More

    ವೆಚ್ಚ ಕಡಿತಕ್ಕೆ ಮುಂದಾದ ಎಸ್​ಬಿಐ; ಸ್ವಯಂ ನಿವೃತ್ತಿ ಯೋಜನೆಗೆ ಚಿಂತನೆ; 30 ಸಾವಿರ ಸಿಬ್ಬಂದಿ ಲಿಸ್ಟ್​ ರೆಡಿ…!

    ನವದೆಹಲಿ: ವೆಚ್ಚ ಕಡಿತಕ್ಕೆ ಮುಂದಾಗಿರುವ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ (ಎಸ್​ಬಿಐ) ತನ್ನ ಸಿಬ್ಬಂದಿಗೆ ಸ್ವಯಂ ನಿವೃತ್ತಿ ಯೋಜನೆ (ವಿಆರ್​ಎಸ್​) ನೀಡಲು ಮುಂದಾಗಿದೆ. ಇದಕ್ಕೆ 30,190 ಜನರು ಅರ್ಹರಾಗಿದ್ದಾರೆ. 2020ರ ಮಾರ್ಚ್​ ಅವಧಿಗೆ ಬ್ಯಾಂಕ್​ 2.49 ಲಕ್ಷ ಸಿಬ್ಬಂದಿಯನ್ನು ಹೊಂದಿದೆ. ಕಳೆದ ವರ್ಷ ಈ ಸಂಖ್ಯೆ 2.57 ಲಕ್ಷ ಆಗಿತ್ತು.

    ಈಗಾಗಲೇ ವಿಆರ್​ಎಸ್​ ಯೋಜನೆಯ ರೂಪುರೇಷೆ ಸಿದ್ಧಪಡಿಸಲಾಗಿದ್ದು, ನಿರ್ದೇಶಕ ಮಂಡಳಿಯ ಅನುಮೋದನೆ ದೊರೆಯುದಷ್ಟೇ ಬಾಕಿಯಿದೆ ಎಂದು ತಿಳಿದುಬಂದಿದೆ. ಬ್ಯಾಂಕಿನ ಸಿಬ್ಬಂದಿ ಹಾಗೂ ವೆಚ್ಚ ಕಡಿತದ ಹಿನ್ನೆಲೆಯಲ್ಲಿ ಈ ಯೋಜನೆ ರೂಪಿಸಲಾಗಿದೆ.

    ಇದನ್ನೂ ಓದಿ; ವಿಷವಲ್ಲ…. ಭಾರಿ ವಿಷಕಾರಿ ಹಾವಿನ ಮರಿ ನುಂಗಿದ ಮಗು; ಬಾಯಿಂದ ಹೊರಗೆಳೆದ ತಾಯಿ; ಯಾರಿಗೇನಾಯ್ತ…? 

    ವೃತ್ತಿ ಕ್ಷೇತ್ರದಲ್ಲಿ ಈಗಾಗಲೇ ಅಂತಿಮ ಹಂತದಲ್ಲಿರುವ ಆದರೆ, ಸಮರ್ಥವಾಗಿ ಕಾರ್ಯನಿರ್ವಹಿಸಲಾಗದ ಸಿಬ್ಬಂದಿಗೆ, ವೈಯಕ್ತಿಕ ಕಾರಣಗಳಿಗಾಗಿ ಬ್ಯಾಂಕ್​ನಿಂದಾಚೆ ವೃತ್ತಿ ಹಾಗೂ ಖಾಸಗಿ ಬದುಕನ್ನು ಕಂಡುಕೊಳ್ಳಲು ಬಯಸುವ ವ್ಯಕ್ತಿಗಳಿಗೊಂದು ಅವಕಾಶ ಹಾಗೂ ಗೌರವಪೂರ್ವಕ ನಿರ್ಗಮನ ವ್ಯವಸ್ಥೆ ಇದಾಗಿದೆ ಎಂದು ಬ್ಯಾಂಕ್​ ಹೇಳಿದೆ.

    ಬ್ಯಾಂಕಿನಲ್ಲಿ 25 ವರ್ಷ ಸೇವೆ ಸಲ್ಲಿಸಿರುವ ಹಾಗೂ 55ರ ಪ್ರಾಯ ದಾಟಿರುವ ಸಿಬ್ಬಂದಿಗೆ ಈ ಯೋಜನೆ ಅನ್ವಯವಾಗಲಿದೆ. ಡಿಸೆಂಬರ್ 1ರಂದು ಆರಂಭವಾಗಿ ಫೆಬ್ರವರಿ ಅಂತ್ಯದವರೆಗೆ ಚಾಲ್ತಿಯಲ್ಲಿರಲಿದೆ. ಈ ಅವಧಿಯಲ್ಲಷ್ಟೇ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ.

    ಇದನ್ನೂ ಓದಿ; ಕರೊನಾ ಮರು ಸೋಂಕು; ತಿಂಗಳ ಬಳಿಕ ಮತ್ತೆ ಕೋವಿಡ್​; ಬೆಂಗಳೂರಿನಲ್ಲಿ ಪತ್ತೆಯಾಯ್ತು ಮೊದಲ ಪ್ರಕರಣ…! 

    ಈ ಮಾನದಂಡಗಳ ಅನುಸಾರ 11,565 ಅಧಿಕಾರಿಗಳು ಹಾಗೂ 18,625 ಸಿಬ್ಬಂದಿ ಸ್ವಯಂ ನಿವೃತ್ತಿ ಪಡೆಯಲು ಅರ್ಹರಾಗಿದ್ದಾರೆ ಎಂದು ಬ್ಯಾಂಕ್​ ಮಾಹಿತಿ ನೀಡಿದೆ. ಸಹಜವಾಗಿಯೇ ಬ್ಯಾಂಕ್​ ನೌಕರರ ಸಂಘಗಳ ವಿರೋಧವೂ ಇದಕ್ಕಿದೆ. ಕೋವಿಡ್​ ಕಾಲದಲ್ಲಿ ನೌಕರ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಟೀಕಿಸಿವೆ.

    ಇದೇ ವಾರ ಸಾರ್ವತ್ರಿಕ ಬಳಕೆಗೆ ಸಿಗಲಿದೆ ರಷ್ಯಾ ಲಸಿಕೆ; ಸ್ಪುಟ್ನಿಕ್​-ವಿಗೆ ಸಿಕ್ತು ಆರೋಗ್ಯ ಇಲಾಖೆ ಸಮ್ಮತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts