸುತ್ತೇನೆ ಎಂದು ತಮ್ಮ ಈಗಿನ ವಕೀಲ ಎಂ.ಎಲ್​.ಶರ್ಮಾ ಮೂಲಕ ಸುಪ್ರೀಂಕೋರ್ಟ್​ಗೆ ಮನವಿ ಸಲ್ಲಿಸಿದ್ದರು.

    ಗಲ್ಲುಶಿಕ್ಷೆಯನ್ನು ಮರುಪರಿಶೀಲನೆ ಮಾಡುವಂತೆ ಮುಕೇಶ್ ಸಿಂಗ್​ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್​ 2018ರ ಜುಲೈನಲ್ಲಿ ತಿರಸ್ಕರಿಸಿತ್ತು. ಹಾಗಾಗಿ 2021ರ ಜುಲೈವರೆಗೂ ಕ್ಯುರೇಟಿವ್​ ಅರ್ಜಿ ಸಲ್ಲಿಸಲು ಅವಕಾಶ ಇದೆ ಎಂಬುದು ಆತನ ವಾದ. (ಏಜೆನ್ಸೀಸ್​)

     

    ನಿರ್ಭಯಾ ಅತ್ಯಾಚಾರ ಅಪಾಧಿಗಳ ಗಲ್ಲಿಗೆ ದಿನಗಣನೆ; 3 ದಿನ ಮೊದಲೇ ಹಾಜರಾಗಲು ಹ್ಯಾಂಗ್​ಮ್ಯಾನ್​ಗೆ ಸೂಚನೆ

    ಕೊರನಾ ಭೀತಿಯಿಂದ ಇಡೀ ಭಾರತಕ್ಕೆ ಬೀಗಮುದ್ರೆ ಬೀಳಲಿದೆಯಾ? ಕೇಂದ್ರ ಸರ್ಕಾರ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts