More

    ಮಹಿಳೆಯರಿಗೆ ಸಾವಿತ್ರಿಬಾಯಿ ಫುಲೆ ಮಾದರಿ

    ಶೃಂಗೇರಿ: ಮಹಿಳೆಯರಿಗೆ ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಸಮಾನತೆ ಹಕ್ಕಿಗಾಗಿ ನಿರಂತರ ಹೋರಾಟ ಮಾಡಿದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ. ಅವರು ಮಹಿಳೆಯರಿಗೆ ಮಾದರಿ ಎಂದು ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ ತಿಳಿಸಿದರು.

    ಕನ್ನಡ ಭವನದಲ್ಲಿ ಶುಕ್ರವಾರ ತಾಲೂಕು ಕಸಾಪ ಮಹಿಳಾ ಘಟಕ ಏರ್ಪಡಿಸಿದ್ದ ಸಾವಿತ್ರಿಬಾಯಿ ಫುಲೆ ಜಯಂತಿ ಅಂಗವಾಗಿ ಅಕ್ಷರದವ್ವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
    ಸಾವಿತ್ರಿಬಾಯಿ ಫುಲೆ ಬಾಲ್ಯ ವಿವಾಹ, ಸತಿಸಹಗಮನ ಪದ್ಧತಿ, ಮಹಿಳೆಯರ ಕೇಶಮುಂಡನೆ ವಿರುದ್ಧ ಹೋರಾಟ ಮಾಡಿದರು. ಮಹಿಳೆಯರಿಗೋಸ್ಕರ ಪ್ರಥಮವಾಗಿ ಶಾಲೆಗಳು, ಅಬಲಾಶ್ರಮ ಸ್ಥಾಪನೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಮಹಿಳೆಯರ ಅಭಿವೃದ್ಧಿಗಾಗಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದರು. ಬಡ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡಿ ಬದುಕನ್ನು ಸಾರ್ಥಕ್ಯಗೊಳಿಸಿದ್ದರು ಎಂದರು.
    ಕ್ಷೇತ್ರ ಶಿಕ್ಷಣಾಧಿಕಾರಿ ಭಾಗೀರಥಿ ಮಾತನಾಡಿ, ಮಹಿಳೆ ಸಬಲೆ ಎಂಬುದನ್ನು ಸಾಬೀತುಪಡಿಸಿದ್ದಾಳೆ. ಶೈಕ್ಷಣಿಕ ಕ್ಷೇತ್ರದಲ್ಲಿ ಮಹಿಳೆಯರಪಾಲು ಹೆಚ್ಚು ಎಂದು ಹೇಳಿದರು.
    ಶಿಕ್ಷಕಿಯರಾದ ಶೈಲಜಾ ನಾಗರಾಜ ಭಟ್ ಮತ್ತು ವಿಜಯಾ ರವಿ ಅವರಿಗೆ ಅಕ್ಷರದವ್ವ ಪ್ರಶಸ್ತಿ ಪ್ರದಾನ ಮಾಡಲಾಯಿತು.
    ದಿವಂಗತ ಗೌರಮ್ಮ ಹಾರ್ನಳ್ಳಿ ಮಂಜಪ್ಪ ದತ್ತಿ ಬಹುಮಾನಕ್ಕೆ ಆಯ್ಕೆಯಾದ ತಾಲೂಕಿನ ಶುಭಶ್ರೀ ಭಟ್ ಅವರನ್ನು ಗೌರವಿಸಲಾಯಿತು.
    ಕಸಾಪ ಮಾಜಿ ಅಧ್ಯಕ್ಷೆ ಶೈಲಜಾ ರತ್ನಾಕರ ಹೆಗ್ಡೆ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಲಾ ಆನಂದಸ್ವಾಮಿ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷೆ ಶೋಭಾ, ಶಾಂತಾ ಸುಬ್ರಹ್ಮಣ್ಯ, ಓಂಕಾರಸ್ವಾಮಿ, ಕಲಾ ರಮೇಶ್, ಮೈತ್ರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts