More

    ಎಸ್​ಬಿಐ ಕ್ರೆಡಿಟ್ ಕಾರ್ಡ್​ದಾರರಿನ್ನು ‘ಗೂಗಲ್​’ನಲ್ಲೂ ‘ಪೇ’ ಮಾಡಬಹುದು..

    ನವದೆಹಲಿ: ಎಸ್​ಬಿಐ ಕ್ರೆಡಿಟ್​ ಕಾರ್ಡ್​ ಇರುವವರು ಇನ್ನುಮುಂದೆ ಗೂಗಲ್​ ಪೇ ಮೂಲಕವೂ ಹಣ ಪಾವತಿಸಬಹುದು. ಇಂಥದ್ದೊಂದು ಸೌಲಭ್ಯಕ್ಕಾಗಿ ಈಗ ಎಸ್​ಬಿಐ ಕಾರ್ಡ್ ಮತ್ತು ಗೂಗಲ್ ಪೇ ಮಧ್ಯೆ ಒಪ್ಪಂದ ಏರ್ಪಟ್ಟಿದೆ.

    ಎಸ್​​ಬಿಐ ಕ್ರೆಡಿಟ್​ ಕಾರ್ಡ್​ ಹೋಲ್ಡರ್ಸ್​ ಇದೀಗ ಗೂಗಲ್ ಪೇ ಮೂಲಕ ಮೂರು ರೀತಿಯಲ್ಲಿ ಹಣ ಪಾವತಿಸಬಹುದು. ಪಾಯಿಂಟ್​ ಆಫ್​ ಸೇಲ್ ಕೇಂದ್ರಗಳಲ್ಲಿ ಎನ್​​ಎಫ್​ಸಿ ಮೂಲಕ ಟ್ಯಾಪ್​ ಆ್ಯಂಡ್ ಪೇ ಅಥವಾ ಭಾರತ್ ಕ್ಯೂಆರ್ ಕೋಡ್​ ಸ್ಕ್ಯಾನ್​ ಅಥವಾ ಆನ್​ಲೈನ್​ ಮೂಲಕವೂ ಪೇ ಮಾಡಬಹುದು. ಇದಕ್ಕಾಗಿ ಕಾರ್ಡ್​ ಬಳಕೆದಾರರು ಗೂಗಲ್​ ಪೇನಲ್ಲಿ ಒನ್​ ಟೈಮ್ ರಿಜಿಸ್ಟ್ರೇಷನ್​ ಮಾಡಿಕೊಳ್ಳುವುದು ಅಗತ್ಯ.

    ದೇಶದಲ್ಲಿ ಸ್ಮಾರ್ಟ್​ಫೋನ್​ ಬಳಕೆ ಹೆಚ್ಚಿರುವುದರಿಂದ ಹಾಗೂ ಸುರಕ್ಷಿತ ಮತ್ತು ಡಿಜಿಟಲ್​ ಪೇಮೆಂಟ್​​ಗೆ ಉತ್ತೇಜನ ಕೊಡುವ ನಿಟ್ಟಿನಲ್ಲಿ ನಮ್ಮ ದೊಡ್ಡ ಗ್ರಾಹಕ ಬಳಗಕ್ಕೆ ಈ ಅವಕಾಶ ಒದಗಿಸಲಾಗಿದೆ ಎಂದು ಎಸ್​ಬಿಐ ಕಾರ್ಡ್​ ಸಿಇಒ ಮತ್ತು ಎಂಡಿ ಅಶ್ವಿನ್​ ಕುಮಾರ್ ತಿವಾರಿ ಹೇಳಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts