More

    ಬದುಕಿನ ಗುಣಮಟ್ಟ ಹೆಚ್ಚಿಸುವ ಶಿಕ್ಷಣ: ನಿವೃತ್ತ ಮುಖ್ಯಶಿಕ್ಷಕ ಪಿ.ರಾಮಮೂರ್ತಿ ಹೇಳಿಕೆ

    ಮಂಡ್ಯ: ಸವಿತಾ ಸಮಾಜದವರು ಕ್ಷೌರಿಕ ಅಥವಾ ವಾದ್ಯ ನುಡಿಸುವ ವೃತ್ತಿಯನ್ನಾದರು ಮಾಡಿ. ಆದರೆ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡುವುದನ್ನು ಮರೆಯಬೇಡಿ. ಶಿಕ್ಷಣ ಬದುಕಿನ ಗುಣಮಟ್ಟವನ್ನು ಹೆಚ್ಚಿಸುತ್ತದೆ ಎಂದು ನಿವೃತ್ತ ಮುಖ್ಯಶಿಕ್ಷಕ ಪಿ.ರಾಮಮೂರ್ತಿ ಸಲಹೆ ನೀಡಿದರು.
    ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ವತಿಯಿಂದ ಆಯೋಜಿಸಿದ್ದ ಸವಿತಾ ಮಹರ್ಷಿ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಸವಿತಾ ಸಮಾಜದಲ್ಲಿ ಜನಿಸಿದವರು ಕೇವಲ ಕ್ಷೌರಿಕ ವೃತ್ತಿಯಲ್ಲಿ ತೊಡಗದೇ ವಿದ್ಯಾವಂತರಾಗಿ ಬೇರೆ ವೃತ್ತಿಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
    ಸಮಾಜದಲ್ಲಿರುವ ಮೌಢ್ಯತೆಗಳನ್ನು ತೊಡೆದು ಹಾಕಲು ಸವಿತಾ ಮಹರ್ಷಿ ಶ್ರಮಿಸಿದ್ದರು. ಇಂಗ್ಲಿಷ್ ಔಷಧ ಬರುವುದಕ್ಕೂ ಮುನ್ನ ಸವಿತಾ ಸಮಾಜದವರು ವೈದ್ಯ ವೃತ್ತಿಯನ್ನು ಮಾಡುತ್ತಿದ್ದವರು. ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಜೀವನ ನಡೆಸಬೇಕು. ಸರ್ಕಾರ ರೂಪಿಸಿರುವ ಯೋಜನೆಗಳನ್ನು ಉಪಯೋಗಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
    ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಉದಯ್ಕುಮಾರ್, ಸವಿತಾ ಸಮುದಾಯದ ರವಿಕುಮಾರ್, ರಾಜಶೇಖರ, ಪುಟ್ಟರಾಜು, ಬಸವರಾಜು, ಚಿಕ್ಕಬೋರಪ್ಪ, ಮಂಡ್ಯ ಮೂರ್ತಿ, ಬಾಲು, ಜಗದೀಶ್, ಎಲ್.ಸಂದೇಶ್, ರಾಮಮೂರ್ತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts