More

    ಸಾಲದ ಮೇಲಿನ ಕನಿಷ್ಠ ವೆಚ್ಚದ ದರ ಏರಿಸಿದ ಎಸ್‌ಬಿಐ: ಹೊಸ ಸಾಲದ ಬಡ್ಡಿ ದರ ಇಲ್ಲಿ ಪರಿಶೀಲಿಸಿ

    ನವದೆಹಲಿ: ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸಾಲದ ಮೇಲಿನ ಕನಿಷ್ಠ ವೆಚ್ಚದ ದರವನ್ನು (ಎಂಸಿಎಲ್‌ಆರ್) ಹತ್ತು ಬೇಸಿಸ್ ಪಾಯಿಂಟ್‌ಗಳಿಂದ (ಬಿಪಿಎಸ್) ಹೆಚ್ಚಿಸಿರುವುದಾಗಿ ಘೋಷಿಸಿದೆ. ಅವಧಿ ವಾರುಎಂಸಿಎಲ್‌ಆರ್ ಬಡ್ಡಿ ದರಗಳು 2022ರ ಏಪ್ರಿಲ್ 15ರಿಂದ ಜಾರಿಗೆ ಬರುತ್ತವೆ.

    ಇದನ್ನೂ ಓದಿ: ರಾಜ್ಯದ ಸ್ವಂತ ತೆರಿಗೆ ಆದಾಯದಲ್ಲಿ ಬೆಳವಣಿಗೆ; ಗ್ಯಾರಂಟಿ ಅನುಷ್ಠಾನಕ್ಕೆ ಶ್ಲಾಘನೆ
    ಈ ಹೆಚ್ಚಳದ ಪರಿಣಾಮವಾಗಿ ಮನೆ, ಆಟೋ ಮತ್ತಿತರ ಸಾಲಗಳ ಬಡ್ಡಿದರ ಹೆಚ್ಚಾಗುತ್ತದೆ. ಕಳೆದ ವಾರ ಬ್ಯಾಂಕ್ ಆಫ್ ಬರೋಡಾ 2022 ರ ಏಪ್ರಿಲ್ 12 ರಿಂದ ಅನ್ವಯವಾಗುವ ನಿಧಿ ಆಧಾರಿತ ಸಾಲದ ಬಡ್ಡಿದರಗಳ ಕನಿಷ್ಠ ವೆಚ್ಚದಲ್ಲಿ 0.05 ಪ್ರತಿಶತ ಏರಿಕೆಯನ್ನು ಘೋಷಿಸಿತ್ತು.

    ಎಂಸಿಎಲ್‌ಆರ್ ಎಂದರೇನು?: ಆರ್​ಬಿಐನ ಹೊಸ ಮಾರ್ಗಸೂಚಿಯ ಪ್ರಕಾರ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಆಧಾರಿತ ಲೆಂಡಿಂಗ್ ರೇಟ್ (ಎಂಸಿಎಲ್‌ಆರ್) ವಾಣಿಜ್ಯ ಬ್ಯಾಂಕ್‌ಗಳಿಗೆ ಸಾಲದ ದರಗಳನ್ನು ಹೊಂದಿಸಲು ಮೂಲ ದರವನ್ನು ಬದಲಾಯಿಸಿದೆ. ಎಂಸಿಎಲ್‌ಆರ್ ಅನ್ನು ನಿರ್ಧರಿಸುವಲ್ಲಿ ನಿಧಿಗಳ ಕನಿಷ್ಠ ವೆಚ್ಚವು ಪ್ರಮುಖ ಅಂಶವಾಗಿದೆ. ನಿಧಿಯ ಕನಿಷ್ಠ ವೆಚ್ಚದ ಮೇಲೆ ಪರಿಣಾಮ ಬೀರುವ ರೆಪೋ ದರದಂತಹ ಪ್ರಮುಖ ದರಗಳಲ್ಲಿನ ಯಾವುದೇ ಬದಲಾವಣೆಗಳು ಎಂಸಿಎಲ್‌ಆರ್ ಮೇಲೆ ಪರಿಣಾಮ ಬೀರುತ್ತವೆ. ಗೃಹ ಸಾಲದ ಮರುಹೊಂದಿಸುವ ದಿನಾಂಕ ಬಂದಾಗ ಎಂಸಿಎಲ್‌ಆರ್ ನಲ್ಲಿನ ಹೆಚ್ಚಳವು ಇಎಂಐ ಗಳಲ್ಲಿ ಸಮಾನ ಮಾಸಿಕ ಕಂತುಳಿಗೆ ಹೊಂದಿಸಲ್ಪಡುತ್ತದೆ.

    ಭಾರತೀಯ ರಿಸರ್ವ್ ಬ್ಯಾಂಕ್ 2022ರ ಏಪ್ರಿಲ್ 8 ರಂದು ನಡೆದ ಹಣಕಾಸು ನೀತಿ ಸಭೆಯಲ್ಲಿ ಬಡ್ಡಿ ದರಗಳನ್ನು ಯಥಾಸ್ಥಿತಿಯಲ್ಲಿ ಇರಿಸಿತ್ತು.

    ಕಣ್ವ ಸೌಹಾರ್ದ ಪತ್ತಿನ ಸಂಘದ ಅವ್ಯವಹಾರ;ಸಿಬಿಐ ತನಿಖೆಗೆ ನೀಡಲು ಸರ್ಕಾರದ ಚಿಂತನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts